ಮುಂಬಯಿ: ಆರ್‌ಸಿಬಿ ನಾಯಕತ್ವದ ಒತ್ತಡದಿಂದ ಮುಕ್ತರಾದರೂ ವಿರಾಟ್ ಕೊಹ್ಲಿ ಅವರ ಬ್ಯಾಟ್ ಮಾತ್ರ ಇನ್ನೂ ಮಾತಾಡಲು ಆರಂಭಿಸಿಲ್ಲ.
6 ಪಂದ್ಯಗಳಲ್ಲಿ 23.80ರ ಸರಾಸರಿಯಲ್ಲಿ ಗಳಿಸಿದ್ದು 119 ರನ್ ಮಾತ್ರ.
6 ಪಂದ್ಯಗಳಲ್ಲಿ 2 ಸಲ ರನೌಟ್ ಆಗಿದ್ದಾರೆ. ಇದಕ್ಕೆ ಟೀಮ್ ಇಂಡಿಯಾದ ಮಾಜಿ ಆರಂಭಕಾರ ವಾಸಿಂ ಜಾಫರ್ ತಮಾಷೆಯ ಸಲಹೆಯೊಂದನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ ಸ್ವಲ್ಪ ಕಾಲ ಕ್ರಿಕೆಟ್ ಬ್ರೇಕ್ ಪಡೆದು ಕಮೆಂಟ್ರಿ ನೀಡಿ ಬರಲಿ, ಅವರ ಬ್ಯಾಟಿಂಗ್ ಸಮಸ್ಯೆ ಹೇಗೆ ಪರಿಹಾರಗೊಳ್ಳಲಿದೆ ನೋಡಿ… ಎಂದಿದ್ದಾರೆ.
ವಾಸಿಂ ಜಾಫರ್ ಈ ತಮಾಷೆಯ ಕೇಳಿಕೆಗೆ ದಿನೇಶ್ ಕಾರ್ತಿಕ್ ಅವರೇ ಕಾರಣ. ಕಾರ್ತಿಕ್ ಕೂಡ ಕಳೆದೆರಡು ಐಪಿಎಲ್ ಋತುಗಳಲ್ಲಿ ಘೋರ ವೈಫಲ್ಯ ಅನುಭವಿಸಿದ್ದರು. ಇಂಗ್ಲೆಂಡ್ ಪ್ರವಾಸದ ವೇಳೆ ವೀಕ್ಷಕ ವಿವರಣೆ ನೀಡಿದರು. ಈಗ ಡಿ.ಕೆ. ಎದುರಾಳಿ ಬೌಲರ್‌ಗಳಿಗೆ ಸಖತ್ ಬೆವರಿಳಿ ಸುತ್ತಿದ್ದಾರೆ! ಇದೇ ರೀತಿ ವಿರಾಟ್ ಕೊಹ್ಲಿ ಕೂಡ ಸ್ವಲ್ಪ ಸಮಯ ಕ್ರಿಕೆಟ್ ಕಮೆಂಟ್ರಿ ಮಾಡಿ ಮರಳಿದರೆ ರನ್ ಪ್ರವಾಹವನ್ನೇ ಹರಿಸಬಹುದು ಎಂಬುದು ವಾಸಿಂ ಜಾಫರ್ ನೀಡಿದ ಸಲಹೆ!