Advertisement

ವರ್ಜಿನ್‌ ಟೈಟಲ್‌ ಬದಲು?

04:02 PM Sep 14, 2020 | Suhan S |

ಮದರಂಗಿ ಕೃಷ್ಣ ಅಭಿನಯದ “ಲವ್‌ ಮಾಕ್ಟೇಲ್‌’ ಚಿತ್ರ ಸೂಪರ್‌ ಹಿಟ್‌ ಆದ ನಂತರ ಮದರಂಗಿ ಕೃಷ್ಣ ಮತ್ತು ನಿಮಿಕಾ ರತ್ನಾಕರ್‌ ಅಭಿನಯದಲ್ಲಿ”ವರ್ಜಿನ್‌’ ಎನ್ನುವ ಹೊಸಚಿತ್ರ ಸೆಟ್ಟೇರಿತ್ತು.  ಸದ್ದಿಲ್ಲದೆ ಈ ಚಿತ್ರದ ಕೆಲಸಗಳನ್ನು ಶುರು ಮಾಡಿದ್ದ ಚಿತ್ರತಂಡ, ಈಗಾಗಲೇ ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇದರ ನಡುವೆಯೇ ಚಿತ್ರತಂಡ, ಈ ಚಿತ್ರದ ಟೈಟಲ್‌ ಅನ್ನು ಬದಲಾವಣೆ ಮಾಡಿದೆಯಂತೆ.

Advertisement

ಹೌದು, ಚಿತ್ರತಂಡದ ಮೂಲಗಳ ಪ್ರಕಾರ ಚಿತ್ರತಂಡ, “ವರ್ಜಿನ್‌’ ಎನ್ನುವ ಬದಲಾಗಿ ಚಿತ್ರದ ಹೆಸರನ್ನು “ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು’ ಎಂದು ಇಟ್ಟಿದೆಯಂತೆ. ಆರಂಭದಲ್ಲಿ “ವರ್ಜಿನ್‌’ ಎನ್ನುವ ಟೈಟಲ್‌ ಇಡುತ್ತಿದ್ದಂತೆ, ಟೈಟಲ್‌ ಕೇಳಿದ ಕೆಲವರು ಮೂಗುಮುರಿದಿದ್ದರು. ಈಗ ಮೂಗುಮುರಿಯುವವರ ಮುಲಾಜಿಗೋ, ಅಥವಾ ಚಿತ್ರಕ್ಕೆ ಅತ್ಯಗತ್ಯ ಎನ್ನುವ ಕಾರಣಕ್ಕೋ, ಚಿತ್ರದ ಟೈಟಲ್‌ ಅನ್ನು ಬದಲಾವಣೆ ಮಾಡಿಕೊಂಡಿದೆ.

ಇನ್ನು ಸದ್ಯ ಮದರಂಗಿ ಕೃಷ್ಣ, “ಶ್ರೀಕೃಷ್ಣ ಆ್ಯಟ್‌ ಜಿಮೇಲ್‌ ಡಾಟ್‌ ಕಾಂ’, “ಲವ್‌ ಮಾಕ್ಟೇಲ್‌-2′ ಚಿತ್ರದ ತಯಾರಿಯಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಯೊಳಗೆ ಮದರಂಗಿ ಕೃಷ್ಣ ಅಭಿನಯದ ಒಂದು ಚಿತ್ರವಾದರೂ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next