Advertisement

ಕೊಹ್ಲಿಗೆ ಸ್ಲಿಪ್‌ ಡಿಸ್ಕ್ ಅಗಿಲ್ಲ, ಕತ್ತು ನೋವು;ಬಿಸಿಸಿಐ ಸ್ಪಷ್ಟನೆ

12:11 PM May 24, 2018 | |

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ನಾಯಕ,ಸ್ಫೋಟಕ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಅವರು ಬೆನ್ನುಹುರಿ ನರಗಳ ಸಮಸ್ಯೆಯಿಂದ ಬಳಲುತ್ತಿಲ್ಲ  ಅವರಿಗೆ ಕತ್ತು ಉಳುಕಿನ ಸಮಸ್ಯೆ  ಇದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. 

Advertisement

ಮೂಳೆ ತಜ್ಞ ರೋರ್ವರು ಕೊಹ್ಲಿ ಅವರಲ್ಲಿ ಸ್ಲಿಪ್‌ ಡಿಸ್ಕ್ ಇರುವುದನ್ನು ಪತ್ತೆ ಹಚ್ಚಿದ್ದಾರೆ,ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಮುಂಬಯಿ ಮಿರರ್‌ ವರದಿ ಮಾಡಿತ್ತು. 

ಕೊಹ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿರುವುದರಿಂದ ಅವರು ಇಂಗ್ಲೆಂಡ್‌ನ‌ ಕೌಂಟಿ ಕ್ರಿಕೆಟ್‌ ಆಡುವುದರಿಂದ ಹಿಂದೆ ಸರಿಯಬೇಕಾಗಬಹುದು ಎನ್ನಲಾಗಿತ್ತು. 

ಈ ಬಗ್ಗೆ ಸಷ್ಟನೆ ನೀಡಿರುವ ಬಿಸಿಸಿಐ ಕೊಹ್ಲಿ ಅವರಿಗೆ ಕತ್ತು ಉಳುಕು ಇದೆ . ಅವರು ಫಿಟ್‌ ಆಗಿದ್ದಾರೆ. ನಾವು ಈಗ ಅವರ ಕೌಂಟಿ ಆಟವನ್ನು ಮೊಟಕುಗೊಳಿಸುವ ಬಗ್ಗೆ  ಚಿಂತಿಸಿದ್ದೇವೆ ಎಂದು ಹೇಳಿದೆ. 

ಕೊಹ್ಲಿ ಬಿಸಿಸಿಐ ಸಲಹೆಯಂತೆ ಕೌಂಟಿ ಕ್ರಿಕೆಟ್‌ನಲ್ಲಿ ಸರ್ರೇ ಸ್ಟಿಂಟ್‌  ಪರ ಆಡಲು ಸಹಿ ಮಾಡಿದ್ದರು. 

Advertisement

ಜುಲೈನಿಂದ ಸಪ್ಟೆಂಬರ್‌ ವರೆಗೆ ಭಾರತ ಇಂಗ್ಲೆಂಡ್‌ ಪ್ರವಾಸ ಗೈಯಲಿದ್ದು, ಸರಣಿಯಲ್ಲಿ ಸಮರ್ಥ ನಾಯಕತ್ವ  ಮತ್ತು ಗುಣಮಟ್ಟದ ತರಬೇತಿ ಪಡೆದು ಸಿದ್ದವಾಗುವಂತೆ ಕೌಂಟಿ ಆಡಲು ಕೊಹ್ಲಿಗೆ ಅನುಮತಿ ನೀಡಲಾಗಿತ್ತು. 

ಭಾರತ ತಂಡ ಜೂನ್‌ ತಿಂಗಳಲ್ಲಿ  ಅಫ್ಘಾನ್‌ ತಂಡದ ವಿರುದ್ಧ  ಒಂದು ಟೆಸ್ಟ್‌ ಪಂದ್ಯ ಮತ್ತು ಐರ್‌ಲೆಂಟ್‌ ವಿರುದ್ಧ 2 ಟಿ 20 ಪಂದ್ಯ ಗಳನ್ನು ಆಡುತ್ತಿದ್ದು, ಆ ಪಂದ್ಯಗಳಿಗೆ ಕೊಹ್ಲಿ ಅವರನ್ನು ಆಯ್ಕೆ ಮಾಡಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next