ಅಹಮದಾಬಾದ್: ಭರ್ಜರಿ ಫಾರ್ಮ್ ನಲ್ಲಿರುವ ಗುಜರಾತ್ ಟೈಟಾನ್ಸ್ ಆಟಗಾರ ಶುಭ್ಮನ್ ಗಿಲ್ ಅವರು ಸತತ ಶತಕ ಬಾರಿಸಿ ಮಿಂಚುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಕರ್ಷಕ ರೀತಿಯಲ್ಲಿ ಬ್ಯಾಟ್ ಬೀಸಿದ ಗಿಲ್ ಆರೆಂಜ್ ಕ್ಯಾಪ್ ಪಡೆದಿದ್ದಾರೆ.
ಗಿಲ್ ಕೇವಲ 60 ಎಸೆತಗಳಲ್ಲಿ 7 ಬೌಂಡರಿ ಮತ್ತು 10 ಸಿಕ್ಸರ್ ಗಳನ್ನು ಒಳಗೊಂಡ ಇನ್ನಿಂಗ್ಸ್ ನಲ್ಲಿ 129 ರನ್ ಗಳಿಸಿದರು. ಗಿಲ್ ಟಿ20 ವೇಗದಲ್ಲಿ ಬ್ಯಾಟಿಂಗ್ ಮಾಡುವುದಿಲ್ಲ ಎಂಬ ಟೀಕೆಗಳಿಗೆ ಗಿಲ್ ಉತ್ತರಿಸಿದ್ದು, ಈ ಋತುವಿನಲ್ಲಿ ಅವರು ತಮ್ಮ ಸ್ಟ್ರೈಕ್ ರೇಟ್ ಆಟವನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ:ದಾಂಡೇಲಿ: ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಂಡಕ್ಕಿಳಿದ ಬಸ್
ಗಿಲ್ ಈ ಋತುವಿನಲ್ಲಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ (730 ರನ್) ಅವರನ್ನು ಹಿಂದಿಕ್ಕಿದರು. ಈಗ ಅವರು 16 ಪಂದ್ಯಗಳಿಂದ 851 ರನ್ ಗಳನ್ನು ಗಳಿಸಿದ್ದಾರೆ. ಯಾರೂ ಅವರ ರನ್ ಹತ್ತಿರವೂ ಇರದ ಕಾರಣ ಗಿಲ್ ಈ ಕೂಟದ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಪ್ರಶಸ್ತಿ ಪಡೆಯುವುದು ಖಚಿತ.
ಕಳೆದ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಮೂರು ಶತಕ ಬಾರಿಸಿದ ಗಿಲ್ ಇದೀಗ ಹೊಸ ಮೈಲಿಗಲ್ಲು ಸಾಧಿಸಲು ಮುಂದಾಗಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ ಅವರು 973 ಗಳಿಸಿದ್ದರು. ಆ ವರ್ಷ ವಿರಾಟ್ 16 ಇನ್ನಿಂಗ್ಸ್ ಗಳಲ್ಲಿ 81ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರು. ಇದೀಗ ವಿರಾಟ್ ಈ ದಾಖಲೆಯ ಹತ್ತಿರ ಬಂದಿದ್ದಾರೆ. ಒಂದು ವೇಳೆ ಗಿಲ್ ಕ್ವಾಲಿಫೈಯರ್ ಎರಡರ ಇನ್ನಿಂಗ್ಸ್ ಪುನಾರವರ್ತಿಸಿದರೆ ಕೊಹ್ಲಿ ದಾಖಲೆ ಮುರಿಯಬಹುದು.