Advertisement

ವಿಶ್ವ ನಿಮ್ಮ ಸಾಧನೆ ನೋಡಿದೆ, ನಾನು ನಿಮ್ಮಲ್ಲಿ ನಿಜವಾದ ವ್ಯಕ್ತಿಯನ್ನು ಕಂಡಿದ್ದೇನೆ: ಕೊಹ್ಲಿ

01:42 PM Aug 16, 2020 | keerthan |

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಮಾಹಿ ವಿದಾಯ ಹೇಳುತ್ತಿದ್ದಂತೆ ಹಲವರು ಸೆಕಂಡ್ ಇನ್ನಿಂಗ್ಸ್ ಗೆ ಶುಭ ಕೋರಿದ್ದು, ಧೋನಿ ಜೊತೆಗಿನ ಒಡನಾಟವನ್ನು ನೆನೆಸಿಕೊಂಡಿದ್ದಾರೆ.

Advertisement

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕನ ವಿದಾಯದ ಸುದ್ದಿ ಕೇಳಿ ಭಾವುಕರಾಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಧೋನಿಗೆ ಶುಭ ಕೋರಿದ್ದಾರೆ.

“ ಪ್ರತಿಯೊಬ್ಬ ಕ್ರಿಕೆಟ್ ಆಟಗಾರನೂ ಒಂದು ದಿನ ತನ್ನ ಕ್ರಿಕೆಟ್ ಪಯಣವನ್ನು ಅಂತ್ಯ ಮಾಡಬೇಕಾಗುತ್ತದೆ. ಆದರೆ ನಿಮಗೆ ತುಂಬಾ ಆಪ್ತರಾಗಿದ್ದವರು ವಿದಾಯ ಹೇಳಿದಾಗ ಅದರ ಬೇಸರ ಜಾಸ್ತಿಯೇ ಆಗಿರುತ್ತದೆ. ನೀವು ದೇಶಕ್ಕಾಗಿ ಏನು ಸಾಧನೆ ಮಾಡಿದ್ದೀರಿ ಎನ್ನುವುದು ಪ್ರತಿಯೋರ್ವನ ಮನಸ್ಸಿನಲ್ಲಿ ಇರುತ್ತದೆ. ಆದರೆ ನಮ್ಮ ನಡುವಿನ ಪರಸ್ಪರ ಪ್ರೀತಿ ಬಾಂಧವ್ಯ ನನ್ನಲ್ಲಿ ಎಂದಿಗೂ ಹಾಗೆಯೇ ಇರುತ್ತದೆ. ಇಡೀ ವಿಶ್ವ ನಿಮ್ಮ ಸಾಧನೆಯನ್ನು ನೋಡಿದೆ. ಆದರೆ ನಾನು ನಿಮ್ಮೊಳಗಿನ ನಿಜವಾದ ವ್ಯಕ್ತಿಯನ್ನು ಕಂಡಿದ್ದೇನೆ. ಎಲ್ಲವನ್ನೂ ನೀಡಿದ್ದಕ್ಕೆ ಧನ್ಯವಾದಗಳು ನಾಯಕ” ಎಂದು ವಿರಾಟ್ ಕೊಹ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ 538 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 17,266 ರನ್ ಗಳಿಸಿದ್ದಾರೆ. ಸದ್ಯ ಧೋನಿ ಚೆನ್ನೈನಲ್ಲಿದ್ದು, ಮುಂದಿನ ಐಪಿಎಲ್ ಗೆ ಅಭ್ಯಾಸದಲ್ಲಿ ತೊಡಗಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next