Advertisement

ವೀರಭದ್ರ ಅವರೇ ಸಿಎಂ ಅಭ್ಯರ್ಥಿ: ರಾಹುಲ್‌ ಘೋಷಣೆ

07:20 AM Oct 08, 2017 | Team Udayavani |

ಮಂಡಿ: ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಹಿಮಾಚಲ ಪ್ರದೇಶದಲ್ಲಿ ಶನಿವಾರ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರೇ ಪಕ್ಷದ ಮುಂದಿನ ಸಿಎಂ ಅಭ್ಯರ್ಥಿ ಎಂದು ಅವರು ಇದೇ ವೇಳೆ ಘೋಷಿಸಿದ್ದಾರೆ.

Advertisement

ಪದ್ದಾಲ್‌ ಮೈದಾನದಲ್ಲಿ ರ್ಯಾಲಿ ನಡೆಸಿದ ರಾಹುಲ್‌, ಸಿಎಂ ವೀರಭದ್ರರನ್ನು ಹಾಡಿ ಹೊಗಳಿದ್ದು, ಇಡೀ ರಾಜ್ಯದ ಸಮಾನ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ ಎಂದಿದ್ದಾರೆ. ಇದೇ ವೇಳೆ, ದೇಶದಲ್ಲಿನ ನಿರುದ್ಯೋಗ ಸಮಸ್ಯೆ, ನೋಟು ಅಮಾನ್ಯ, ಜಿಎಸ್‌ಟಿ ತ್ವರಿತ ಅನುಷ್ಠಾನದ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಹುಲ್‌ಗೆ ಪಟ್ಟ?: ಇನ್ನೊಂದೆಡೆ, ದೆಹಲಿ ಕಾಂಗ್ರೆಸ್‌ ಘಟಕದ ಹೊಸ ಪದಾಧಿಕಾರಿಗಳು ಶನಿವಾರ ಸಭೆ ನಡೆಸಿದ್ದು, ರಾಹುಲ್‌ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವಂತೆ ಒತ್ತಾಯಿಸಿ ನಿರ್ಣಯ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next