Advertisement

IPL 2025: ಮುಂದಿನ ವರ್ಷ ಆರ್‌ಸಿಬಿ ತಂಡಕ್ಕೆ ವಿರಾಟ್‌ ಕೊಹ್ಲಿ ನಾಯಕ?

03:40 PM Oct 30, 2024 | Team Udayavani |

ನವದೆಹಲಿ:  ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಗಾಗಿ ಫ್ರಾಂಚೈಸಿಗಳು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ನಾಳೆ ಸಂಜೆ (ಅ.31) 5 ಗಂಟೆಯಯೊಳಗೆ ಸಲ್ಲಿಬೇಕಿದೆ.

Advertisement

ಇದಕ್ಕಾಗಿ ಕಳೆದ ಕೆಲ ದಿನಗಳಿಂದ ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ರಿಲೀಸ್‌ ಮಾಡಬೇಕು, ಯಾವ ಆಟಗಾರರನ್ನು ರಿಟೈನ್‌ ಮಾಡಬೇಕೆನ್ನುವ ಯೋಚನೆಯಲ್ಲಿ ನಿರತವಾಗಿದ್ದು, ನಾಳೆಯೊಳಗೆ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

ಮುಂದಿನ ತಿಂಗಳು ಐಪಿಎಲ್‌ ಸೀಸನ್‌ -18 ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ತಂಡಗಳಲ್ಲಿ ದೊಡ್ಡಮಟ್ಟದ ಬದಲಾವಣೆಗಳು ನಡೆಯಲಿದೆ. ಒಂದಷ್ಟು ಹೊಸಮುಖಗಳೊಂದಿಗೆ, ಅನುಭವಿಗಳು ತಂಡದಲ್ಲಿ ಉಳಿಯಲಿದ್ದಾರೆ. ಗರಿಷ್ಠ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಿದ್ದು, ಇದರಲ್ಲಿ ಓರ್ವ ಅನ್​ಕ್ಯಾಪ್ಡ್ ಆಟಗಾರನಿರಬೇಕು.

ಐಪಿಎಲ್‌ ರಿಟೆನ್ಷನ್ ಭರಾಟೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎನ್ನುವ ಸುದ್ದಿಯೊಂದು ಹಬ್ಬಿದೆ. ಕ್ರಿಕೆಟ್‌ ಪ್ರೇಮಿಗಳ ನೆಚ್ಚಿನ ತಂಡವಾದ ಆರ್‌ ಸಿಬಿಯಲ್ಲಿ ನಾಯಕನ ಬದಲಾವಣೆ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

Advertisement

2022  ರಿಂದ 2024ರವರೆಗೆ ಆರ್‌ಸಿಬಿ ತಂಡವನ್ನು ಫಾಫ್ ಡುಪ್ಲೆಸಿಸ್ (Faf du Plessis)​ ಮುನ್ನಡೆಸಿದ್ದರು. ಫಾಫ್ ಅವರಿಗೆ ವಯಸ್ಸು 40 ಆಗಿದೆ ಹೀಗಾಗಿ ಅವರು ಕ್ಯಾಪ್ಟನ್ಸಿ ಜವಾಬ್ದಾರಿಯಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹಾಗಾಗಿ ಮುಂದಿನ ಆವೃತ್ತಿಗೆ ಆರ್‌ ಸಿಬಿ ತಂಡಕ್ಕೆ ಹೊಸ ಕಪ್ತಾನ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಆರ್‌ ಸಿಬಿ ತಂಡದ ಪ್ರಮುಖ ಆಟಗಾರ, ಅನುಭವಿ ವಿರಾಟ್‌ ಕೊಹ್ಲಿ(Virat Kohli) ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಲೀಡ್‌ ಮಾಡುವ ಸಾಧ್ಯತೆಯಿದೆ ಎಂದು ವರದಿ ಆಗಿದೆ.

ಕೊಹ್ಲಿ 2013 – 2021ರವರೆಗೆ ಆರ್‌ ಸಿಬಿ ತಂಡದ ನಾಯಕರಾಗಿದ್ದರು. ಈ ಸಮಯದಲ್ಲಿ ತಂಡ ನಾಲ್ಕು ಬಾರಿ ಪ್ಲೇ ಆಫ್‌ಗೆ ತೇರ್ಗಡೆ ಆಗಿತ್ತು. 2016ರಲ್ಲಿ ಹೈದರಾಬಾದ್‌ ತಂಡದ ವಿರುದ್ದ ಫೈನಲ್‌ನಲ್ಲಿ ಸೋತಿತ್ತು.

ಅದೇ ಸಮಯದಲ್ಲಿ ಕೊಹ್ಲಿ ಟೀಮ್‌ ಇಂಡಿಯಾವನ್ನು ಲೀಡ್‌ ಮಾಡುತ್ತಿದ್ದರು. ಹೀಗಾಗಿ ರಾಷ್ಟ್ರೀಯ ತಂಡ ಹಾಗೂ ಐಪಿಎಲ್‌ ತಂಡ ಎರಡನ್ನೂ ಮುನ್ನೆಡೆಸುವುದು ಹೊರೆಯಾದ ಕಾರಣಕ್ಕೆ ಅವರು ಆರ್‌ ಸಿಬಿ ಕ್ಯಾಪ್ಟನ್ಸಿ ಪಟ್ಟದಿಂದ ಕೆಳಗಿಳಿದಿದ್ದರು.

ಪ್ರಸ್ತುತ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಮತ್ತೆ ಅವರು ಆರ್‌ ಸಿಬಿ ತಂಡಕ್ಕೆ ಕ್ಯಾಪ್ಟನ್‌ ಆಗಲಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ ಆರ್‌ ಸಿಬಿ ತಂಡಕ್ಕೆ ಕೆಎಲ್‌ ರಾಹುಲ್‌ ಬರಲಿದ್ದಾರೆ ಎನ್ನುವ ಸುದ್ದಿಯೂ ಇದೆ.

ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next