Advertisement

ವಿರಾಟ್‌ ಕೊಹ್ಲಿ ಓದಿಗೆ ಕಾಲೆಳೆದ ಅಭಿಮಾನಿಗಳು!

12:01 AM Aug 25, 2019 | Sriram |

ನಾರ್ತ್‌ ಸೌಂಡ್‌: ಟೆಸ್ಟ್‌ ಪಂದ್ಯದ 2ನೇ ದಿನದ ಆಟದಲ್ಲಿ ವಿರಾಟ್‌ ಕೊಹ್ಲಿ ಡ್ರೆಸ್ಸಿಂಗ್‌ ಕೊಠಡಿ ಯಲ್ಲಿ ಕುಳಿತು ಪುಸ್ತಕ ಓದುತ್ತಿರುವ ಫೋಟೊ ಒಂದು ವೈರಲ್‌ ಆಗಿದೆ.

Advertisement

ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ, ಖ್ಯಾತ ಮನಃಶಾಸ್ತ್ರಜ್ಞ ಸ್ಟೀವನ್‌ ಸಿಲ್ವೆಸ್ಟರ್‌ ಬರೆದ “ಡಿಟಾಕ್ಸ್‌ ಯುವರ್‌ ಇಗೊ’ (ನಿಮ್ಮ ಅಹಂಭಾವ ತ್ಯಜಿಸಿ) ಪುಸಕ್ತ ಓದುತ್ತಿದ್ದುದು ಕಂಡುಬಂತು. ಅಂಗಳದಲ್ಲಿ ಸದಾ ಆಕ್ರಮಣಕಾರಿ ವರ್ತನೆ ತೋರುವ ಕೊಹ್ಲಿ ಈ ಪುಸಕ್ತ ಓದುತ್ತಿರುವುದಕ್ಕೆ ಅಭಿಮಾನಿಗಳು ಟ್ವಿಟರ್‌ನಲ್ಲಿ ಕಾಲೆಳೆದಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next