ಮುಂಬೈ; ವಾಣಿಜ್ಯ ನಗರಿ ಮುಂಬೈಯ ಗಡಿಬಿಡಿಯ ಜೀವನದ ಜೊತೆ ರೈಲ್ವೆ ಹಳಿಗಳ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬ ಅನಿರೀಕ್ಷಿತ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು, ವೈರಲ್ ಆಗಿದೆ.
ಇದನ್ನೂ ಓದಿ:ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ಬರುತ್ತಿವೆ : ಮಧು ಬಂಗಾರಪ್ಪ
ಮುಂಬೈನ ಮಾಹೀಂ ರೈಲ್ವೆ ನಿಲ್ದಾಣದಲ್ಲಿನ ಹಳಿಗಳ ಮೇಲೆ ಜನರು ಅಡುಗೆ ತಯಾರಿಸುತ್ತಿರುವ, ಕೆಲವರು ಹಳಿಯ ಮೇಲೆ ಕುಳಿತು ಓದುತ್ತಿರುವ, ಬಟ್ಟೆಗಳನ್ನು ಒಣಗಿಸಿದ ವಿಡಿಯೋ ತುಣುಕು ಸಾಮಾಜಿಕ ಎಲ್ಲರ ಗಮನ ಸೆಳೆದು, ಸುರಕ್ಷತೆಯ ಪ್ರಶ್ನೆಯನ್ನು ಮೂಡಿಸಿದೆ.
ರೈಲ್ವೆ ಹಳಿಯ ಮೇಲೆಯ ಅಡುಗೆ ಬೇಯಿಸುತ್ತಿರುವ, ಬಟ್ಟೆ ಒಣಗಿಸಿರುವ ಹಾಗೂ ಜನರು, ಮಕ್ಕಳು ಗಿಜಿಗುಟ್ಟುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ತಕ್ಷಣವೇ ರೈಲ್ವೆ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ, ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಒತ್ತಾಯಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಯೊಬ್ಬರು, ಮಾಹೀಂ ರೈಲ್ವೆ ಹಳಿಗಳನ್ನು ಮುಖ್ಯವಾಗಿ ರಾತ್ರಿ ವೇಳೆ ಕಾರ್ಯಾಚರಿಸಲು ಬಳಕೆಯಾಗುತ್ತಿದೆ. ಆದರೂ ಕೊಳೆಗೇರಿ ನಿವಾಸಿಗಳು ಈ ಹಳಿಗಳನ್ನು ತಮ್ಮ ಅಗತ್ಯತೆಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ರೈಲ್ವೆ ಇಲಾಖೆ ನಿರಂತರವಾಗಿ ಪರಿಶೀಲಿಸುತ್ತಿದ್ದು, ಈ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.