Advertisement

ವೀರೇಂದ್ರ ಪಾಟೀಲ ಆದರ್ಶ ಮಾದರಿ

10:23 AM Mar 15, 2019 | |

ಚಿಂಚೋಳಿ: ಮಾಜಿ ಮುಖ್ಯಮಂತ್ರಿ ದಿ| ವೀರೇಂದ್ರ ಪಾಟೀಲ ಚಿಂಚೋಳಿ ಮತಕ್ಷೇತ್ರದಿಂದ ಗೆಲುವು ಸಾಧಿಸಿ ರಾಜ್ಯ ರಾಜಕೀಯದಲ್ಲಿ ಉತ್ತಮ ಆಡಳಿತಗಾರ, ದಕ್ಷ ಮತ್ತು ಪ್ರಾಮಾಣಿಕ ಆದರ್ಶ ರಾಜಕಾರಣಿ ಆಗಿ ಸೇವೆ ಸಲ್ಲಿಸಿದ ಕ್ಷೇತ್ರದಲ್ಲಿ ಶಾಸಕ ಡಾ| ಉಮೇಶ ಜಾಧವ್‌ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು, ಅವರಿಗೆ ಇಲ್ಲಿನ ಜನರ ಪ್ರೀತಿ ವಿಶ್ವಾಸದ ಅರಿವಿದೆ ಎಂದು ಮಾಜಿ ಶಾಸಕ ಕೈಲಾಶನಾಥ ಪಾಟೀಲ ಹೇಳಿದರು.

Advertisement

ಪಟ್ಟಣದ ವೀರೇಂದ್ರ ಪಾಟೀಲ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ಗುರುವಾರ ದಿ| ವೀರೇಂದ್ರ ಪಾಟೀಲ ಅವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಸಕ ಡಾ| ಉಮೇಶ ಜಾಧವ್‌ ಕೇವಲ ಆರು ವರ್ಷಗಳ ಹಿಂದೆ ಚಿಂಚೋಳಿ ಮತಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿ ಸಿದ ನಂತರ ತಮ್ಮ ರಾಜಕೀಯ ಜೀವನವನ್ನು ಹೊಸ ದಿಕ್ಕಿನತ್ತ ತೆಗೆದುಕೊಂಡು ಹೊರಟಿದ್ದಾರೆ. ರಾಜಕಾರಣಿಗಳಿಗೆ ಜನರೇ ಜನಾರ್ಧನರು. ಅವರ ಆಶೀರ್ವಾದಂತೆ ನಮ್ಮ ರಾಜಕೀಯ ಜೀವನ ಭವಿಷ್ಯ ನಿರ್ಮಾಣ ಆಗಲಿದೆ. ಕಾರ್ಯಕರ್ತರನ್ನು ಎಂದಿಗೂ ಮರೆಯಬಾರದು ಎಂದರು.
 
ಮಾಜಿ ಶಾಸಕ ಎಂ. ವೀರಯ್ಯ ಸ್ವಾಮಿ ಮಾತನಾಡಿ, ದಿ. ವೀರೇಂದ್ರ ಪಾಟೀಲ ಆದರ್ಶ ರಾಜಕಾರಣಿಯಾಗಿ ಅನೇಕರಿಗೆ ದಾರಿದೀಪ ತೋರಿಸಿದ್ದಾರೆ. ವೀರೇಂದ್ರ ಪಾಟೀಲರ ಸ್ಮಾರಕ ಸ್ಥಾಪಿಸುವ ಕುರಿತು ಅಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ, ಎನ್‌. ಧರ್ಮಸಿಂಗ್‌ ಭರವಸೆ ನೀಡಿದ್ದರು. ಆದರೆ ಇನ್ನುವರೆಗೆ ಕಾರ್ಯಗತ ಆಗಿಲ್ಲವೆಂದು ಅತೃಪ್ತಿ ವ್ಯಕ್ತಪಡಿಸಿದರು. 

ಶಾಸಕ ಡಾ|ಉಮೇಶ ಜಾಧವ್‌ ಮಾತನಾಡಿ, ಹಿಂದುಳಿದ ಪ್ರದೇಶದಲ್ಲಿ 18 ಸಣ್ಣ ನೀರಾವರಿ ಕೆರೆಗಳು ಮತ್ತು ಎರಡು ಮಧ್ಯಮ ನೀರಾವರಿ ಯೋಜನೆಗಳನ್ನು ನಿರ್ಮಿಸಿದ್ದಾರೆ. ನಾನು ಈ ಕ್ಷೇತ್ರಕ್ಕೆ ಎರಡು ಸಲ ಶಾಸಕರಾಗಿ ಆಯ್ಕೆಗೊಂಡಿದ್ದೇನೆ. ನಿಮ್ಮ ಆಶೀರ್ವಾದ ಎಂದಿಗೂ ಮರೆಯುವುದಿಲ್ಲ. ವೀರೇಂದ್ರ ಪಾಟೀಲರು ಎಲ್ಲ ಜಾತಿ ಜನಾಂಗದವರಿಗೆ ಸಾಮಾಜಿಕ ನ್ಯಾಯ ಕೊಡಿಸಿದವರು ಆಗಿದ್ದರು. ಮಾನಸಿಕ ಖನ್ನತೆಗೆ ಒಳಗಾದ ರಾಜಕಾರಣಿಗಳು ವೀರೇಂದ್ರ ಪಾಟೀಲರ ಸಮಾಧಿಗೆ ನಮಸ್ಕರಿಸಿದರೆ ಅವರಿಗೆ ಸಮಾಧಾನ ಸಿಗಲಿದೆ ಎಂದರು.

ಬಂಜಾರಾ ಸಮಾಜದ ಯುವ ಮುಖಂಡ ಸುಭಾಷ ರಾಠೊಡ, ಮಹೆಮೂದ ಪಟೇಲ ಸಾಸರಗಾಂವ, ಹೈಕೋರ್ಟ್‌ ನ್ಯಾಯವಾದಿ ಕಾಶಿನಾಥ ಮೋತಕಪಳ್ಳಿ, ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಮಾತನಾಡಿದರು. ಗೋಪಾಲರಾವ್‌ ಕಟ್ಟಿಮನಿ, ಈಶ್ವರ ನಾಯಕ, ದೇವಲಾ ನಾಯಕ ಇದ್ದರು. ಬಸವರಾಜ ಮಲಿ ಸ್ವಾಗತಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next