Advertisement

Kannada Cinema; ‘ಹೋರಿ ಹಬ್ಬ’ಕ್ಕೆ ವಿರೇನ್‌ ಕೇಶವ್‌ ರೆಡಿ

01:16 PM Dec 11, 2023 | Team Udayavani |

“ಕಾಕ್ಟೇಲ್‌’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿರುವ ಯುವ ಪ್ರತಿಭೆ ವಿರೇನ್‌ ಕೇಶವ್‌ ಈಗ ಸದ್ದಿಲ್ಲದೆ ತಮ್ಮ ಎರಡನೇ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ. ವಿರೇನ್‌ ಕೇಶವ್‌ ಅಭಿನಯದ ಹೊಸ ಸಿನಿಮಾಕ್ಕೆ “ಹೋರಿ ಹಬ್ಬ’ ಎಂದು ಟೈಟಲ್‌ ಇಡಲಾಗಿದ್ದು, ವಿರೇನ್‌ ಕೇಶವ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಈ ಸಿನಿಮಾದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿದೆ.

Advertisement

“ಹೋರಿ ಹಬ್ಬ’ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದೊಂದು ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ. ಕರ್ನಾಟಕದ ಗ್ರಾಮೀಣ ಭಾಗದ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಈ ಸಿನಿಮಾದಲ್ಲಿ ತೆರೆಮೇಲೆ ತರಲಾಗುತ್ತಿದೆ. ನಾಡಿನ ಸಡಗರ, ಅಭಿಮಾನ, ಪ್ರತಿಷ್ಟೆ, ಭಾವನೆ, ಪ್ರೀತಿ, ಸಾಹಸ ಎಲ್ಲವನ್ನೂ ಮನರಂಜನಾತ್ಮಕವಾಗಿ ಈ ಸಿನಿಮಾದ ಮೂಲಕ ಬಿಂಬಿಸಲಾಗುತ್ತಿದೆ ಎಂಬುದು ಚಿತ್ರತಂಡದ ಮಾತು.

“ಹೋರಿ ಹಬ್ಬ’ ಸಿನಿಮಾವನ್ನು “ವಿಜಯಲಕ್ಷ್ಮೀ ಕಂಬೈನ್ಸ್‌’ ಬ್ಯಾನರ್‌ನಲ್ಲಿ ಡಾ. ಶಿವಪ್ಪ ಮತ್ತು ಧಾರವಾಡದ ಖ್ಯಾತ ವಾಸ್ತುಶಿಲ್ಪಿ ಪಿರೋಜ್‌ ನದಾಫ‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ “ಹೋರಿ ಹಬ್ಬ’ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ನಾಯಕ ವಿರೇನ್‌ ಕೇಶವ್‌ ಅವರಿಗೆ ನಾಯಕಿ ಮತ್ತು ಚಿತ್ರದ ಇತರ ಪ್ರಮುಖ ಪಾತ್ರಗಳಿಗೆ ಕಲಾವಿದರು, ತಂತ್ರಜ್ಞರ ಆಯ್ಕೆ ಭರದಿಂದ ನಡೆಯುತ್ತಿದೆ.

ಅಂದಹಾಗೆ, “ಹೋರಿ ಹಬ್ಬ’ ಸಿನಿಮಾವನ್ನು ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲಿಷ್‌ ಭಾಷೆಗಳಲ್ಲೂ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಶಿವಮೊಗ್ಗ ಸುತ್ತಮುತ್ತ “ಹೋರಿ ಹಬ್ಬ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next