Advertisement

“ಅಯೋಧ್ಯೆಯಲ್ಲಿ  ಶ್ರೀರಾಮ ಮಂದಿರ ನಿರ್ಮಾಣವಾಗಲಿ’

10:23 AM Nov 24, 2018 | |

ಮಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಹೋರಾಟದ ವಿವರವಿರುವ ನಿವೃತ್ತ ಪ್ರಾಧ್ಯಾಪಕ ಡಾ| ಪಿ. ಅನಂತಕೃಷ್ಣ ಭಟ್‌ ಬರೆದ “ಶ್ರೀರಾಮ ಜನ್ಮಭೂಮಿ’ (ಅವಿರತ ಹಿಂದೂ ಹೋರಾಟದ ವೀರಗಾಥೆ) ಪುಸ್ತಕ ಕದ್ರಿಯಲ್ಲಿರುವ ವಿಶ್ವಹಿಂದೂ ಪರಿಷತ್‌ ಕಚೇರಿ “ವಿಶ್ವಶ್ರೀ’ಯಲ್ಲಿ ಶುಕ್ರವಾರ ಬಿಡುಗಡೆ ಗೊಂಡಿತು.

Advertisement

ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಮಾತನಾಡಿ, ಅಯೋಧ್ಯೆಯ ರಾಮಜನ್ಮ
ಭೂಮಿಯಲ್ಲಿ ಶ್ರೀರಾಮನ ಪುತ್ರ ಕುಶ ಮಹಾರಾಜ ತನ್ನ ತಂದೆಗೆ ದೇವಸ್ಥಾನ ನಿರ್ಮಿಸಿದ್ದ. ವಿಕ್ರಮಾದಿತ್ಯನ ಕಾಲ
ದಲ್ಲಿ ಈ ದೇವಾಲಯ ನವೀಕರಣಗೊಂಡಿತ್ತು. 1528ರಲ್ಲಿ ಶ್ರೀರಾಮ ಮಂದಿರದ ಸ್ಥಳದಲ್ಲಿ ಮೂರು ಗುಂಬಜ್‌ಗಳನ್ನು ಕಟ್ಟಲಾಗಿತ್ತು. ಅಂದಿನಿಂದ ಶ್ರೀರಾಮ ಜನ್ಮಭೂಮಿ ಹೋರಾಟ ಆರಂಭಗೊಂಡಿತು. ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ಜೀರ್ಣೋದ್ಧಾರಗೊಳ್ಳುವ ಮೂಲಕ ಮತ್ತೆ ತಲೆ ಎತ್ತಬೇಕು ಎಂದರು.

77 ಬಾರಿ ಹೋರಾಟ; 80 ಮಂದಿ ಸಾವು
ಲೇಖಕ ಡಾ| ಅನಂತಕೃಷ್ಣ ಭಟ್‌ ಮಾತನಾಡಿ, ತ್ರೇತಾಯುಗದಿಂದ ಕಲಿಯುಗ ಪ್ರಥಮ ಪಾದವರೆಗೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಇತ್ತು. ಅನಂತರ ಅದು ಶಿಥಿಲಗೊಂಡಿತು. ಅಯೋಧ್ಯೆ ಮಂದಿರಕ್ಕಾಗಿ 77 ಬಾರಿ ಹೋರಾಟ ನಡೆದಿದೆ. 1992ರಲ್ಲಿ ಮೂರು ಗುಂಬಜ್‌ ಧ್ವಂಸವಾದ ವೇಳೆ 80 ಮಂದಿ ರಾಮಭಕ್ತರು ಸಾವಿಗೀಡಾಗಿದ್ದರು. ತಾತ್ಕಾಲಿಕ ಟೆಂಟ್‌ನಲ್ಲಿ ರಾಮನ ಮೂರ್ತಿಯನ್ನು ಇರಿಸಲಾಗಿದೆ. ಅಲ್ಲಿ ರಾಮನಿಗೆ ನಿತ್ಯವೂ ಪೂಜೆ ನಡೆಯುತ್ತಿದೆ. ಸ್ಥಳೀಯ ಮುಸ್ಲಿಮರಿಂದ ರಾಮಮಂದಿರಕ್ಕೆ ವಿರೋಧವಿಲ್ಲ. ಉತನನಗಳಲ್ಲೂ ಮಂದಿರದ ಕುರುಹು ಪತ್ತೆಯಾಗಿದೆ. ಅಲ್ಲಿ ಮಂದಿರ ಇತ್ತು ಎನ್ನುವುದನ್ನು ಲಕ್ನೋ ಹೈಕೋರ್ಟ್‌ ಕೂಡ ಹೇಳಿದೆ ಎಂದು ತಿಳಿಸಿದರು.

ಮಂದಿರ ನಿರ್ಮಾಣಕ್ಕೆ ಕೆತ್ತನೆ ಕೆಲಸ ಶೇ. 75ರಷ್ಟು ಪೂರ್ತಿಗೊಂಡಿದೆ. ಹೀಗಾಗಿ ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಬೇಕು. ಸುಪ್ರೀಂ ಕೋರ್ಟ್‌ ಮಂದಿರ ನಿರ್ಮಾಣ ಪರವಾಗಿ ತೀರ್ಪು ನೀಡಬೇಕು ಎಂಬುದು ನಮ್ಮ ಆಗ್ರಹ ಎಂದರು.

ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಪ್ರಮುಖರಾದ ಮನೋಹರ ತುಳಜಾರಾಂ, ಶಿವಾನಂದ ಮೆಂಡನ್‌, ಗೋಪಾಲ ಕುತ್ತಾರ್‌, ಭುಜಂಗ ಕುಲಾಲ್‌ ಉಪಸ್ಥಿತರಿದ್ದರು. ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಸ್ವಾಗತಿಸಿದರು.

Advertisement

ನಾಳೆ ಜನಾಗ್ರಹ ಸಮಾವೇಶ
ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ನ. 25ರಂದು ದೇಶಾದ್ಯಂತ ಜನಾಗ್ರಹ ಸಮಾವೇಶ ಆಯೋಜಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಭೆಯಲ್ಲಿ 50,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಧ್ಯಾಹ್ನ ಮಂಗಳೂರಿನ ಅಂಬೇಡ್ಕರ್‌ ವೃತ್ತದಿಂದ ಕೇಂದ್ರ ಮೈದಾನಕ್ಕೆ ಮೆರವಣಿಗೆ ನಡೆದು, ಸಂಜೆ 4.30ರಿಂದ ಕೇಂದ್ರ ಮೈದಾನದಲ್ಲಿ ಜನಾಗ್ರಹ ಸಮಾವೇಶ ನಡೆಯಲಿದೆ. ದ.ಕ. ಜಿಲ್ಲೆಯ ವಿವಿಧ ಕಡೆಗಳಿಂದ ಜನರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next