Advertisement
2013ರ ಅನಂತರ ಭಾರತ ಸತತವಾಗಿ ಐಸಿಸಿ ಕೂಟಗಳ ಫೈನಲ್, ಸೆಮಿಫೈನಲ್‌ಗಳಲ್ಲಿ ಸೋಲುತ್ತಿದೆ. ಈ ಬಾರಿ ವೆಸ್ಟ್ ಇಂಡೀಸ್-ಅಮೆರಿಕದಲ್ಲಿ ನಡೆಯುವ ಟಿ20 ವಿಶ್ವಕಪ್ ಗೆಲ್ಲಲೇಬೇಕೆಂಬ ತೀರ್ಮಾ ನದಲ್ಲಿರುವ ಬಿಸಿಸಿಐ, ಯುವಕರಿಗೆ ಮಣೆ ಹಾಕುವ ನಿರೀಕ್ಷೆಯಿದೆ. ಹೀಗಾಗಿ ಕೊಹ್ಲಿಗೆ ಜಾಗ ಅನುಮಾನ ಎನ್ನಲಾಗಿದೆ. ಇದು ಒಂದು ತರ್ಕ.
ಮೂಲಗಳ ಪ್ರಕಾರ, ಟಿ20 ಕ್ರಿಕೆಟ್‌ನ ಅಗತ್ಯಗಳಿಗೆ ತಕ್ಕಂತೆ ಕೊಹ್ಲಿ ಆಡಲು ಸಮರ್ಥರಲ್ಲ ಎಂಬ ವಾದ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಕೇಳಿ ಬರುತ್ತಿದೆಯಂತೆ. ಆದರೆ ಈ ಬಗ್ಗೆ ದೃಢವಾಗಿ ಮಾತನಾಡಲು ಯಾರೂ ಸಿದ್ಧರಿಲ್ಲ. ಇವೆಲ್ಲದರ ನಡುವೆ ತಂಡದ ನಾಯಕತ್ವವನ್ನು ಹಿರಿಯ ಆಟಗಾರ ರೋಹಿತ್ ಶರ್ಮ ಅವರಿಗೇ ನೀಡುವ ಯೋಜನೆ ಬಿಸಿಸಿಐನದ್ದು. ಟಿ20ಯಲ್ಲಿ ಸ್ಫೋಟಕವಾಗಿ ಆಡುವ ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ತಿಲಕ್ ವರ್ಮ, ಶಿವಂ ದುಬೆ ಅವರ ಮೇಲೆ ಬಿಸಿಸಿಐ ಕಣ್ಣಿರಿಸಿದೆ. ಅಲ್ಲದೇ ಈಗಷ್ಟೇ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಲೂ ಬಹುದು. ಕೊಹ್ಲಿ ಆಡುವುದರ ಬಗ್ಗೆ ಅಂತಿಮ ನಿರ್ಧಾರವನ್ನು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
Related Articles
Advertisement
ಐಪಿಎಲ್‌ನಲ್ಲಿ ಭವಿಷ್ಯವಿರಾಟ್ ಕೊಹ್ಲಿ ಕಳೆದ ಜ. 17ರಿಂದ ಯಾವುದೇ ಪಂದ್ಯವಾಡಿಲ್ಲ. ಅಫ್ಘಾನಿಸ್ಥಾನ ವಿರುದ್ಧದ 2 ಟಿ20 ಪಂದ್ಯಗಳಲ್ಲೂ ಮಿಂಚಿರಲಿಲ್ಲ (19, 0). ಇದೀಗ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳುವ ಯೋಜನೆಯಲ್ಲಿದ್ದಾರೆ. ಇಲ್ಲಿ ಕೊಹ್ಲಿ ಅವರ ವಿಶ್ವಕಪ್ ಭವಿಷ್ಯ ಅಡಗಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಲಾಗುವುದು ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ ಐಪಿಎಲ್‌ನಲ್ಲಿ ರನ್ ಪ್ರವಾಹ ಹರಿಸಿದರೆ ಕೊಹ್ಲಿ ಅವರನ್ನು ವಿಶ್ವಕಪ್‌ಗೆ ಆರಿಸಲೇಬೇಕಾಗುತ್ತದೆ!