Advertisement

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

12:29 PM Sep 18, 2024 | Team Udayavani |

ಮುಂಬಯಿ: ಟೀಮ್ ಇಂಡಿಯಾ(Team India) ಕೋಚ್ ಗೌತಮ್ ಗಂಭೀರ್ (Gautam Gambhir) ಹಾಗೂ ವಿರಾಟ್ ಕೊಹ್ಲಿ(Virat Kohli)  ಮತ್ತೆ ಹಳೆಯ ಸ್ನೇಹಿತರಾಗಿ ಆತ್ಮೀಯರಾಗಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲಾ ಮಸಾಲ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

Advertisement

ಒಂದು ಕಾಲದಲ್ಲಿ ಗೌತಮ್‌ ಗಂಭೀರ್‌ ಹಾಗೂ ವಿರಾಟ್‌ ಕೊಹ್ಲಿ ಟೀಮ್‌ ಇಂಡಿಯಾದ ಪರವಾಗಿ ಜತೆಯಾಗಿ ಆಡಿದವರು. 2011ರ ಏಕದಿನ ವಿಶ್ವಕಪ್‌ನಲ್ಲಿ ಆಡಿದ ಆಟದಿಂದಿಡಿದು ಟಿ-20, ಟೆಸ್ಟ್‌ನಲ್ಲೂ ಗಂಭೀರ್‌ – ಕೊಹ್ಲಿ ಮಾಡಿರುವ ಸಾಧನೆ ಒಂದೆರೆಡಲ್ಲ. ಇಬ್ಬರು ಉತ್ತಮ ಸ್ನೇಹಿತರು. ಆದರೆ ಐಪಿಎಲ್‌ ಸಂದರ್ಭದಲ್ಲಿ ಮೈದಾನದಲ್ಲಾದ ಒಂದಷ್ಟು ಸನ್ನಿವೇಶದಿಂದ ಇಬ್ಬರು ಪರಸ್ಪರ ಶತ್ರುವಿನಂತೆ ಕಾಣಿಸಿಕೊಂಡಿದ್ದರು.

ಕೆಕೆಆರ್‌ – ಆರ್‌ ಸಿಬಿ ನಡುವಿನ ಪಂದ್ಯ ಹಾಗೂ ಗಂಭೀರ್‌ ಲಕ್ನೋ ತಂಡದ ಮೆಂಟರ್‌ ಆಗಿದ್ದ ಸಂದರ್ಭದಲ್ಲಾದ ಕೆಲ ಸನ್ನಿವೇಶಗಳು ವಿರಾಟ್‌ – ಗಂಭೀರ್‌ ನಡುವಿನ ಸ್ನೇಹಿತರ ಬಾಂಧವ್ಯಕ್ಕೆ ಒಂದಷ್ಟು ಹಾನಿಯುಂಟು ಮಾಡಿತ್ತು.

ಗೌತಮ್‌ ಗಂಭೀರ್‌ ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ಆದ ಬಳಿಕ ಕೊಹ್ಲಿ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಮತ್ತೆ ಹಳೆಯ ಟೀಮ್‌ ಮೇಟ್ಸ್‌ ನಂತೆ ಇಬ್ಬರು ಅಭ್ಯಾಸದ ವೇಳೆ ಕಾಣಿಸಿಕೊಂಡಿದ್ದಾರೆ.

Advertisement

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿ ಮುನ್ನ ಗೌತಿ ಹಾಗೂ ಕೊಹ್ಲಿ ಆತ್ಮೀಯತೆಯ ಚಿಟ್‌ ಚಾಟ್‌ ವಿಡಿಯೋವೊಂದನ್ನು ಬಿಸಿಸಿಐ ಹಂಚಿಕೊಂಡಿದೆ.

ವಿಡಿಯೋದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್‌ ನಲ್ಲಿ ಗಂಭೀರ್‌ ಹಾಗೂ ಕೊಹ್ಲಿ ಅವರು ಆಡಿದ ಅಮೋಘ ಇನ್ನಿಂಗ್ಸ್‌ ಹಾಗೂ ಟೆಸ್ಟ್‌ ಪಂದ್ಯಗಳಲ್ಲಿ ಇಬ್ಬರು ಗಳಿಸಿದ ರನ್‌ ಸುರಿಮಳೆಗಳ ಝಲಕ್‌ ನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಗಂಭೀರ್‌ ಮಾತನಾಡುತ್ತಾ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಳಿಸಿದ ರನ್‌ಗಳ ಬಗ್ಗೆ ಶ್ಲಾಘಿಸಿ ನ್ಯೂಜಿಲೆಂಡ್‌ ವಿರುದ್ಧ ತಾನು ನೇಪಿಯರ್ ನಲ್ಲಿ ಆಡಿದ ಇನ್ನಿಂಗ್ಸ್‌ ಕುರಿತು ನೆನಪಿಸಿಕೊಂಡಿದ್ದಾರೆ.

ಇದಲ್ಲದೆ ಆಸ್ಟ್ರೇಲಿಯಾ ವಿರುದ್ಧ ಮೈದಾನದಲ್ಲಿ ನಡೆದಿದ್ದ ಕೆಲ ಸನ್ನಿವೇಶಗಳ ಇಬ್ಬರು ಮಾತನಾಡಿದ್ದಾರೆ.

ಸದ್ಯ ಈ ಸಂದರ್ಶನದ ಝಲಕ್‌ ಬಿಡಲಾಗಿದ್ದು, ಶೀಘ್ರದಲ್ಲಿ ಬಿಸಿಸಿಐ.ಟಿವಿಯಲ್ಲಿ ಸಂಪೂರ್ಣ ಸಂದರ್ಶನ ಪ್ರಸಾರವಾಗಲಿದೆ.

ಭಾರತ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌, ಮೂರು 3 T20I ಪಂದ್ಯಗಳನ್ನು ಆಡಲಿದೆ. ಟೆಸ್ಟ್‌ ಸರಣಿ ಗುರುವಾರ(ಸೆ.19) ದಿಂದ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next