Advertisement

ವಿರಾಟ್ ಕೊಹ್ಲಿಯ ಟಾಸ್ ಸೋಲಿನ ಕಥೆ! ಇಂಗ್ಲೆಂಡ್ ನಲ್ಲಿ ಟಾಸ್ ಸೋತಾಗೆಲ್ಲಾ ತಂಡಕ್ಕೆ ಸೋಲು

04:43 PM Aug 12, 2021 | Team Udayavani |

ಲಾರ್ಡ್ಸ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಟಾಸ್ ಗೆಲುವು ಯಾವತ್ತೂ ಸುಲಭವಾಗಿಲ್ಲ. ಬಹುತೇಕ ಸಮಯದಲ್ಲಿ ವಿರಾಟ್ ಟಾಸ್ ಸೋಲುತ್ತಾರೆ. ಗುರುವಾರ ಆರಂಭವಾದ ಭಾರತ- ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲೂ ವಿರಾಟ್ ಟಾಸ್ ಸೋತಿದ್ದಾರೆ.

Advertisement

ಅಂದಹಾಗೆ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ನಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ನಾಯಕನಾಗಿ ಇಂಗ್ಲೆಂಡ್ ವಿರುದ್ಧ ಇದುವರೆಗೆ 16 ಟೆಸ್ಟ್ ಪಂದ್ಯವಾಡಿರುವ ವಿರಾಟ್ ಅದರಲ್ಲಿ ಟಾಸ್ ಗೆದ್ದುಕೊಂಡಿರುವುದು ಎರಡು ಬಾರಿ ಮಾತ್ರ. ಉಳಿದ 14 ಬಾರಿ ಟಾಸ್ ಸೋತಿದ್ದಾರೆ. ಅದಲ್ಲದೆ ಇಂಗ್ಲೆಂಡ್ ನಲ್ಲಿ ಎಂಟು ಬಾರಿ ವಿರಾಟ್ ಟಾಸ್ ಸೋತಿದ್ದು, ಎಂಟು ಬಾರಿಯೂ ಭಾರತ ತಂಡ ಸೋಲನುಭವಿಸಿದೆ.

ಇದನ್ನೂ ಓದಿ:ಇಂದಿನಿಂದ ಲಾರ್ಡ್ಸ್ ಕದನ: ಟಾಸ್ ಗೆದ್ದ ಇಂಗ್ಲೆಂಡ್, ಭಾರತ ತಂಡದಲ್ಲಿ ಒಂದು ಬದಲಾವಣೆ

ಇಂದಿನ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.

ತಂಡಗಳು

Advertisement

ಭಾರತ: ರೋಹಿತ್‌ ಶರ್ಮ, ಕೆ.ಎಲ್.ರಾಹುಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ರವೀಂದ್ರ ಜಡೇಜ, ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಜಸ್‌ ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌.

ಇಂಗ್ಲೆಂಡ್‌: ರೋರಿ ಬರ್ನ್ಸ್, ಹಸೀಬ್‌ ಹಮೀದ್‌, ಡಾಮ್‌ ಸಿಬ್ಲಿ, ಜೋ ರೂಟ್‌, ಜಾನಿ ಬೇರ್‌ಸ್ಟೊ, ಮೊಯಿನ್‌ ಅಲಿ, ಜಾಸ್‌ ಬಟ್ಲರ್‌, ಸ್ಯಾಮ್‌ ಕರನ್‌, ಓಲೀ ರಾಬಿನ್ಸನ್‌, ಮಾರ್ಕ್‌ ವುಡ್‌, ಜೇಮ್ಸ್ ಆ್ಯಂಡರ್ಸನ್.

Advertisement

Udayavani is now on Telegram. Click here to join our channel and stay updated with the latest news.

Next