Advertisement

ಸೆಕೆ ಕಡಿಮೆ ಮಾಡಲು ಈ ಅಜ್ಜಿ ಮಾಡಿದ ಐಡಿಯಾ ಸೂಪರ್..!

04:33 PM Apr 18, 2021 | Team Udayavani |

ನವದೆಹಲಿ : ಸದ್ಯ ಬೇಸಿಗೆಯ ಜಳ ಎಲ್ಲರನ್ನೂ ದಂಗುಬಡಿಸಿದೆ. ಎಲ್ಲಿಗೋದರೂ ಸೆಕೆ, ಬಿಸಿಲು, ಬೆವರಿನಿಂದ ಜನ ಬೇಸತ್ತು ಹೋಗಿದ್ದಾರೆ. ಐಸ್ ಕ್ರೀನ್, ಕೂಲ್ ಡ್ರಿಂಕ್ಸ್ ಏನು ಕುಡಿದು ತಿಂದರೂ ಕೂಡ ಮತ್ತದೇ ಸೆಕೆ. ಇನ್ನು ಮಲಗುವ ಮುನ್ನ ಜನರು ಸೆಕೆ ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯ ಐಡಿಯಾಗಳನ್ನು ಮಾಡುತ್ತಾರೆ. ಫ್ಯಾನ್ ಗಳನ್ನು ಹಾಕಿಕೊಳ್ಳುವುದು, ಎಸಿ ಆನ್ ಮಾಡುವುದು, ಬೀಸಣಿಗೆಯಲ್ಲಿ ಬೀಸುವುದು, ಹೀಗೆ ನಾನಾ ನಮೂನೆಯ ಐಡಿಯಾಗಳನ್ನು ಬಳಸಿ ಸೆಕೆಯ ತಾಪವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

Advertisement

ಆದ್ರೆ ಇಲ್ಲೊಂದು ಅಜ್ಜಿ ತನ್ನ ಸೆಕೆಯ ಬಿಸಿಯನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಸಖತ್ ಐಡಿಯಾವನ್ನು ಬಳಸಿದ್ದಾರೆ. ಫ್ರಿಡ್ಜ್ ಬಾಗಿಲನ್ನು ತೆಗೆದು ಅದರು ಮುಂದೆ ಹಾಸಿಗೆಯನ್ನು ಹಾಸಿಕೊಂಡು ಮಲಗಿದ್ದಾರೆ. ಅಜ್ಜಿಯ ಐಡಿಯಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಸೀರೆ ಹುಟ್ಟಿರುವ ಅಜ್ಜಿಯು ಮಲಗುವ ಮುನ್ನ ನಿಧಾನಕ್ಕೆ ಫ್ರಿಡ್ಜ್ ಬಳಿ ಹೋಗಿ ಅದರ ಬಾಗಿಲನ್ನು ತೆಗೆದು ನಂತರ ಅದರ ಮುಂದೆ ಚಾಪೆಯನ್ನು ಹಾಸಿಕೊಂಡು, ಕೈಯ್ಯಲೊಂದು ಬೀಸಣಿಕೆ ಹಿಡಿದುಕೊಂಡು ಮಲಗಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಸಖತ್ ಎಂಜಾಯ್ ಮಾಡುತ್ತ ಅಜ್ಜಿಯ ಐಡಿಯಾಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋವನ್ನು ಯೂಟ್ಯೂಬ್ ಮತ್ತು ಮೋಜ್ ಅಪ್ಲಿಕೇಶನ್ ಗಳಲ್ಲಿ ಶೇರ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next