ಸಾಮಾನ್ಯವಾಗಿ ವಿಮಾನ ನಿಲ್ದಾಣ ಅಥವಾ ಸೂಕ್ಷ್ಮ ಪ್ರದೇಶಗಳ ಪ್ರವೇಶಕ್ಕೆ ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ತೋರಿಸುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದ ಅನ್ರೋಹಾ ಜಿಲ್ಲೆಯ ಹಸನ್‌ಪುರದಲ್ಲಿ ಕೆಲವು ದಿನಗಳ ಹಿಂದೆ ನಡೆದ ಮದುವೆ ಸಮಾರಂಭದಲ್ಲಿ ಆಧಾರ್ ಕಾರ್ಡ್ ತೋರಿಸಿದ ಅತಿಥಿಗಳಿಗೆ ಮಾತ್ರ ಭೋಜನಕ್ಕೆ ತೆರಳಲು ಅನುಮತಿ ನೀಡಲಾಗಿತ್ತು. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಭೋಜನಕ್ಕೆ ತೆರಳಲು ಆಧಾರ್ ಕಡ್ಡಾಯಗೊಳಿಸಿದ್ದು, ಮದುವೆಗೆ ಬಂದ ಅತಿಥಿಗಳ ಕ್ರೋಧಕ್ಕೆ ಕಾರಣವಾಗಿದೆ. ಮದುವೆ ಆಯೋಜಕರು ಮತ್ತು ಅತಿಥಿಗಳ ನಡುವೆ ವಾದವೂ ಏರ್ಪಟ್ಟಿದೆ.
“ಈ ಪ್ರದೇಶದಲ್ಲಿ ಅಕ್ಕ-ಪಕ್ಕದಲ್ಲೇ ಹಲವು ಕಲ್ಯಾಣ ಮಂಟಪಗಳಿವೆ. ಒಂದು ಕಡೆ ಭೋಜನ ತಡವಾದರೆ ಮತ್ತೂಂದು ಕಲ್ಯಾಣ ಮಂಟಕ್ಕೆ ತೆರಳುವುದನ್ನು ಕಂಡಿದ್ದೇವೆ.
ನಮ್ಮ ನಿರೀಕ್ಷೆಗಿಂತ ಹೆಚ್ಚಿನ ಜನರು ಬಂದಿದ್ದರು. ಹಾಗಾಗಿ ಭೋಜನಕ್ಕೆ ಆಧಾರ್ ತೋರಿಸಲು ಕೇಳಿದೆವು,’ ಎಂದು ಮದುವೆ ಆಯೋಜಕರು ತಿಳಿಸಿದ್ದಾರೆ.