Advertisement

ಥೂ… ಥೂ… ಹೀಗಾ ಕಿಸ್ ಮಾಡೋದು!?

10:14 AM Jan 27, 2020 | Hari Prasad |

ಗೋಧ್ರಾ: ತಮ್ಮ ಮಕ್ಕಳ ಭವಿಷ್ಯದ ಕುರಿತಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡು ಹೆತ್ತವರು ಅವರನ್ನು ಶಾಲೆಗಳಿಗೆ ಕಳಿಸುತ್ತಾರೆ. ಇನ್ನು ಮಕ್ಕಳ ಶುಲ್ಕ, ಅವರ ಕಲಿಕೆಗೆ ಅಗತ್ಯವಿರುವ ಪುಸ್ತಕ, ಬಟ್ಟೆ, ಪ್ರಾಜೆಕ್ಟ್ ಕೆಲಸ… ಹೀಗೆ ಮಕ್ಕಳ ಕಲಿಕೆಗೆ ಕಾಲಕಾಲಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಹೆತ್ತವರು ಪಡುವ ಕಷ್ಟ ಅವರಿಗೇ ಗೊತ್ತು!

Advertisement

ಆದರೆ ಇಷ್ಟು ಕಷ್ಟದಲ್ಲಿ ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸುವ ಹೆತ್ತವರು ಅವರಿಂದ ಅಪೇಕ್ಷಿಸುವುದು ಕೇವಲ ಉತ್ತಮ ಅಂಕ ಮತ್ತು ಶಾಲಾ ವಾತಾವರಣದಲ್ಲಿ ಒಳ್ಳೆಯ ವಿದ್ಯಾರ್ಥಿ ಎಂಬ ಬಿರುದನ್ನು ಮಾತ್ರ. ಕೆಲವು ಮಕ್ಕಳು ಮಾತ್ರ ತಮ್ಮ ಹೆತ್ತವರ ಆಶಯಕ್ಕೆ ವಿರುದ್ಧವಾಗಿ ವರ್ತಿಸುವ ಪ್ರಕರಣಗಳು ಶಾಲೆಗಳಲ್ಲಿ ವರದಿಯಾಗುತ್ತಿರುತ್ತವೆ.

ಅಂತಹುದೇ ಒಂದು ಪ್ರಕರಣ ಗುಜರಾತ್ ರಾಜ್ಯದ ಶಾಲೆಯೊಂದರಲ್ಲಿ ನಡೆದಿದೆ. ಇಲ್ಲಿನ ಪಂಚಮಹಲ್ ಜಿಲ್ಲೆಯಲ್ಲಿನ ಮೊರ್ವ ಹದಾಪ್ ಎಂಬಲ್ಲಿರುವ ಕ್ರುಷಿಕರ್ ಪಿಯು ಕಾಲೇಜೊಂದರಲ್ಲಿ ದ್ವಿತೀಯ ಪಿ.ಯು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗಳಿಬ್ಬರು ತರಗತಿ ಕೊಠಡಿಯಲ್ಲಿ ಎಲ್ಲರ ಎದುರಲ್ಲೇ ಚುಂಬನದಲ್ಲಿ ಮೈಮರೆತಿರುವ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ.

ಈ ಘಟನೆ ವೈರಲ್ ಆಗುತ್ತಿದ್ದಂತೆಯೇ ಇದಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯಿಂದ ಜಿಲ್ಲಾ ಶಿಕ್ಷಣ ಅಧಿಕಾರಿಯವರು ವರದಿ ಕೇಳಿದ್ದಾರೆ. ವಿರಾಮದ ಅವಧಿಯಲ್ಲಿ ತರಗತಿ ಕೊಠಡಿಯಲ್ಲೇ ಈ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಶಾಲಾ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.

ಮತ್ತು ಘಟನೆಯ ಕುರಿತಾಗಿ ಇಬ್ಬರು ವಿದ್ಯಾರ್ಥಿಗಳ ಹೆತ್ತವರಿಗೆ ಮಾಹಿತಿ ನೀಡಲಾಗಿದೆ ಹಾಗೂ ಇವರಿಬ್ಬರನ್ನು ಸೋಮವಾರದಂದು ವಿಚಾರಣೆ ಮಾಡಲಾಗುತ್ತದೆ ಎಂದು ಪ್ರಾಂಶುಪಾಲರಾಗಿರುವ ಅಶ್ವಿನ್ ಪಟೇಲ್ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿರುವುದನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Advertisement

ಒಟ್ಟಿನಲ್ಲಿ ಪಾಠಗಳನ್ನು ಕೇಳಿಕೊಂಡು ಅಧ್ಯಯನದಲ್ಲಿ ತಲ್ಲೀನರಾಗಬೇಕಿದ್ದ ಈ ವಿದ್ಯಾರ್ಥಿಗಳು ತರಗತಿ ಕೊಠಡಿಯಲ್ಲೇ ಚುಂಬನದಲ್ಲಿ ನಿರತರಾಗಿರುವುದು ನಾಚಿಕೆಗೇಡಿನ ವಿಚಾರವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next