Advertisement

ಧೋನಿ ದಾಖಲೆ, ಕೊಹ್ಲಿ ಬೇಸರ

07:00 AM Apr 27, 2018 | Team Udayavani |

ಬೆಂಗಳೂರು: ಬುಧವಾರ ರಾತ್ರಿ ಆರ್‌ಸಿಬಿ-ಚೆನ್ನೈ ನಡುವಿನ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣಗೊಂಡಿವೆ. ಆರ್‌ಸಿಬಿ ಮತ್ತೂಮ್ಮೆ ಸೋಲುವುದರೊಂದಿಗೆ ಕರ್ನಾಟಕದ ಅಭಿಮಾನಿಗಳ ಪಾಲಿಗೆ ಹಲವು ಬೇಸರದ ಘಟನೆಗಳೂ ನಡೆದಿವೆ.

Advertisement

5000 ರನ್‌: ಧೋನಿ ಐಪಿಎಲ್‌ನಲ್ಲಿ ನಾಯಕರಾಗಿ 5000 ರನ್‌ ಗಳಿಸಿದ ಮೊದಲ ಆಟಗಾರರೆಂಬ ಗೌರವ ಪಡೆದಿದ್ದಾರೆ.
33 ಸಿಕ್ಸರ್‌: ಚೆನ್ನೈ-ಆರ್‌ಸಿಬಿ ಪಂದ್ಯದಲ್ಲಿ ಒಟ್ಟು 33 ಸಿಕ್ಸರ್‌ಗಳು ಸಿಡಿಯಲ್ಪಟ್ಟವು. ಇದು ಐಪಿಎಲ್‌ನ ಒಂದೇ ಪಂದ್ಯದಲ್ಲಿ ದಾಖಲಾದ ಗರಿಷ್ಠ ಸಿಕ್ಸರ್‌ಗಳ ಸಂಖ್ಯೆ.

31: ಇದೇ ಐಪಿಎಲ್‌ ಆವೃತ್ತಿ ಚೆನ್ನೈ-ಕೋಲ್ಕತಾ ನಡುವಿನ ಪಂದ್ಯದಲ್ಲಿ 31 ಸಿಕ್ಸರ್‌ಗಳು ದಾಖಲಾಗಿದ್ದು ಹಿಂದಿನ ದಾಖಲೆ. ಕಳಪೆ ಬೌಲಿಂಗನ್ನು ಕ್ರಿಮಿನಲ್‌ ಎಂದ ಕೊಹ್ಲಿ ಬುಧವಾರ ಚೆನ್ನೈ ವಿರುದ್ಧ ಹೀನಾಯ ವೈಫ‌ಲ್ಯ ಕಂಡ ಆರ್‌ಸಿಬಿ ಬೌಲಿಂಗನ್ನು ನಾಯಕ ಕೊಹ್ಲಿ ಕ್ರಿಮಿನಲ್‌ ಎಂದು ಟೀಕಿಸಿದ್ದಾರೆ. ನಾವು ಉತ್ತಮ ಮೊತ್ತ ಗಳಿಸಿಯೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೊನೆಯ ಓವರ್‌ನಲ್ಲಿ ಅಷ್ಟು ರನ್‌ ಬಿಟ್ಟುಕೊಟ್ಟಿದ್ದು  ನಿಜಕ್ಕೂ ಕ್ರಿಮಿನಲ್‌ ಎಂದು ಕಟು ಶಬ್ದಗಳಲ್ಲಿ ಬೈದಿದ್ದಾರೆ.

ಧೋನಿ ಹೊಗಳಿದ ಪಾಕ್‌ ಪತ್ರಕರ್ತೆಗೆ ನಿಂದನೆ
ಬುಧವಾರ ಧೋನಿ ಅಮೋಘ ಆಟವಾಡಿ ಚೆನ್ನೈಯನ್ನು ಗೆಲ್ಲಿಸಿ ತಮ್ಮ ಗ್ರೇಟ್‌ ಫಿನಿಶರ್‌ ಎಂಬ ಖ್ಯಾತಿಯನ್ನು ಮತ್ತೆ ಪಡೆದುಕೊಂಡಿದ್ದಾರೆ. ಇದನ್ನು ಪಾಕಿಸ್ತಾನ ಟೀವಿ ವಾಹಿನಿಯೊಂದರ ನಿರೂಪಕಿ ಜೈನಾಬ್‌ ಅಬ್ಟಾಸ್‌ ಮುಕ್ತಕಂಠದಿಂದ ಹೊಗಳಿದ್ದಾರೆ. ಇದಕ್ಕೆ ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ತಿರುಗಿಬಿದ್ದು ಆಕೆಯನ್ನು ದೇಶದ್ರೋಹಿ ಎಂದು ಬೈದಿದ್ದಾರೆ. ಐಪಿಎಲ್‌ನಲ್ಲಿ ಯಾವುದೇ ಪಾಕ್‌ ಕ್ರಿಕೆಟಿಗರಿಲ್ಲ, ಆದರೂ ನೀವೇಕೆ ಅದನ್ನು ಪ್ರಚಾರ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next