ಅಹಮದಾಬಾದ್: 2023ರ ಐಪಿಎಲ್ ಮುಗಿದಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಕೊನೆಯ ಎರಡು ಎಸೆತದಲ್ಲಿ 10 ರನ್ ಬೇಕಿದ್ದಾಗ ರವೀಂದ್ರ ಜಡೇಜಾ ಅವರು ಮೋಹಿತ್ ಶರ್ಮಾ ಅವರ ಎಸೆತಗಳನ್ನು ಸಿಕ್ಸ್ ಮತ್ತು ಫೋರ್ ಹೊಡೆದು ತಂಡಕ್ಕೆ ಜಯ ತಂದಿತ್ತರು.
ಈ ಬಗ್ಗೆ ಮಾತನಾಡಿದ ಮಾಜಿ ಆಟಗಾರ ವೀರೆಂದ್ರ ಸೆಹವಾಗ್, ಈ ಸೋಲಿಗೆ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ದೂರಿದ್ದಾರೆ.
“ಕೆಲವರು ಚೆನ್ನಾಗಿ ಬೌಲಿಂಗ್ ಮಾಡುವಾಗ ಮತ್ತು ಯಾರ್ಕರ್ ಎಸೆಯುತ್ತಿರುವಾಗ, ನೀವು ಯಾಕೆ ಹೋಗಿ ಅವನೊಂದಿಗೆ ಮಾತನಾಡುತ್ತೀರಿ? ಬ್ಯಾಟರ್‌ಗೆ 2 ಬಾಲ್ ನಲ್ಲಿ 10 ಬೇಕು, ಈ ವೇಳೆ ಯಾರ್ಕರ್ ಹಾಕಬೇಕು ಎಂದು ಬೌಲರ್ ಗೆ ತಿಳಿದಿದೆ. ಹಾಗಾದರೆ ನೀವು ಅವನ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ? ಒಂದು ವೇಳೆ ಮೋಹಿತ್ ರನ್ ನೀಡುತ್ತಿದ್ದರೆ ಆಗ ಅವರು ಹೋಗಿ ಒಂದು ಮಾತು ಹೇಳಬಹುದಿತ್ತು, ಆದರೆ ಬೌಲರ್ ತನ್ನ ಕೆಲಸವನ್ನು ಮಾಡುತ್ತಿರುವಾಗ ನೀವು ಬೇಗನೆ ಓವರ್ ಅನ್ನು ಪೂರ್ಣಗೊಳಿಸಲು ಬಯಸುತ್ತೀರಿ” ಎಂದು ಸೆಗವಾಗ್ ಹೇಳಿದರು.
ಇದನ್ನೂ ಓದಿ:Russia-Ukraine War ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಬೆಂಬಲಿಸಿದ ರಾಹುಲ್ ಗಾಂಧಿ
ಸೆಹವಾಗ್ ಮಾತ್ರವಲ್ಲದೆ ಸುನಿಲ್ ಗಾವಸ್ಕರ್ ಕೂಡಾ ಹಾರ್ದಿಕ್ ಪಾಂಡ್ಯ ಅವರನ್ನು ಟೀಕೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲರ್ ಮೋಹಿತ್ ಲಯ ತಪ್ಪಿಸಿದರು ಎಂದು ಗಾವಸ್ಕರ್ ದೂರಿದ್ದಾರೆ.