Advertisement

ವಿರಾಟ್ ಕೊಹ್ಲಿ 85 ರನ್ ಗಳಿಸಿದರೆ ಸಾಕು ಈ ಹೊಸ ಮೈಲಿಗಲ್ಲು ಸಾಧಿಸಲು!

04:18 PM Sep 28, 2020 | keerthan |

ದುಬೈ: ಐಪಿಎಲ್ ನ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ- ಉಪನಾಯಕರು ಎದುರಾಗುತ್ತಿದ್ದಾರೆ. ವಿರಾಟ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು ಇಂದು ಮುಖಾಮುಖಿಯಾಗಲಿದೆ.

Advertisement

ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಾದರೂ ತನ್ನ ಖದರ್ ತೋರಿಸಲಿ ಎಂದು ಆರ್ ಸಿಬಿ ಅಭಿಮಾನಿಗಳು ಆಶಿಸುತ್ತಿದ್ದಾರೆ. ಕಿಂಗ್ ಕೊಹ್ಲಿ ಇನ್ನು 85 ರನ್ ಗಳಿಸಿದರೆ ಸಾಕು ಹೊಸ ದಾಖಲೆಯೊಂದನ್ನು ಬರೆಯಲಿದ್ದಾರೆ.

ಹೌದು, ಇನ್ನು 85 ರನ್ ಗಳಿಸಿದರೆ ಟಿ20 ಪಂದ್ಯಗಳಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಕೊಹ್ಲಿ ಬರೆಯಲಿದ್ದಾರೆ. ಸದ್ತ ಕೊಹ್ಲಿ283 ಪಂದ್ಯಗಳಿಂದ 8915 ರನ್ ಗಳಿಸಿದ್ದಾರೆ.

ಇದನ್ನೂ ಓದಿ:ಎಂಚಿನ ಫೀಲ್ಡಿಂಗ್ ಮಾರ್ರೆ:ಪೂರನ್ ಫೀಲ್ಡಿಂಗ್ ಕಂಡು ತುಳು ಟ್ವೀಟ್ ಮಾಡಿದ ಸ್ಟಾರ್ ಸ್ಪೋರ್ಟ್ಸ್

ವಿಶ್ವಕ್ರಿಕೆಟ್ ನಲ್ಲಿ ಇದುವರೆಗೆ ಆರು ಮಂದಿ ಆಟಗಾರರು ಟಿ20 ಕ್ರಿಕೆಟ್ ನಲ್ಲಿ 9000 ರನ್ ಗಳಿಸಿದ್ದಾರೆ. ಅವರೆಂದರೆ ಕ್ರಿಸ್ ಗೇಲ್ ( 13,296), ಕೈರನ್ ಪೊಲಾರ್ಡ್ ( 10,238), ಬ್ರೆಂಡನ್ ಮೆಕಲಮ್ (9922), ಶೋಯೆಬ್ ಮಲಿಕ್ (9906), ಡೇವಿಡ್ ವಾರ್ನರ್ (9318) ಮತ್ತು ಆರೋನ್ ಫಿಂಚ್ (9008).

Advertisement

ಆರ್ ಸಿಬಿ ತನ್ನ ಹಿಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ 97 ರನ್ ಸೋಲನುಭವಿಸಿತ್ತು. ಮುಂಬೈ ಇಂಡಿಯನ್ಸ್ ತಂಡ ಕೆಕೆಆರ್ ವಿರುದ್ಧ 49 ರನ್ ಅಂತರದ ಗೆಲುವು ಸಾಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next