ಕೈಗಾರಿಕಾ ವಾಸ್ತು ವಾಸ್ತವದ ಬಗ್ಗೆ ಅನೇಕ ವಿಚಾರಗಳಿವೆ. ತಿಳಿದಷ್ಟೂ ಮತ್ತಷ್ಟು ಕಾಣಸಿಗುತ್ತದೆ. ಕೈಗಾರಿಕ ನಿವೇಶನದಲ್ಲಿ ಕೈಗಾರಿಕೆಯ ಜೀವಸತ್ವಾದ ನೀರಿನ ನೆಲೆ ಆಗ್ನೇಯ ದಿಕ್ಕಿನಲ್ಲಿ ಇರಲೇಬಾರದು. ಹಲವು ಸಲ ಜಾಗ ಇದ್ದಲ್ಲಿ ಏನನ್ನೋ ರೂಪಿಸಿಕೊಳ್ಳುವುದು ಎಂಬು ಭಾವನೆ ಇರುತ್ತದೆ. ಕೈಗಾರಿಕೆಗಳ ಶಕ್ತಿ ಅಗ್ನಿ ಭಾವದ ಮೂಲಕ ಒಂದು ಸಿದ್ದಿಯನ್ನು ತಲುಪಬೇಕು. ಇದು ಶಕ್ತಿಯ ರೂಪದಲ್ಲಿ, ಕಾವಿನ ರೂಪದಲ್ಲಿ ವ್ಯಕ್ತಗೊಳ್ಳುವ ಅಂಶ. ಕೈಗಾರಿಕೆಗಳಲ್ಲಿ ಸಿದ್ಧ ಪಡಿಸಬೇಕಾದ ಸರಕುಗಳು ವಿಧವಿವಿಧ ಹಂತಗಳಿಂದ ಪೂರ್ಣ ಪ್ರಮಾಣದ ರೂಪ ಪಡೆಯುವ ಭಾಗ ದಕ್ಷಿಣದಿಂದ ಉತ್ತರ ಭಾಗವನ್ನು ವ್ಯಾಪಿಸಿರಬೇಕು ಅಥವಾ ಪಶ್ಚಿಮದಿಂದ ಪೂರ್ವ ಭಾಗವನ್ನು ವ್ಯಾಪಿಸಬೇಕು. ಮೂಲ ಉದ್ದೇಶ ಇಷ್ಟೇ. ಯಾವುದು ನಾಶವನ್ನೋ, ಕತ್ತಲನನ್ನೋ, ಕತ್ತಲನ್ನೋ ಪ್ರಿತಿನಿಧಿಸುತ್ತದೆಯೋ ಅಲ್ಲಿಂದಲೇ ಪುನರುತ್ಥಾನಗಳಿಗೆ ದಾರಿ ಸಿಗಬೇಕು.
ದಕ್ಷಿಣ ದಿಕ್ಕು ಯಮರಾಯನ ದಿಕ್ಕು, ಪಶ್ಚಿಮ ದಿಕ್ಕು ಸೂರ್ಯ ಮುಳುಗುವ ದಿಕ್ಕು ಎಂಬುದಾಗಿ ನಾವು ತಿಳಿದಿದ್ದೇವೆ. ಹೀಗಾಗಿ ಈ ದಿಕ್ಕುಗಳಿಂದ ಊರ್ಜಿತಗಳನ್ನು ಬದುಕಿನಲ್ಲಿ ನಾವು ಕಂಡುಕೊಳ್ಳುವ ಬಗೆ ಹುಡುಕಬೇಕು. ಜಾತಸ್ಯ ಮರಣಂ ಧ್ರುವಂ. ಹುಟ್ಟಿದವನಿಗೆ ಮರಣ ಇದ್ದಿದ್ದೇ. ಆದರೆ ಈ ಜನ್ಮದ ಕರ್ಮ ವಿಶೇಷವನ್ನು ಸಾತ್ವಿಕದ ನೆಲೆಯಲ್ಲಿ ಸಂವರ್ಧಿಸಿಕೊಂಡು ಮುಂದಿನ ನಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಇದು ಸಿದ್ಧಾಂತ. ಇದೇ ಸಿದ್ಧಾಂತ ಕೈಗಾರಿಕೆಗಳ ವಿಚಾರದ ಸಿದ್ಧ ಪಡಿಸಬೇಕಾದ ಸರಕುಗಳು ದಕ್ಷಿಣದಿಂದ ಉತ್ತರ ಭಾಗವನ್ನು ವ್ಯಾಪಿಸಿಕೊಂಡಾಗ ಮೂಲ ಘಟಕಗಳಿಂದ ಸಿದ್ಧ ಪಡಿಸಿದ ರೂಪಕ್ಕೆ ಪರಿವರ್ತನಗೊಳ್ಳುವ ಘಟಕ ಸಾರ್ಥಕತೆ ಪಡೆಯುತ್ತದೆ. ಇದೇ ವಿಚಾರ ಪಶ್ಚಿಮದಿಂದ ಪೂರ್ವಕ್ಕೆ ವ್ಯಾಪಿಸಿಕೊಳ್ಳಬೇಕು ಎಂಬು ವಿಚಾರ ಕೂಡ. ಮುಳುಗಿದ ಸೂರ್ಯ ಮತ್ತೆ ಪೂರ್ವದಲ್ಲಿ ನವ ಅರುಣೋದಯಕ್ಕೆ ಕಾಲಿಡುತ್ತಾನೆ. ಬೆಳಕಿನ ಬೀಜ ವಿಸ್ತರಿಸಿ ಚಿಗುರುತ್ತದೆ. ಸರಕುಗಳು ಪಶ್ಚಿಮದಿಂದ ಪೂರ್ವಕ್ಕೆ ವ್ಯಾಪಿಸಿಕೊಳ್ಳಬೇಕು ಎಂಬ ವಿಚಾರ ಕೂಡ. ಮುಳುಗಿದ ಸೂರ್ಯ ಮತ್ತೆ ಪೂರ್ವದಲ್ಲಿ ನವ ಅರುಣೋದಯಕ್ಕೆ ಕಾಲಿಡುತ್ತಾನೆ. ಬೆಳಕಿನ ಬೀಜ ವಿಸ್ತರಿಸಿ ಚಿಗುರುತ್ತದೆ. ಸರಕುಗಳು ಪಶ್ಚಿಮದಿಂದ ಪೂರ್ವಕ್ಕೆ ಸಾಗಿ ಸಿದ್ಧಪಡಿಸಿದ ಪೂರ್ಣ ಪ್ರಮಾಣನಾಗಬೇಕು ಎಂಬುದೂ ಇದೇ ಕಾರಣದಿಂದ. ಹೀಗಾಗಿ ಕೈಗಾರಿಕಾ ಜಾಗದಲ್ಲಿ ಉತ್ಪಾದನೆಗಳು ಪಶ್ಚಿಮದಿಂದ ಪೂರ್ವ, ದಕ್ಷಿಣದಿಂದ ಉತ್ತರದಲ್ಲಿರಬೇಕು. ಅಂದರೆ ಮುಖ್ಯವಾಗಿ ಸಿದ್ಧ ಸರಕು ಉತ್ತರವೋ, ಪೂರ್ವದಿಂದಲೇ ಚಿಮ್ಮಬೇಕು.
ಇನ್ನು ಸಿದ್ಧ ಸರಕುಗಳಿಗಾಗಿನ ಪೂರ್ವದ ಕಚ್ಛಾ ಸರಕುಗಳಿಗಾಗಿನ ಪೂರ್ವದ ಕಚ್ಛಾ ಸರಕುಗಳು ನೈಋತ್ಯದಲ್ಲಿ ಶೇಖರಣೆಗೊಂಡಿರಬೇಕು. ಕಚ್ಛಾ ಸರಕುಗಳು ಅಗ್ನಿಯಲ್ಲಿ ಒಂದು ರೂಪ ಪಡೆದು ಇನ್ನೊಂದು ರೂಪಕ್ಕಾಗಿ ಕಾದಿರುವಾಗ ಅವು ನೈಋತ್ಯ ಮೂಲೆಯಲ್ಲೇ ಶೇಖರಗೊಂಡಿರಬೇಕು. ಇದರ ಹಿಂದಿನ ತತ್ವ ಇಷ್ಟೇ. ಪರಿವರ್ತನೆಗೂ ಮುನ್ನ ತಂಪುಬೇಕು. ವಾಯುವ್ಯದಲ್ಲೇ ಶೇಖರಣೆಗೊಳ್ಳಬೇಕು. ಈ ಸರಕುಗಳು ರವಾನೆಯು ವಾಯುವ್ಯದ ಕಡೆಯ ಗೇಟ್ ಮೂಲಕವೇ ಆಗಲ್ಬಡಬೇಕು. ವಾಯು ತತ್ವದಿಂದ ಸಿದ್ಧ ಸರಕುಗಳು ಸಿದ್ಧಿ ಪಡೆಯುತ್ತವೆ. ನೀರಿನ ಸೆಲೆ ಅಥವಾ ಸಂಗ್ರಹ ಅಗ್ನಿಮೂಲೆಯಲ್ಲಿರಬಾರದು ಎಂಬ ಅಂಶದೊಂದಿಗೆ ಈ ಸಲದ ವಿಷಯದ ಚರ್ಚೆ ಪ್ರಾರಂಭಿಸಿದ್ದೇ ಈ ಮೇಲಿನ ಕಾರಣಗಳಿಂದ. ನೀರಿನ ಸಂಗ್ರಹ ಇದ್ದರೆ ಉತ್ಪಾದನೆ ಕುಸಿಯುತ್ತದೆ. ಮಳೆಯ ನೀರು ಕೂಡ ಕೈಗಾರಿಕಾ ಯೂನಿಟ್‌ನ ದಕ್ಷಿಣದಿಂದ ಉತ್ತರದ ಕಡೆ ಹರಿಯುವಂತಿರಬೇಕು ಅಥವಾ ಪಶ್ಚಿಮದಿಂದ ಪೂರ್ವದತ್ತ ಹರಿದು ಹೋಗುವಂತಿರಬೇಕು. ಕುದಿಯುವುದನ್ನು ತಂಪಾಗಿಸಲು ನೀರಿಗೆ ಆಗಲೇ ಸಾಧ್ಯ.
ಕೈಗಾರಿಕಾ ಯೂನಿಟ್‌ನ ಹೊಗೆ ಕೊಳವೆಗಳ್ಳೋ, ಚಿಮಣಿ ಗೊಳವೆಯೋ ಬಹು ದೊಡ್ಡ ಎತ್ತರವನ್ನು ಸಂಪಾದಿಸಿಕೊಂಡಿದ್ದರೆ ನೈಋತ್ಯದ ಕಡೆ ಕಬ್ಬಿಣದ ದೊಡ್ಡ ಕಂಭವನ್ನು, ಕಬ್ಬಿಣದ ರಾಶಿಗಳ ಸಂಗ್ರಹವನ್ನು (ನೈಋತ್ಯದಲ್ಲಿ ಕಾವನ್ನು ತಗ್ಗಿಸುವ, ಧೂಮ ವಲಯವನ್ನು ನಿಗ್ರಹಿಸುವ ಶಕ್ತಿಯನ್ನು ಕಬ್ಬಿಣ ಪಡೆಯುತ್ತದೆ) ಚಿಮಣಿಯ ಎತ್ತರವನ್ನೂ ಮೀರಿದ ಎತ್ತರದ ವ್ಯಾಪ್ತಿಗೆ ಕೂಡ್ರಿಸಬೇಕು. ಔದುಂಬರದ ವೃಕ್ಷವನ್ನೋ, ಬೇವಿನ ಗಿಡವನ್ನೋ ಕೈಗಾರಿಕ ಘಟಕದ ದಕ್ಷಿಣಭಾಗದಲ್ಲಿ ನೆಡಬೇಕು. ಇವು ದಟ್ಟವಾಗಿದ್ದರೆ ಒಳ್ಳೆಯದು. ವಾತಾವರಣದಲ್ಲಿ ತೇವಾಂಶ ಹರಡಿಕೊಂಡಿರಲು, ತಂಪು ಆವರಿಸಲು, ಕೈಗಾರಿಕೆಯ ಕಾರಣದಿಂದಾದ ಕಾವನ್ನು ಕುಗ್ಗಿಸಲು ಇದರಿಂದ ಉಪಯೋಗವಾಗುತ್ತದೆ. ಪರಿಸರದ ಸಂರಕ್ಷಣೆಗೆ ಔದುಂಬರ ಹಾಗೂ ಬೇವಿನ ಮರಗಳು ವಿನೂತನವಾದ ವಿಶಿಷ್ಟ ಶಕ್ತಿ ( ವಾತಾವರಣದ ಸ್ವತ್ಛತೆಗೆ ಅವಕಾಶ ಮಾಡಿಕೊಡುವ ಹಾಗೆ) ಪಡೆದಿರುತ್ತದೆ. ಕೈಗಾರಿಕೆಗಳ ವಿಚಾರದಲ್ಲಿನ ಇನ್ನಷ್ಟು ವಾಸ್ತು ವಾಸ್ತವಗಳನ್ನು ಮುಂದಿನ ಸಂಚಿಕೆಯಲ್ಲಿ ಚರ್ಚಿಸೋಣ.
– ಅನಂತಶಾಸ್ತ್ರಿ