Advertisement

INDvsWI: ಹೊಸ ಮೆಟ್ಟಿಲು ಏರಿದ ವಿರಾಟ್: ಸೆಹವಾಗ್ ದಾಖಲೆ ಮುರಿದ ಕೊಹ್ಲಿ

12:33 PM Jul 15, 2023 | Team Udayavani |

ರೊಸೇಯೂ (ಡೊಮಿನಿಕಾ): ವೆಸ್ಟ್ ಇಂಡೀಸ್ ಪ್ರವಾಸವನ್ನು ಟೀಂ ಇಂಡಿಯಾ ಶುಭಾರಂಭಗೊಳಿಸಿದೆ. ಮೊದಲ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 141 ರನ್ ಅಂತರದಿಂದ ಗೆದ್ದ ರೋಹಿತ್ ಶರ್ಮಾ ಬಳಗ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

Advertisement

ಮೊದಲ ಟೆಸ್ಟ್ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಪಂದ್ಯದ ಹೀರೋ ಆಗಿ ಮೂಡಿಬಂದರು. ಜೈಸ್ವಾಲ್ ಜತೆಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿ ಅಶ್ವಿನ್ ಗಮನಾರ್ಗಕೊಡುಗೆ ನೀಡಿದರು.

ಭಾರತದ ಅಗ್ರಗಣ್ಯ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 76 ರನ್ ಗಳಿಸಿದರು. ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಜತೆ ಶತಕದ ಜೊತೆಯಾಟವಾಡಿದ ವಿರಾಟ್ ಬಳಿಕ ಜಡೇಜಾ ಜತೆ ಉತ್ತಮ ಸಾಥ್ ನೀಡಿದರು.

ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರು ಮಾಜಿ ಆಟಗಾರ ವಿರೆಂದ್ರ ಸೆಹವಾಗ್ ಅವರ ದಾಖಲೆ ಮುರಿದು ಹೊಸ ಕ್ಲಬ್ ಸೇರಿದರು. ಭಾರತದ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಅಗ್ರ ಐದರ ಲಿಸ್ಟ್ ಗೆ ಸೇರಿದರು.

ಇದನ್ನೂ ಓದಿ:ನೆರಿಯ ಗ್ರಾಮದಲ್ಲಿ ಸ್ಮಶಾನದ  ಕೊರತೆ: ಪಂಚಾಯತ್ ಎದುರು ಮೃತದೇಹ ಇಟ್ಟು ಪ್ರತಿಭಟನೆಗೆ ಸಿದ್ಧತೆ

Advertisement

ವಿರಾಟ್ ಕೊಹ್ಲಿ ಅವರು 110 ಟೆಸ್ಟ್ ಪಂದ್ಯದಲ್ಲಿ 8515 ರನ್ ಗಳಿಸಿದ್ದಾರೆ. ಡೊಮಿನಿಕಾ ಟೆಸ್ಟ್ ವೇಳೆ ಅವರು ಸೆಹವಾಗ್ ದಾಖಲೆ ಮುರಿದರು. ಸೆಹವಾಗ್ ಅವರು ಟೆಸ್ಟ್ ನಲ್ಲಿ 8503 ರನ್ ಗಳಿಸಿದ್ದಾರೆ.

ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 15921 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (13265 ರನ್), ಮೂರನೇ ಸ್ಥಾನದಲ್ಲಿ ಸುನಿಲ್ ಗಾವಸ್ಕರ್ (10122 ರನ್ ) ಮತ್ತು ನಾಲ್ಕನೇ ಸ್ಥಾನದಲ್ಲಿ ವಿವಿಎಸ್ ಲಕ್ಷ್ಮಣ್ (8781 ರನ್) ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next