ಹೈದರಾಬಾದ್: ಅಮೆರಿಕದಲ್ಲಿ ಶಿಕ್ಷಣ ಪಡೆಯಬೇಕು ಎಂಬ ಹಂಬಲ ಇರುವವರಿಗೆ ಹಾಲಿ ತಿಂಗಳ ಮಧ್ಯಭಾಗದಿಂದಲೇ ವೀಸಾ ಲಭ್ಯವಾಗಲಿದೆ. ಅದಕ್ಕಾಗಿ ಸಂದರ್ಶನಕ್ಕಾಗಿ ಸಮಯ ಕಾಯ್ದಿರಿಸಿ ಎಂದು ಹೈದರಾಬಾದ್‌ನಲ್ಲಿರುವ ಅಮೆರಿಕದ ದೂತಾವಾಸ ಕಚೇರಿಗೆ ಟ್ವೀಟ್‌ನಲ್ಲಿ ತಿಳಿಸಿದೆ.
ಶರದೃತುವಿನಲ್ಲಿಯೇ ಇನ್ನಷ್ಟು ವೀಸಾ ಸಂದರ್ಶನಗಳನ್ನು ನಿಗದಿಪಡಿಸಲಾ ಗುತ್ತದೆ ಎಂದೂ ಮಾಹಿತಿ ನೀಡಿದೆ. ಅಮೆರಿಕದ ವೀಸಾ ಸಂದರ್ಶನಕ್ಕಾಗಿ ಭಾರತೀಯ ವಿದ್ಯಾರ್ಥಿಗಳು, ಉದ್ಯೋಗಿಗಳು ದೀರ್ಘಕಾಲ ಕಾಯಬೇಕು ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿದ್ದವು.
ಆದರೆ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಅಮೆರಿಕ ಪರಿಸ್ಥಿತಿಯನ್ನು ಸುಗಮ ಮಾಡಿಕೊಟ್ಟಿದೆ.
ವೀಸಾ ಇಲ್ಲದೇ ಅಮೆರಿಕಕ್ಕೆ ಯಾನ: ಇನ್ನೊಂದು ವಿಶೇಷ ವಿಚಾರವೆಂದರೆ ವೀಸಾ ಇಲ್ಲದೇ 90 ಅಥವಾ ಅದಕ್ಕಿಂತ ಕಡಿಮೆ ದಿನಗಳು ಅಮೆರಿಕದಲ್ಲಿ ನೆಲೆಸಲಿಕ್ಕಾಗಿ ನಡೆಸುವ ಸಂದರ್ಶನಗಳನ್ನು ಈ ವರ್ಷಾಂತ್ಯದವರೆಗೆ ವಿಸ್ತರಿಸಲಾಗಿದೆ.
Related Articles