Advertisement

ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಡಾ.ಹೆಗ್ಗಡೆ ಅವರಿಂದ 25 ಲಕ್ಷ ರೂ. ನಿಧಿ ಸಮರ್ಪಣೆ

12:47 PM Jan 13, 2021 | Team Udayavani |

ಬೆಳ್ತಂಗಡಿ: ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಧರ್ಮಸ್ಥಳದಲ್ಲಿ ಹಮ್ಮಿಕೊಂಡ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿಧಿ ಸರ್ಮಪಣಾ ಅಭಿಯಾನ ಗಣ್ಯರ ಸಭೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 25 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

Advertisement

ಧರ್ಮಸ್ಥಳ ಮಹೋತ್ಸವ ಸಭಾಭವನದಲ್ಲಿ ಬುಧವಾರ ನಿಧಿ ಸಮರ್ಪಣಾ ಅಭಿಯಾನದ ಗಣ್ಯರ ಸಭೆಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ವಾಸುದೇವನಿಗೂ ವಾಮದೇವನಿಗೂ ಸುಮದ ವ್ಯತ್ಯಾಸ ಎಂಬಂತೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ ರಾಮಸ್ಮರಣೆಯಾಗಿದೆ. ಎಲ್ಲರ ದೃಷ್ಟಿ ರಾಮಜನ್ಮಭೂಮಿ ಮೇಲಿದೆ. ಹಲವು ವರ್ಷಗಳ ವ್ಯಾಜ್ಯ ಇತ್ಯರ್ಥಗೊಂಡು ಸಂಶಯ ಸಂದೇಹವಿಲ್ಲದೆ ಈ ಬಾರಿ ರಾಮಜನ್ಮಭೂಮಿ ನಿರ್ಮಾಣವಾಗಲಿದೆ. ಪೇಜಾವರ ವಿಶ್ವೇಶತೀರ್ಥರ ಸ್ಮರಣೆಯೊಂದಿಗೆ ಅವರ ಆಶಯ ಈಡೇರಿಸುವೆಡೆಗೆ ಕ್ಷೇತ್ರದಿಂದ 25 ಲಕ್ಷ ರೂ. ನೀಡಲಿದ್ದು, ಮುಂದಿನ ದಿನಗಳಲ್ಲೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಶತಶತಮಾನಗಳ ಭವ್ಯ ರಾಮ ಮಂದಿರವಾಗಬೇಕೆಂಬ ಕನಸು ಇಂದು ನನಸಾಗುವ ಸುದೈವ. ಮಂದಿರ ನಿರ್ಮಾಣ ಒಬ್ಬಿಬ್ಬರಿಂದ ಆಗಬಾರದು ಸರ್ವ ರಾಮ ಭಕ್ತರ ಸಹಭಾಗಿತ್ವದಲ್ಲಿ ಧನ ಸಮರ್ಪಣೆಯಾಗುವುದರೊಮದಿಗೆ ರಾಮರಾಜ್ಯವಾಗಿಸುವ ಸಂಕಲ್ಪ ನಮ್ಮದು ಎಂದರು.

Advertisement

ಇದನ್ನೂ ಓದಿ:ಇತ್ತ ಸಂಪುಟ ಪಟ್ಟಿ ಸಿದ್ದ: ಅತ್ತ ಪಕ್ಷದೊಳಗೆ ಅಸಮಾಧಾನ ಸ್ಪೋಟ! ಬಿಎಸ್ ವೈಗೆ ಮತ್ತೊಂದು ಸಂಕಟ

ಇದಕ್ಕಾಗಿ ಪ್ರಪಂಚದಾದ್ಯಂತ ಕಾರ್ಯಪಡೆ ಹೊಂದಿರುವ ವಿಹಿಂಪಕ್ಕೆ ನಿಧಿ ಸಂಗ್ರಹ ಜವಾಬ್ದಾರಿ ನೀಡಿದೆ. ಪ್ರತಿ ಹಳ್ಳಿ ಹಳ್ಳಿಗೆ ಕಾರ್ಯಕರ್ತರು ತೆರಳಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣದ ಧನಸಂಗ್ರಹದಲ್ಲಿ ತೊಡಗಲಿದ್ದಾರೆ ಎಂದು ಹೇಳಿದರು.

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಸಾಹಿತ್ಯ ಬಿಡುಗಡೆಗೊಳಿಸಿದರು.

ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ಅಭಿಯಾನದ ರಾಜ್ಯ ಸಮಿತಿ ಸದಸ್ಯ ವಿವೇಕ್ ಆಳ್ವ, ವಿಹಿಂಪ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ತಾಲೂಕು ಸಂಘ ಚಾಲಕ್ ವಿನಯಚಂದ್ರ, ಗಣೇಶ್ ಭಟ್, ಶಾಸಕ ಹರೀಶ್ ಪೂಂಜ, ಪ್ರಾಂತ ವಿಭಾಗ ಕಾರ್ಯದರ್ಶಿ ಶರಣ್ ಪಂಪರ್ವೆಲ್, ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್ ಧರ್ಮಸ್ಥಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು. ಕ್ಷೇತ್ರದ ವತಿಯಿಂದ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು

Advertisement

Udayavani is now on Telegram. Click here to join our channel and stay updated with the latest news.

Next