Advertisement
ಟ್ಯಾಪ್‌ಮಿ ವರ್ಚುವಲ್ ಉಪಕ್ರಮದ ಮೊದಲ ಪ್ರಮುಖ ಕಾರ್ಯಕ್ರಮವನ್ನು ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ (ಬಿಐಎಫ್‌ಎಂ) ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್ ಕಾರ್ಯಕ್ರಮವನ್ನಾಗಿ ಸಾದರಪಡಿಸಲಾಗುತ್ತಿದ್ದು, ಉದ್ಯೋಗಸ್ಥ ಕಾರ್ಯನಿರ್ವಾಹಕರಿಗೆ ನೂತನ ಕಲಿಕೆಯ ಅವಕಾಶವನ್ನು ಸೃಷ್ಟಿಸುತ್ತಿದೆ.
Related Articles
Advertisement
ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕಾರ್ಯಕ್ರಮದ ಮುಖ್ಯಸ್ಥ ಡಾ. ಮೀರಾ ಎಲ್.ಬಿ. ಅರಾನ್ಹ ಅವರು ಮಾತನಾಡಿ, ವಿಮೆ, ಕ್ರೆಡಿಟ್ ಕಾರ್ಡ್, ಡಿಜಿಟಲ್ ಹಣ ಪಾವತಿ ಹಾಗೂ ಷೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆಗಳು ಭಾರತದಲ್ಲಿ ಕನಿಷ್ಠ ಪ್ರಮಾಣದಲ್ಲಿ ಜನರನ್ನು ತಲುಪಿದೆ. ಆದರೆ, ಹೆಚ್ಚುತ್ತಿರುವ ಜಾಗೃತಿ ಮತ್ತು ಈ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುತ್ತಿರುವ ವ್ಯವಸ್ಥೆಗಳೊಂದಿಗೆ ಸಂಪೂರ್ಣ ಬಿಎಫ್‌ಎಸ್‌ಐ ಕ್ಷೇತ್ರ ಗುಣಾತ್ಮಕ ಪರಿವರ್ತನೆ ಹಾಗೂ ಪ್ರಮಾಣದಲ್ಲಿ ಬೆಳವಣಿಗೆಗೆ ಸಜ್ಜಾಗಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಟ್ಯಾಪ್‌ಮಿ ವರ್ಚುವಲ್ ಎಕ್ಸಿಕ್ಯೂಟೀವ್ ಲರ್ನಿಂಗ್ ಚೇರನ್ ಪ್ರೊಫೆಸರ್ ಸೂರ್ಯ ಮಾತನಾಡಿ, 11 ತಿಂಗಳ ಈ ಕಾರ್ಯಕ್ರಮ ವರ್ಚುವಲ್ ಸಿಂಕ್ರೋನಸ್ ಮಾದರಿ, ಕ್ಯಾಂಪಸ್ ವಿಭಾಗ, ಪ್ರಾಜೆಕ್ಟ್ ವರ್ಕ್ ಹಾಗೂ ಆಫ್-ಕ್ಲಾಸ್‌ರೂಮ್ ಎಂಗೇಜ್‌ಮೆಂಟ್‌ಗಳ ಮಿಶ್ರಣದ ಮೂಲಕ ವಿತರಿಸಲಾಗುತ್ತಿದೆ.
ಕ್ಯಾಂಪಸ್ ವಿಭಾಗದಲ್ಲಿ ಭಾಗವಹಿಸುವವರಿಗೆ ಹಣಕಾಸು ಪ್ರಯೋಗಾಲಯದಲ್ಲಿ ಬ್ಲೂಮ್‌ಬೆರ್ಗ್ ಮತ್ತು ರಾಯrರ್ ಟರ್ಮಿನಲ್ ಮುಖಾಂತರ ಅನ್ವಯಿತ ಮಾರುಕಟ್ಟೆ ಚಿಂತನೆಗಳಲ್ಲಿ ನೇರವಾಗಿ ಭಾಗವಹಿಸಿ ಕಲಿಯುವ ಅವಕಾಶವನ್ನು ಪೂರೈಸಲಿದೆ. ಟ್ಯಾಪ್‌ಮಿ ಲರ್ನಿಂಗ್ ಆ್ಯಂಡ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರಂ (ಲೀಪ್) ಮತ್ತು ಲರ್ನಿಂಗ್ ಟ್ಯಾಪ್‌ನಲ್ಲಿ ಭಾಗವಹಿಸಿದವರ ಕಲಿಕೆಗೆ ಪೂರಕವಾಗಲಿದೆ.
ಈ ಕಾರ್ಯಕ್ರಮ ನ.11, 2018ಕ್ಕೆ ಆರಂಭವಾಗಲಿದ್ದು, ಈ ಕೋರ್ಸ್ ಶುಲ್ಕ 4.0 ಲಕ್ಷ ರೂ.ಗಳಾಗಲಿವೆ. ಅರ್ಜಿ ಸಲ್ಲಿಸುವವರು ಕನಿಷ್ಟ ನಾಲ್ಕು ವರ್ಷ ಉದ್ಯಮದ ಅನುಭವ ಹಾಗೂ ಪದವಿ ಪೂರ್ಣಗೊಳಿಸಿದ ನಂತರ ಪ್ರತಿಷ್ಠಿತ ಕಂಪನಿಗಳಲ್ಲಿ ಅನುಭವ ಹೊಂದಿರುವ ಅಗತ್ಯವಿರುತ್ತದೆ ಎಂದರು.