Advertisement

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು

02:30 PM May 16, 2024 | Team Udayavani |

ಬೆಂಗಳೂರು: ಟೀಂ ಇಂಡಿಯಾ ಮತ್ತು ಆರ್ ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟ್ ನಿವೃತ್ತಿಯ ಬಳಿಕ ತಾನು ಸುದೀರ್ಘ ಬ್ರೇಕ್ ಪಡೆಯಲಿದ್ದೇನೆ ಎಂದಿದ್ದಾರೆ.

Advertisement

ಬೆಂಗಳೂರಿನಲ್ಲಿ ರಾಯಲ್ ಗಾಲಾ ಡಿನ್ನರ್ ನಲ್ಲಿ ಭಾಗವಹಿಸಿದ ವೇಳೆ ಮಾತನಾಡಿದ ವಿರಾಟ್, “ಒಬ್ಬ ಕ್ರೀಡಾಪಟುವಾಗಿ ನಮ್ಮ ವೃತ್ತಿಜೀವನಕ್ಕೆ ಒಂದು ಕೊನೆಯ ದಿನಾಂಕ ಇರುತ್ತದೆ. ನಾನು ಅಂದು ಆ ಸಾಧನೆ ಮಾಡಬೇಕಿತ್ತು ಎಂದು ಯೋಚಿಸುತ್ತಾ ನನ್ನ ವೃತ್ತಿಜೀವನ ಕೊನೆಗೊಳಿಸಲು ನಾನು ಸಿದ್ದನಿಲ್ಲ. ನಾನು ಎಂದಿಗೂ ಆಡುತ್ತಲೇ ಇರಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಕೆಲಸವನ್ನು ಪೂರ್ಣಗೊಳಿಸದೆ ಇರಲು ಬಯಸುವುದಿಲ್ಲ. ನನಗೆ ಬಳಿಕ ಯಾವುದೇ ಪಶ್ಚತಾಪ ಪಡುವಂತಾಗಬಾರದು, ಖಂಡಿತ ಹಾಗೆ ಆಗುವುದಿಲ್ಲ” ಎಂದರು.

ಅಲ್ಲದೆ ನಿವೃತ್ತಿಯ ನಂತರ ದೊಡ್ಡ ಬ್ರೇಕ್ ತೆಗೆದುಕೊಳ್ಳುವ ಬಗ್ಗೆಯೂ ವಿರಾಟ್ ಮಾತನಾಡಿದ್ದಾರೆ. ಇದುವರೆಗೆ ನಿವೃತ್ತಿಯ ಬಗ್ಗೆ ಎಲ್ಲಿಯೂ ಹೇಳಿರದ ವಿರಾಟ್, ಮೊದಲ ಬಾರಿಗೆ ಈ ಬಗ್ಗೆ ಮಾತನಾಡಿದ್ದಾರೆ.

“ಒಮ್ಮೆ ಮುಗಿದರೆ, ನಾನು ದೂರವಾಗುತ್ತೇನೆ. ಸುಮಾರು ಸಮಯದವರೆಗೆ ನಿಮಗೆ ನನ್ನನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ನಾನು ಆಡುವ ಸಮಯದವರೆಗೆ ನನ್ನಿಂದಾಗುವ ಎಲ್ಲವನ್ನೂ ನೀಡಲು ಬಯಸುತ್ತೇನೆ” ಎಂದರು.

Advertisement

ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ ಅವರು ಅತಿ ಹೆಚ್ಚು ರನ್ ಬಾರಿಸಿದ ಆಟಗಾರನಾಗಿದ್ದಾರೆ. ಆಡಿದ 13 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರು 661 ರನ್ ಪೇರಿಸಿದ್ದಾರೆ. 155.16 ರ ಸ್ಟ್ರೇಕ್ ರೇಟ್ ನಲ್ಲಿ ಅವರು ಬ್ಯಾಟ್ ಬೀಸುತ್ತಿದ್ದಾರೆ.

ಆರ್ ಸಿಬಿ ಈ ಬಾರಿ ಆಡಿದ 13 ಪಂದ್ಯಗಳಲ್ಲಿ ಆರನ್ನು ಗೆದ್ದು 12 ಅಂಕ ಸಂಪಾದಿಸಿದೆ. ಸದ್ಯ ಟೇಬಲ್ ನಲ್ಲಿ ಆರ್ ಸಿಬಿ ಐದನೇ ಸ್ಥಾನದಲ್ಲಿದೆ. ಶನಿವಾರ ನಡೆಯಲಿರುವ ಚೆನ್ನೈ ವಿರುದ್ಧದ ಪಂದ್ಯ ಅತ್ಯಂತ ಮುಖ್ಯವಾಗಿದೆ. ಈ ಪಂದ್ಯವನ್ನು ಉತ್ತಮ ರನ್ ರೇಟ್ ಜತೆಗೆ ಗೆದ್ದು ಪ್ಲೇ ಆಫ್ ತಲುಪುವ ಇರಾದೆಯಲ್ಲಿದೆ ಆರ್ ಸಿಬಿ.

Advertisement

Udayavani is now on Telegram. Click here to join our channel and stay updated with the latest news.

Next