Advertisement

“ವಿರಾಟಪರ್ವ’ಟೀಸರ್‌ ಬಂತು

10:24 AM Mar 17, 2020 | Lakshmi GovindaRaj |

ಕನ್ನಡದಲ್ಲಿ ದಿನದಿಂದ ದಿನಕ್ಕೆ ಹೊಸಬರ ಸಿನಿಮಾಗಳು ಬರುತ್ತಲೇ ಇವೆ. ಹೀಗೆ ಬರುವ ಒಂದಷ್ಟು ಮಂದಿ ಹೊಸಬರು ಕಂಟೆಂಟ್‌ ನಂಬಿಕೊಂಡು ಬರುತ್ತಾರೆ. ಅದೇ ಕಾರಣದಿಂದ ಸ್ಟಾರ್‌ಗಳ ಕಮರ್ಷಿಯಲ್‌ ಸಿನಿಮಾಗಳ ಮಧ್ಯೆ ಹೊಸಬರ ಕಂಟೆಂಟ್‌ ಆಧರಿತ ಚಿತ್ರಗಳು ಕೂಡಾ ಸದ್ದು ಮಾಡುತ್ತಿವೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ “ವಿರಾಟಪರ್ವ’. ಹೀಗೊಂದು ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು.

Advertisement

ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.  ಟೀಸರ್‌ ಚಿತ್ರದ ಮೇಲಿನ ಭರವಸೆಯನ್ನು ಹೆಚ್ಚಿಸುವಂತಿದ್ದು, ಸಾಕಷ್ಟು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಈ ಚಿತ್ರವನ್ನು ಅನಂತ್‌ ಶೈನ್‌ ನಿರ್ದೇಶಿಸಿದ್ದಾರೆ. ಈ ಹಿಂದೆ “ಮುದ್ದು ಮನಸೇ’ ಎಂಬ ಸಿನಿಮಾ ಮಾಡಿದ್ದ ಅನಂತ್‌ ಅವರಿಗೆ ಇದು ಎರಡನೇ ಸಿನಿಮಾ. ಈ ಚಿತ್ರವನ್ನು ಸುನೀಲ್‌ ರಾಜ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿನೀತ್‌ ರಾಜ್‌ ಮೆನನ್‌ ಅವರು ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಶಿವು ಬಿ.ಕೆ.ಕುಮಾರ್‌ ಹಾಗು ಶಿವಸೀನ ಚಿತ್ರಕ್ಕೆ ಛಾಯಾಗ್ರಾಹಕರು. ವೆಂಕಿ, ಜ್ಞಾನೇಶ್‌, ವಿಜಯ್‌ ಸಂಕಲನವಿದೆ. ಮೋಹನ್‌ ಅವರ ನೃತ್ಯ ನಿರ್ದೇಶನವಿದೆ. ಮಾಸ್‌ ಮಾದ ಹಾಗು ವಿಕ್ರಮ್‌ ಅವರ ಆ್ಯಕ್ಷನ್‌ ಚಿತ್ರಕ್ಕಿದೆ. ಇನ್ನು, ನಾಗೇಂದ್ರ ಪ್ರಸಾದ್‌,ಕವಿರಾಜ್‌, ಯೋಗರಾಜ್‌ಭಟ್‌ ಅವರು ಗೀತೆಗಳನ್ನು ರಚಿಸಿದ್ದಾರೆ. ಸಂದೀಪ್‌ ಮತ್ತು ರಘು ಸಂಭಾಷಣೆ ಬರೆದಿದ್ದಾರೆ. ಹಿನ್ನೆಲೆ ಸಂಗೀತವನ್ನು ರಿತ್ವಿಕ್‌ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅರು ಗೌಡ, ಯಶ್‌ ಶೆಟ್ಟಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರ ಏಪ್ರಿಲ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next