Advertisement

ಡಿಆರ್‌ಎಸ್‌ ಹಾಳು ಮಾಡುತ್ತಿದ್ದೀರಿ: ಕೊಹ್ಲಿ ವೈಫ‌ಲ್ಯದ ವಿರುದ್ಧ ಅಭಿಮಾನಿಗಳ ಆಕ್ರೋಶ

09:55 AM Mar 01, 2020 | Team Udayavani |

ಕ್ರೈಸ್ಟ್ ಚರ್ಚ್; ನ್ಯೂಜಿಲೆಂಡ್‌ ಪ್ರವಾಸದಲ್ಲಿ ಸಂಪೂರ್ಣವಾಗಿ ರನ್‌ ಬರ ಅನುಭವಿಸಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಗೂ ಅಭಿಮಾನಿಗಳಿಂದ ಟೀಕೆಗಳ ಸುರಿಮಳೆಯಾಗಿದೆ.

Advertisement

ಇದುವರೆಗೆ ಆಡಿರುವ ಅಸಾಮಾನ್ಯ ಇನಿಂಗ್ಸ್‌ಗಳುನೀಡಿರುವ ಕೊಡುಗೆಗಳನ್ನು ಮರೆತ ಅಭಿಮಾನಿಗಳು, ಅಲ್ಪಕಾಲದ ವೈಫ‌ಲ್ಯಕ್ಕಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ! ಶನಿವಾರ ಕೊಹ್ಲಿ ಟಿಮ್‌ ಸೌದಿ ಎಸೆತದಲ್ಲಿ 3 ರನ್‌ ಬಾರಿಸಿದ್ದಾಗ ಎಲ್ಬಿಡಬ್ಲ್ಯೂ ಆದರು.ಅಂಪೈರ್‌ ಔಟೆಂದು ಹೇಳಿದರು. ಆದರೆ ಅಂಪೈರ್‌ ತೀರ್ಪನ್ನು ಮರುಪರಿಶೀಲಿಸಲು ನಿರ್ಧರಿಸಿದ ಕೊಹ್ಲಿ, ಡಿಆರ್‌ಎಸ್‌ಗೆ ಮನವಿ ಮಾಡಿದರು. ಅಲ್ಲಿ ಕೊಹ್ಲಿ ಔಟೆಂದು ಸಾಬೀತಾಯಿತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕೊಹ್ಲಿ ಅನಗತ್ಯವಾಗಿ ಡಿಆರ್‌ಎಸ್‌ ಅವಕಾಶಗಳನ್ನು ಹಾಳು ಮಾಡಿದ್ದಾರೆಂದು ಜರಿದಿದ್ದಾರೆ.

ಇತ್ತೀಚೆಗೆ ಕೊಹ್ಲಿ ಪದೇಪದೇ ಡಿಆರ್‌ಎಸ್‌ ತೆಗೆದುಕೊಂಡು, ವ್ಯರ್ಥ ಮಾಡುತ್ತಿದ್ದಾರೆಂದು ಕೆಲವರು ಅಂಕಿಸಂಖ್ಯೆಗಳನ್ನೂ ನೀಡಿದ್ದಾರೆ! ಈ ಇಡೀ ಪ್ರವಾಸದಲ್ಲಿ ಕೊಹ್ಲಿ 20 ರನ್‌ಗಳೊಳಗೆ ಔಟಾಗುತ್ತಿರುವುದು ಇದು 7ನೇ ಬಾರಿ

Advertisement

Udayavani is now on Telegram. Click here to join our channel and stay updated with the latest news.

Next