Advertisement

ಬ್ಯಾಟ್ಸಮನ್ ಗಳ ಪೆವಿಲಿಯನ್ ಪರೇಡ್: ಮತ್ತೆ ಸಂಕಷ್ಟದಲ್ಲಿ ಟೀಂ ಇಂಡಿಯಾ

10:00 AM Mar 02, 2020 | keerthan |

ಕ್ರೈಸ್ಟ್ ಚರ್ಚ್: ಮೊದಲ ಇನ್ನಿಂಗ್ಸ್ ನಲ್ಲಿ ಅಲ್ಪ ಮುನ್ನಡೆ ಪಡೆದರೂ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ. ಬ್ಯಾಟ್ಸ್ ಮನ್ ಗಳ ನಿರಾಶದಾಯಕ ಆಟ ಭಾರತದ ಸಂಕಷ್ಟಕ್ಕೆ ಕಾರಣವಾಗಿದೆ.

Advertisement

ಮೊದಲ ಇನ್ನಿಂಗ್ಸ್ ನಲ್ಲಿ ಏಳು ರನ್ ಗಳ ಮುನ್ನಡೆ ಪಡೆದ ಭಾರತಕ್ಕೆ ಬ್ಯಾಟ್ಸಮನ್ ಗಳ ಸಹಕಾರ ಸಿಗಲಿಲ್ಲ. ಆರಂಭಿಕರಾದ ಮಯಾಂಕ್ ಅಗರ್ವಾಲ್ ಮೂರು ರನ್ ಗಳಿಸಿದರೆ, ಪೃಥ್ವಿ ಶಾ 14 ಬೇಗನೇ ವಿಕೆಟ್ ಒಪ್ಪಿಸಿದರು. ನಾಯಕ ವಿರಾಟ್ ಕೊಹ್ಲಿ ಅವರದ್ದು ಮತ್ತದೇ ಫ್ಲಾಪ್ ಶೋ. ಕೊಹ್ಲಿ 14 ರನ್ ಗಳಿಸಿದರೆ, ಉಪನಾಯಕ ಅಜಿಂಕ್ಯ ರಹಾನೆ 9 ರನ್ ಗಳಿಸಿ ಔಟಾದರು.

ಟೆಸ್ಟ್ ತಜ್ಞ ಪೂಜಾರ 88 ಎಸೆತ ಎದುರಿಸಿದರೂ ಗಳಿಸಿದ್ದು 24 ರನ್. ನೈಟ್ ವಾಚ್ ಮನ್ ಆಗಿ ಬಂದ ಉಮೇಶ್ ಯಾದವ್ ಗಳಿಸಿದ್ದು ಕೇವಲ ಒಂದು ರನ್. ಎರಡನೇ ದಿನದ ಆಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 90 ರನ್ ಗಳಸಿದೆ. ಹನುಮ ವಿಹಾರಿ ಮತ್ತು ರಿಷಭ್ ಪಂತ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ 97 ರನ್ ಮುನ್ನಡೆಯಲ್ಲಿದ್ದು, ಮೂರನೇ ದಿನದಲ್ಲಿ ಉತ್ತಮ ಮೊತ್ತ ಗಳಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next