ಮತ್ತು ನೀತಿ ಅನುಷ್ಠಾನದಲ್ಲಿ (policy implementation) ಉತ್ಸಾಹಿ ಪ್ರತಿಭಾವಂತ ಯುವಕರ ಕೊಡುಗೆ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.
Advertisement
ಇಂಥ ಸಮರ್ಥ ಯುವ ನಾಯಕರನ್ನು ಮತ್ತು ನೀತಿ ಯೋಜನೆಯಲ್ಲಿ ಪ್ರತಿಭಾವಂತ ಅಭ್ಯರ್ಥಿಗಳನ್ನು ತಯಾರು ಮಾಡಲೆಂದೇವಿಷನ್ ಇಂಡಿಯಾ ಫೆಲೋಶಿಪ್ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಷನ್ ಇಂಡಿಯಾ ಫೌಂಡೇಶನ್ ಸಂಸ್ಥೆಯು ಈ ಕಾರ್ಯಕ್ರಮವನ್ನು ನಡೆಸುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ ಉತ್ಸಾಹಿ ಯುವಕರನ್ನು ಈ ಕಾರ್ಯಕ್ರಮದಲ್ಲಿ ಆಯ್ಕೆ ಮಾಡಿಕೊಂಡು ನಂತರ ಉತ್ತಮ ಗುಣಮಟ್ಟದ ತರಬೇತಿಯನ್ನು ಕೊಡುವುದರ ಮುಖಾಂತರ ಅವರನ್ನು ಪ್ರಭಾವಿ ನೀತಿ/ ಯೋಜನೆಗಳ ನಿರ್ಮಾಣಕ್ಕೆ ಸಜ್ಜುಗೊಳಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಪ್ರಸ್ತುತ ಲೋಕಸಭಾ/ ಜ್ಯಸಭಾ ಸದಸ್ಯರ ಜೊತೆಗೆ ಅಥವಾ ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ ಅಥವಾ ಇನ್ನಿತರೆ ಸಾರ್ವಜನಿಕ ರಂಗದಲ್ಲಿ ಚಾಲ್ತಿಯಲ್ಲಿರುವ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಜೊತೆಗೆ ಅಭ್ಯರ್ಥಿಗಳಿಗೆ ಸೂಕ್ತವಾದ ಕ್ಷೇತ್ರದಲ್ಲಿ ಸ್ವಂತ ಯೋಜನೆಗಳನ್ನು ಜಾರಿಗೊಳಿಸುವ ಅವಕಾಶಗಳನ್ನು ಕೂಡ ಒದಗಿಸಲಾಗುತ್ತದೆ. ಈಗಾಗಲೇ ಚಾಲ್ತಿಯಲ್ಲಿರುವ
ಯೋಜನೆಗಳಲ್ಲಿ ಅಭ್ಯರ್ಥಿಗಳು ಕೆಲಸ ಮಾಡುವುದರಿಂದ ಕಲಿಕಾ ಗುಣಮಟ್ಟ ಅತ್ಯುನ್ನತವಾಗಿರುತ್ತದೆ. ಜೊತೆಗೆ ಪ್ರಭಾವಿ ವ್ಯಕ್ತಿಗಳ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ಕೂಡ ಪಡೆಯುತ್ತಾರೆ.
ಜೊತೆಗೆ ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ಕೆಲಸ ಮಾಡಲು ಬೇಕಾದ ಸೂಕ್ತವಾದ ಕೌಶಲಗಳನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಒಂದು ಪ್ರಬಂಧವನ್ನು ಬರೆಯಬೇಕು (500-800 ಪದಗಳ ಮಿತಿಯಲ್ಲಿ). ಈ ಪ್ರಬಂಧದಲ್ಲಿ ಅಭ್ಯರ್ಥಿಗಳ ಹಿಂದಿನ
ಕೆಲಸದ ಅನುಭವ, ಫೆಲೋಶಿಪ್ ಆಯ್ದುಕೊಳ್ಳಲು ಕಾರಣ, ಮುಂದಿನ ಯೋಜನೆಗಳ ಬಗೆಗೆ ಉಲ್ಲೇಖವಿರಬೇಕು. ಜೊತೆಗೆ ಒಂದು ವೈಯಕ್ತಿಕ ವಿಡಿಯೋವನ್ನು ತಯಾರು ಮಾಡಿ ಕಳಿಸಬೇಕು. ಈ ವಿಡಿಯೋದಲ್ಲಿ ಅಭ್ಯರ್ಥಿಗಳು ತಮ್ಮ ಗುರಿ ಮತ್ತು ವಿಷನ್ ಬಗೆಗೆ ತಿಳಿಸಬೇಕು. ಪ್ರಬಂಧ ಹಾಗು ವಿಡಿಯೋ ಜೊತೆಗೆ ಅಭ್ಯರ್ಥಿಗಳು ತಮಗೆ ಗೊತ್ತಿರುವ ಇಬ್ಬರು ವ್ಯಕ್ತಿಗಳ ಮಾಹಿತಿಯನ್ನು ಒದಗಿಸಬೇಕು. ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಅವರ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ವ್ಯಕ್ತಿಗಳನ್ನು ಸಂಪರ್ಕಿಸಲಾಗುತ್ತದೆ. ಆನ್‌ಲೈನ್ ಅರ್ಜಿಗಳನ್ನು ಪರಿಶೀಲಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ಮುಂದಿನ ಹಂತದ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನವನ್ನು ಸ್ಕೈಪ್ (Skype) ಮಾಧ್ಯಮದ ಮುಖಾಂತರ ಅಥವಾ ವೈಯಕ್ತಿಕವಾಗಿ ನಡೆಸಬಹುದು. ಯಾವ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶವಿದೆ?
ಹಲವಾರು ರಂಗಗಳಲ್ಲಿ ಅಭ್ಯರ್ಥಿಗಳು ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಫೆಲೋಶಿಪ್ ಪ್ರಾರಂಭದಲ್ಲಿಯೇ
ಅಭ್ಯರ್ಥಿಗಳು ತಾವು ಕೆಲಸ ಮಾಡಲು ಇಚ್ಛಿಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ಒದಗಿಸಲು ಶಾಲೆಗಳ
ನಿರ್ಮಾಣ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಯನೀತಿ ರಚನೆ, ಭಾರತದ ಇತಿಹಾಸ, ರಾಜಕೀಯ ಸುಧಾರಣೆ, ದೇಶ
ನೀತಿ ಹಾಗು ದೇಶೀ ಸಂಬಂಧಗಳು, ಉತ್ತಮ ಆಡಳಿತ ಮತ್ತು ಸಂಸತ್ ಸದಸ್ಯರುಗಳಿಗೆ ಕಾರ್ಯನಿರ್ವಾಹಕ ಸಹಾಯಕರು ಇತ್ಯಾದಿ ಕ್ಷೇತ್ತಗಳಲ್ಲಿ/ಹುದ್ದೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಇದರ ಜೊತೆಗೆ ಸ್ವಂತ ಯೋಜನೆಗಳಲ್ಲಿ ಕೂಡ ಕೆಲಸ
ಮಾಡಬಹುದು. ಕೆಲಸದ ಜೊತೆಜೊತೆಗೆ ಅಭ್ಯರ್ಥಿಗಳು ರಿಸರ್ಚ್ ಅನ್ನು ಕೂಡ ಕೈಗೊಳ್ಳಬಹುದು. ಫೆಲೋಶಿಪ್ ಅವಧಿಯಲ್ಲಿ
ಪ್ರತಿಯೊಬ್ಬ ಅಭ್ಯರ್ಥಿಯು ಮಾಸಿಕ ರೂ. 40,000/- ವೇತನವನ್ನು ಪಡೆಯುತ್ತಾರೆ. ಫೆಲೋಶಿಪ್ ನಂತರ ಉನ್ನತ ವ್ಯಾಸಂಗವನ್ನು ಕೈಗೊಳ್ಳಬಹುದು ಅಥವಾ ಸಾರ್ವಜನಿಕ ನೀತಿ ರಚನೆ (public policy making) ಮತ್ತು ಅನುಷ್ಠಾನದಲ್ಲಿ ತಮ್ಮ ಭಷ್ಯವನ್ನು
ರೂಪಿಸಿಕೊಳ್ಳಬಹುದು. ರಾಷ್ಟ್ರನಿರ್ಮಾಣದಲ್ಲಿ ಈ ಫೆಲೋಶಿಪ್ ಕಾರ್ಯಕ್ರಮವು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಹೆಚ್ಚು ಹೆಚ್ಚು ಉತ್ಸಾಹಿ ಯುವಕರು ಈ ಫೆಲೋಶಿಪ್ ಲಾಭವನ್ನು ಪಡೆದುಕೊಂಡು ತಮ್ಮ ಉಜ್ವಲ ಭಷ್ಯವನ್ನು ರೂಪಿಸಿಕೊಳ್ಳಲಿ ಎಂದು ಆಶಿಸುತ್ತೇವೆ. ಹೆಚ್ಚಿನ ವರಗಳಿಗಾಗಿ ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿಕೊಡಿ: www.visionindiafoundation.com
Related Articles
Advertisement