ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದು, ಪತ್ನಿಯೊಂದಿಗೆ ಸುತ್ತಾಟದಲ್ಲಿದ್ದಾರೆ. ಮಡದಿ ಅನುಷ್ಕಾ ಶರ್ಮಾ ಜೊತೆ ಪರ್ವತ ಶ್ರೇಣಿಗಳಲ್ಲಿ ಸುತ್ತಾಡುತ್ತಿರುವ ವಿರಾಟ್ ಟ್ವೀಟ್ ಮಾಡಿದ್ದು, ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಪ್ರಕೃತಿ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸುವ ಅವಕಾಶ ಸಿಕ್ಕಿದಾಗ ನಿಮ್ಮ ಆಲೋಚನೆಗಳು ಸ್ಥಬ್ಧಗೊಳ್ಳುತ್ತದೆ, ನೀವು ಆ ಕ್ಷಣದೊಂದಿಗೆ ಒಬ್ಬರಾಗುತ್ತೀರಿ. ಮತ್ತು ದೈವೀಕ ಭಾವನೆಯೊಂದಿಗೆ ವಿಲೀನಗೊಳ್ಳುತ್ತೀರಿ ಎಂದು ವಿರಾಟ್ ತನ್ನ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ನವೆಂಬರ್ 5ರಂದು ವಿರಾಟ್ ತನ್ನ ಹುಟ್ಟುಹಬ್ಬದ ದಿನ ಕೂಡಾ ಇಂತಹುದೇ ಸ್ಥಳವೊಂದರಲ್ಲಿದ್ದ ಫೋಟೋ ಶೇರ್ ಮಾಡಿದ್ದರು.