Advertisement
ಜಗತ್ತನ್ನೇ ಕಂಗೆಡಿಸಿದ್ದ ಕೋವಿಡ್ ಸಾಂಕ್ರಾಮಿಕದ ಬಳಿಕ ಜಗತ್ತು, ಮತ್ತೂಂದು ಸಾಂಕ್ರಾಮಿಕ ಕಾಯಿಲೆಯ ಭೀತಿಯಲ್ಲಿದೆ. ಕಾಂಗೋ, ಬುರುಂಡಿ, ರವಾಂಡ, ಕೀನ್ಯಾ, ಉಗಾಂಡ ಸೇರಿದಂತೆ ಆಫ್ರಿಕಾ ಖಂಡದಲ್ಲಿ ಮರಣ ಮೃದಂಗ ಬಾರಿಸಿದ್ದ “ಮಂಗನ ಸಿಡುಬು'(ಮಂಕಿಪಾಕ್ಸ್ ಅಥವಾ ಎಂಪಾಕ್ಸ್) ಇದೀಗ ಯುರೋಪ್ ಮತ್ತು ನಮ್ಮ ನೆರೆ ರಾಷ್ಟ್ರ ಪಾಕಿಸ್ಥಾನಕ್ಕೂ ತಲುಪಿದೆ.
ಮಂಕಿಪಾಕ್ಸ್ ಎಂದು ಕರೆಯಲಾಗುವ ವೈರಾಣುವಿನಿಂದ ಸೋಂಕು ಹರಡುತ್ತದೆ. ಮೊದಲಿಗೆ ಈ ಕಾಯಿಲೆಗಳನ್ನು ಮಂಗಗಳಲ್ಲಿ ಗುರುತಿಸಿದ ಕಾರಣ ಈ ಕಾಯಿಲೆಗೆ ಮಂಕಿಪಾಕ್ಸ್ ಎಂಬ ಹೆಸರನ್ನು ಇಡಲಾಗಿತ್ತು. ಆದರೆ ಸಂಶೋಧನೆ ಮುಂದುವರಿದಂತೆ ಇದು ಇಲಿಯಿಂದಲೂ ಹರಡುತ್ತದೆ ಎಂದು ತಿಳಿದುಬಂದ ಕಾರಣ, 2022ರಲ್ಲಿ ಈ ಸೋಂಕಿನ ಹೆಸರನ್ನು ವಿಶ್ವ ಆರೋಗ್ಯ ಸಂಸ್ಥೆಯು “ಎಂಪಾಕ್ಸ್’ ಎಂದು ಬದಲಿಸಿತು. ಸದ್ಯ ಈ ಸೋಂಕು ಕೇವಲ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದಲ್ಲದೇ, ಮನುಷ್ಯರಿಂದ ಮನುಷ್ಯರ ನಡುವಿನ ನೇರ ಸಂಪರ್ಕದಿಂದಲೂ ಹರಡುತ್ತದೆ.
Related Articles
1958ರಲ್ಲಿ ಈ ವೈರಸ್ ಅನ್ನು ಮೊಟ್ಟ ಮೊದಲ ಬಾರಿಗೆ ಡೆನ್ಮಾರ್ಕ್‌ನ ಸಂಶೋಧಕರು ಪ್ರಯೋಗಾಲಯಗಳಲ್ಲಿ ಸಂಶೋಧನೆಗೆ ಒಳಪಡಿಸಿದ ಕೋತಿಗಳಲ್ಲಿ ಗುರುತಿಸಿ ದರು. 1970ರಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ಸೋಂಕು ಕಂಡು ಬಂತು. ಆಫ್ರಿಕಾದ ಝೈರೆಯ (ಇಂದಿನ ಕಾಂಗೋ) 9 ತಿಂಗಳ ಮಗುವಿಗೆ ಈ ಸೋಂಕು ತಗಲಿತ್ತು.
Advertisement
ಅಂದಿನಿಂದ ಇಂದಿನವರೆಗೂ ಆಫ್ರಿಕಾದಲ್ಲಿ ಈ ರೋಗ ಉಲ್ಬಣಗೊಳ್ಳುತ್ತಲೇ ಬಂದಿದ್ದರೂ ಆಫ್ರಿಕಾದಿಂದ ಹೊರ ಜಗತ್ತು ಪ್ರವೇಶಿಸದ ಕಾರಣ ಈ ರೋಗದ ಕುರಿತು ಜಗತ್ತು ನಿರ್ಲಕ್ಷ್ಯ ತಾಳಿತ್ತು. ಆದರೆ 2003ರಲ್ಲಿ ಘಾನಾ ರಾಷ್ಟ್ರದಿಂದ ಅಮೆರಿಕಕ್ಕೆ ಆಮದು ಮಾಡಿ ಕೊಳ್ಳ ಲಾಗಿದ್ದ ಸಾಕು ಪ್ರಾಣಿಯೊಂದರಲ್ಲಿ ಎಂಪಾಕ್ಸ್ ಕಂಡುಬಂತು. 2022ರಲ್ಲಿ ಮತ್ತೂಮ್ಮೆ ಹೊರ ಜಗತ್ತನ್ನು ಪ್ರವೇಶಿಸಿದ ಎಂಪಾಕ್ಸ್‌ನ ಕ್ಲೇಡ್ -2 ತಳಿಯು ಭಾರತವು ಸೇರಿದಂತೆ 100ಕ್ಕೂ ಅಧಿಕ ರಾಷ್ಟ್ರಗಳನ್ನು ತಲ್ಲಣಗೊಳಿಸಿತ್ತು.
ಆಫ್ರಿಕಾದಿಂದ ಹೊರಗೆ ಮೊಟ್ಟ ಮೊದಲ ಬಾರಿಗೆ ಮನುಷ್ಯರ ನಡುವಿನ ಸಂಪರ್ಕದ ಮೂಲಕ ಈ ರೋಗವು ಹರಡುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯು ಅಂದು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಎಚ್ಚರಿಕೆಯ ಗಂಟೆ ಬಾರಿಸಿತ್ತು.
ಭಾರತಕ್ಕೂ ಕಾಡಿತ್ತು ಎಂಪಾಕ್ಸ್!ಭಾರತದ ಮೊದಲ ಎಂಪಾಕ್ಸ್ ಸೋಂಕು 2022ರಲ್ಲಿ ದುಬಾೖಯಿಂದ ಭಾರತಕ್ಕೆ ಆಗಮಿಸಿದ ಕೇರಳದ ವ್ಯಕ್ತಿಯೊಬ್ಬರಲ್ಲಿ ಕಂಡು ಬಂದಿತ್ತು. ಬಳಿಕ ದಿಲ್ಲಿಯಲ್ಲಿ ಯಾವುದೇ ವಿದೇಶ ಪ್ರಯಾಣದ ಹಿನ್ನೆಲೆಯಿಲ್ಲದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಅನಂತರ 2024ರ ಮಾರ್ಚ್‌ನಲ್ಲಿ ಭಾರತದ ಕೊನೆಯ ಎಂಪಾಕ್ಸ್ ಕ್ಲೇಡ್-2 ತಳಿ ಪ್ರಕರಣ ದಾಖಲಾಗಿದ್ದು, ಆಗ ಒಟ್ಟಾರೆ 30 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈಗ ಮಾರ ಣಾಂತಿಕ ಎನಿಸಿರುವ ಎಂಪಾಕ್ಸ್ ಕ್ಲೇಡ್-1 ಬಿ ಪ್ರಕರಣಗಳು ಇದುವರೆಗೆ ಭಾರತದಲ್ಲಿ ಪತ್ತೆಯಾಗಿಲ್ಲ. ಹಾಗಿದ್ದರೂ ಭಾರತ ಸರಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪಕ್ಕದ ಪಾಕಿಸ್ಥಾನದಲ್ಲೇ ಈ ಸೋಂಕು ಪತ್ತೆಯಾಗಿದ್ದರಿಂದ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಸಂಭಾವ್ಯ ಎಂಪಾಕ್ಸ್ ಪರೀಕ್ಷೆಗಾಗಿ 32 ಪ್ರಯೋಗಾಲಯಗಳನ್ನು ಕೇಂದ್ರ ಆರೋಗ್ಯ ಇಲಾಖೆ ಸ್ಥಾಪಿಸಿದೆ. ಹಿಂದುಳಿದ ರಾಷ್ಟ್ರಗಳಲ್ಲೇ ಹೆಚ್ಚು!
ಎಂಪಾಕ್ಸ್ ಹೆಚ್ಚಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ಕಂಡುಬರು ತ್ತಿದೆ. ಅದರಲ್ಲೂ ಆಫ್ರಿಕಾದ ಬಹುತೇಕ ರಾಷ್ಟ್ರಗಳಲ್ಲಿ ಈ ಸೋಂಕು ತನ್ನ ಕರಾಮತ್ತು ತೋರಿಸುತ್ತಿದೆ. ಎಂಪಾಕ್ಸ್ ಆಫ್ರಿಕಾದಲ್ಲಿ ಮಾತ್ರ ಕಂಡು ಬರಲು ಭೌಗೋಳಿಕ ಮತ್ತು ಪ್ರಾಕೃತಿಕ ಲಕ್ಷಣಗಳಷ್ಟೇ ಅಲ್ಲದೇ ಇಲ್ಲಿನ ಆಹಾರ ಪದ್ಧತಿ ಯಲ್ಲಿ ಅಡಕವಾಗಿರುವ ವನ್ಯ ಪ್ರಾಣಿಗಳ ಬೇಟೆ ಮತ್ತು ಮಾಂಸ ಭಕ್ಷಣೆ, ಕಾಯಿಲೆಯ ಕುರಿತ ಮೂಢನಂಬಿಕೆ ಗಳು ಮತ್ತು ಸೂಕ್ತ ಶಿಕ್ಷಣ ಮತ್ತು ವೈದ್ಯಕೀಯವೂ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯೂ ಕಾರಣವಾಗಿರಬಹುದು ಎನ್ನುತ್ತಾರೆ ತಜ್ಞರು. ಮಂಗನ ಕಾಯಿಲೆ, ಮಂಗನ ಸಿಡುಬು ಎರಡೂ ಒಂದೇ ಅಲ್ಲ
ಬಹಳಷ್ಟು ಜನರು ಕರ್ನಾಟಕದ ಮಲೆನಾಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುವ ಮಂಗನ ಕಾಯಿಲೆ ( ಕೆಎಫ್ಡಿ) ಮತ್ತು ಎಂಪಾಕ್ಸ್Õ ಸೋಂಕು ಒಂದೇ ಎಂದು ಭಾವಿಸಿದ್ದಾರೆ. ಆದರೆ ಕೆಎಫ್ಡಿಯು ಫ್ಲಾವಿವೈರಿಡೇ ಎಂಬ ಕುಟುಂಬಕ್ಕೆ ಸೇರಿದ್ದರೆ, ಮಂಕಿಪಾಕ್ಸ್ ವೈರಸ್ ಪೋಕ್ಸ್ ವೈರಿಡೇ ಕುಟುಂಬಕ್ಕೆ ಸೇರಿವೆ. ಈ ಮೂಲಕ ಈ ಎರಡೂ ರೋಗಗಳ ಮೂಲ ವೈರಾಣುಗಳು ವೈಜ್ಞಾನಿಕವಾಗಿ ವಿಭಿನ್ನವಾಗಿವೆ.
ಪ್ರಾಣಿಗಳಿಂದ…
ಸೋಂಕಿತ ಪ್ರಾಣಿಗಳು ಕಚ್ಚುವುದು ಮತ್ತು ಪರಚುವುದರಿಂದ
ಸೋಂಕಿತ ಪ್ರಾಣಿಗಳ ಜೊಲ್ಲು, ಗಾಯಗಳ ನೇರ ಸಂಪರ್ಕದಿಂದ
ಸೋಂಕಿತ ಪ್ರಾಣಿಗಳ ಆರೈಕೆ ನಡೆಸುವಾಗ ಪಸರಿಸುವ ಸಾಧ್ಯತೆ
ಪ್ರಾಣಿಗಳ ಮಾಂಸ ಮಾರಾಟ, ಸಂಸ್ಕರಣೆ ಮತ್ತು ಸೇವನೆ ಮನುಷ್ಯರಿಂದ…
ಸೋಂಕಿತ ವ್ಯಕ್ತಿ ಜತೆಗೆ ಆರೋಗ್ಯ ವಂತ ವ್ಯಕ್ತಿ ಲೈಂಗಿಕ ಸಂಪರ್ಕ
ಚುಂಬನ ಮೂಲಕ ಮತ್ತು ಹೆಚ್ಚು ಹೊತ್ತು ಮುಖಾಮುಖೀ ಸಂಭಾಷಣೆ
ಚರ್ಮ, ಗಾಯ ಸೇರಿದಂತೆ ದೇಹ ದ್ರವಗಳ ನಡುವಿನ ನೇರ ಸಂಪರ್ಕ
ಸೋಂಕಿತರು ಬಳಸಿದ ವಸ್ತುಗಳನ್ನು ಬಳಸುವುದು, ಸಂಪರ್ಕಕ್ಕೆ ಬರುವುದು ಈ ಸೋಂಕಿನ ಲಕ್ಷಣಗಳೇನು? ತುರಿಕೆ, ಜ್ವರ, ತಲೆನೋವು, ಸ್ನಾಯು ಸೆಳೆತ, ಗಂಟಲು ಬೇನೆ, ಬೆನ್ನು ನೋವು, ನಿಶ್ಯಕ್ತಿ, ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು. ಚರ್ಮದಲ್ಲಿ ಅಸಾಧ್ಯ ತುರಿಕೆ ಮತ್ತು ನೋವು, ನೀರು ತುಂಬಿದ ಗುಳ್ಳೆಗಳು. ಸೋಂಕಿತರಲ್ಲಿ ಈ ರೋಗದ ಮೊದಲ ಲಕ್ಷಣ ಕಂಡು ಬರಲು 3ರಿಂದ 21 ದಿನಗಳು ತೆಗೆದುಕೊಳ್ಳುತ್ತದೆ ಮತ್ತು ರೋಗವು 2-4 ವಾರಗಳ ಕಾಲ ಭಾದಿಸುತ್ತದೆ. ಸೋಂಕು ಯಾರಲ್ಲಿ ಹೆಚ್ಚು ಕಂಡುಬರುತ್ತದೆ ?
ಹಸುಗೂಸುಗಳು, ಚಿಕ್ಕ ಮಕ್ಕಳು, ಗರ್ಭಿಣಿಯರು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ರೋಗ ಭಾದಿಸುವ ಸಾಧ್ಯತೆ ಹೆಚ್ಚು. ಸೋಂಕಿತರು ಏನು ಮಾಡಬೇಕು ?
1. ಸೋಂಕಿತರು ಗುಣಮುಖರಾಗುವವರೆಗೂ ಸಾರ್ವಜನಿಕರು ಮತ್ತು ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಬೇಕು.
2. ಮಾನಸಿಕ ಒತ್ತಡದಿಂದ ಮುಕ್ತವಾಗಿರಲು ಮನೋರಂಜನೆಗೆ ಪುಸ್ತಕ, ಟಿವಿ ಇತ್ಯಾದಿಗಳ ಬಳಕೆ ಮಾಡಬೇಕು.
3. ಕೋಣೆಯು ಗಾಳಿಯಾಡುವಂತಿರಬೇಕು. ಚರ್ಮದಲ್ಲಿ ಸೃಷ್ಟಿಯಾಗಿರುವ ಗುಳ್ಳೆಗಳನ್ನು ಕೆರೆದು ಒಡೆಯಬಾರದು.
4. ಪ್ರತ್ಯೇಕ ವೈಯಕ್ತಿಕ ಶೌಚಾಲಯ, ಟವೆಲ್, ಹಾಸಿಗೆ, ದಿಂಬು, ಪುಸ್ತಕ, ಕನ್ನಡಕ, ವಸ್ತ್ರ, ಪಾತ್ರೆ ಸೇರಿದಂತೆ ಪ್ರತ್ಯೇಕ ವಸ್ತುಗಳ ಬಳಕೆ.
5. ಸೋಂಕಿತರ ವಸ್ತ್ರಗಳನ್ನು ಬಿಸಿ ನೀರಿನಿಂದ ಸ್ವತ್ಛಗೊಳಿಸಬೇಕು. ಸಿಡುಬಿಗೆ ನೀಡುತ್ತಿದ್ದ ಮದ್ದೇ ಎಂಪಾಕ್ಸ್‌ಗೆ ಸದ್ಯದ ಮದ್ದು!
ಎಂಪಾಕ್ಸ್‌ಗೆ ಪ್ರತ್ಯೇಕ ಮದ್ದಿಲ್ಲ. ಆದರೆ ಸಿಡುಬಿನ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದ್ದ ಟೆಕೋವಿರಿಮಟ್ ಎಂಬ ಆ್ಯಂಟಿ ವೈರಲ್ ಅನಿವಾರ್ಯ ಸಂದರ್ಭಗಳಲ್ಲಿ ಎಂಪಾಕ್ಸ್ ಚಿಕಿತ್ಸೆಗೆ ಬಳಸಲಾಗುತ್ತಿದೆ. ಸದ್ಯ ಸಾಮೂಹಿಕ ವ್ಯಾಕ್ಸೀನ್ ಪ್ರಕ್ರಿಯೆಗೆ ಅನುಮತಿ ದೊರೆಯದಿದ್ದರೂ ಅತೀ ಹೆಚ್ಚು ರೋಗ ಬಾಧಿತರಾದವರಿಗೆ ಮಾತ್ರ ಎಂಪಾಕ್ಸ್ ವಿರುದ್ಧ ರಕ್ಷಣೆ ನೀಡಬಲ್ಲ ಎಂವಿಎ-ಬಿಎನ್, ಎಲ್‌ಸಿ-16 ಅಥವಾ ಎಸಿಎಎಂ 2000 ವ್ಯಾಕ್ಸೀನ್ ಬಳಕೆಗೆ ಡಬ್ಲ್ಯುಎಚ್‌ಒ ಸೂಚಿಸಿದೆ. – ಅನುರಾಗ್ ಗೌಡ ಬಿ. ಆರ್.