Advertisement

ವೈದ್ಯರಿಗೆ ವೀಸಾ, ರೋಗಿಗಳಿಗೆ ಏರ್‌ ಆ್ಯಂಬುಲೆನ್ಸ್‌: ಪ್ರಧಾನಿ ನರೇಂದ್ರ ಮೋದಿ

10:53 AM Feb 20, 2021 | Team Udayavani |

ನವದೆಹಲಿ: ಕೋವಿಡ್ ಅನ್ನು ಹಿಮ್ಮೆಟ್ಟಿಸುವಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳು ಹಾಗೂ ಹಿಂದೂ ಮಹಾ ಸಾಗರದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರಗಳು ಪರಸ್ಪರ ಕೈ ಜೋಡಿಸುವ ಮೂಲಕ ಒಂದು ಸೌಹಾರ್ದಯುತ ವೇದಿಕೆಯನ್ನು ನಿರ್ಮಾಣ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Advertisement

ಇದನ್ನೂ ಓದಿ:ಉಸಿರಾಟದ ಸಮಸ್ಯೆ: ಏಮ್ಸ್ ಗೆ ದಾಖಲಾದ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್

“ಕೋವಿಡ್‌ 19 ಮ್ಯಾನೇಜ್‌ಮೆಂಟ್‌: ಎಕ್ಸ್ ಪೆರಿಯನ್ಸ್‌, ಗುಡ್‌ ಪ್ರಾಕ್ಟೀಸಸ್‌ ಆ್ಯಂಡ್‌ ವೇ ಫಾರ್ವಾರ್ಡ್‌’ ಎಂಬ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೊರೊನಾ ನಿಗ್ರಹಕ್ಕೆ ಒಗ್ಗೂಡುವ ದಕ್ಷಿಣ ಏಷ್ಯಾದ ರಾಷ್ಟ್ರಗಳ ನಡುವೆ ವಿಶೇಷ ಒಪ್ಪಂದಗಳು ಏರ್ಪಡಬೇಕು.

ಒಂದು ದೇಶದ ವೈದ್ಯರು, ನರ್ಸ್‌ಗಳಿಗೆ ಮತ್ತೂಂದು ದೇಶಕ್ಕೆ ಆರೋಗ್ಯ ತುರ್ತು ಪರಿಸ್ಥಿತಿಗಳಲ್ಲಿ ಹೋಗಿ ಬರಲು ವಿಶೇಷ ವೀಸಾ ನೀಡುವ ಒಪ್ಪಂದ ರೂಪು ಗೊಳ್ಳಬೇಕು. ಅಲ್ಲದೆ, ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಒಂದು ದೇಶದಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೂಂದು ದೇಶಕ್ಕೆ ಸಾಗಿಸಲು ಏರ್‌
ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಉಂಟಾಗಬೇಕು ಎಂದು ಸಲಹೆ ನೀಡಿದರು.

ಇದಲ್ಲದೆ, ಕೋವಿಡ್ ನಿಗ್ರಹಿಸಲು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕ್ಷಿಪ್ರ ಗತಿಯಲ್ಲಿ ವ್ಯಾಕ್ಸಿನ್‌ ಗಳ ಪೂರೈಕೆಯಾಗಬೇಕಿದೆ. ಇದಕ್ಕೆ ಸೂಕ್ತವಾದ ಬೆಂಬಲ, ಸಹಕಾರ ಅತ್ಯಗತ್ಯ. ಎಲ್ಲರ ಸಹ ಕಾರವಿದ್ದರೆ ಈ ಕೆಲಸವನ್ನು ಅತ್ಯಂತ ಅಚ್ಚು ಕಟ್ಟಾಗಿ ಯಶಸ್ವಿಯಾಗಿ ನಿರ್ವಹಿಸಬಹುದು ಎಂದೂ ಅವರು ಅಭಿಪ್ರಾಯಪಟ್ಟರು. ಸಭೆಯಲ್ಲಿ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್‌, ಮಾಲ್ಡೀವ್ಸ್‌, ಮಾರಿಷಸ್‌, ನೇಪಾಳ, ಸೀಚೆಲ್ಸ್‌, ಶ್ರೀಲಂಕಾದ ಆರೋಗ್ಯ ಇಲಾಖೆಗಳ ಪ್ರತಿ ನಿಧಿಗಳು, ತಜ್ಞರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

Advertisement

ಪ್ರಧಾನಿಯವರ ಸಲಹೆಗೆ ಪಾಕ್‌ ಸ್ವಾಗತ
ಕೋವಿಡ್ ಅನ್ನು ನಿಗ್ರಹಿಸಲು ದಕ್ಷಿಣ ಏಷ್ಯಾದ ರಾಷ್ಟ್ರಗಳ ನಡುವೆ ವೈದ್ಯರು, ಶುಶ್ರೂಷಕಿಯರಿಗೆ ವಿಶೇಷ ವೀಸಾ ನೀಡುವುದು ಹಾಗೂ ಏರ್‌ ಆ್ಯಂಬುಲೆನ್ಸ್‌ಗಳನ್ನು
ಒದಗಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಪ್ರಸ್ತಾವನೆಯನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಸದಸ್ಯರು ಮುಕ್ತಕಂಠದಿಂದ ಶ್ಲಾ ಘಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನ ಮಾತ್ರವಲ್ಲದೆ, ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ರಾಷ್ಟ್ರಗಳು ಈ ಸಲಹೆಯನ್ನು ಸ್ವೀಕರಿಸಿವೆ. ಈ ಸಲಹೆಗಳನ್ನು ತಮ್ಮ ಸರ್ಕಾರಗಳಿಗೆ ಮುಟ್ಟಿಸಿ, ಅಲ್ಲಿಂದ ಸಕಾರಾತ್ಮಕ ಪ್ರತಿಸ್ಪಂದನೆ ಪಡೆಯುವ ವಿಶ್ವಾಸವನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶಗಳ ಸದಸ್ಯರು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಕೋವಿಡ್ ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಸಲಹೆ
*ದಕ್ಷಿಣ ಏಷ್ಯಾದ 10 ರಾಷ್ಟ್ರಗಳ ನಡುವೆ‌ ಸೌಹಾರ್ದತೆ ಹಾಗೂ ಪರಸ್ಪರ ಸಹಕಾರ ಇರಲಿ
* ರಾಷ್ಟ್ರಗಳ ನಡುವೆ ಸೌಹಾರ್ದಯುತ ವೇದಿಕೆ ನಿರ್ಮಾಣಕ್ಕೆ ಕರೆ
*ಕ್ಷಿಪ್ರಗತಿಯಲ್ಲಿ ಲಸಿಕೆಗಳನ್ನು ತಲುಪಿಸುವ ಬಗ್ಗೆಯೂ ಪ್ರಧಾನಿ ಮೋದಿ ಮಾತು

Advertisement

Udayavani is now on Telegram. Click here to join our channel and stay updated with the latest news.

Next