ಸಾಮಾನ್ಯವಾಗಿ ರೈಲುಗಳಲ್ಲಿ ಜನರು ಹೋಗ್ತಾರೆ. ಕೆಲವು ಬಾರಿ ತಮ್ಮ ವಸ್ತುಗಳನ್ನೂ ಸಾಗಿಸುತ್ತಾರೆ. ಆದ್ರೆ ರೈಲಿನಲ್ಲಿ ಕುರಿ, ಮೇಕೆ ಮತ್ತು ಹಂದಿಗಳು ಪ್ರಯಾಣ ಮಾಡುತ್ತವೆ ಅಂದ್ರೆ ನೀವು ನಂಬುತ್ತೀರಾ?. ಈ ಸುದ್ದಿಯನ್ನ ನೋಡ್ತಾ ಇದ್ರೆ ಆಶ್ಚರ್ಯ ಆಗೋದು ನಿಜ. ಆದ್ರೆ ಚೀನಾದಲ್ಲಿ ಹಂದಿ, ಕುರಿ ಮತ್ತು ಮೇಕೆಗಳನ್ನು ರೈಲಿನಲ್ಲಿ ಸಾಗಿಸಲಾಗುತ್ತಿದೆ.
ರೈಲಿನಲ್ಲಿ ಪ್ರಾಣಿಗಳನ್ನು ಸಾಗಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳು ಚೀನಾದ ಪುಕ್ಸಿಯಾಂಗ್ ನಿಂದ ಪಂಜಿಹುವಾಕ್ಕೆ ತೆರಳುವ ರೈಲಿನ ದೃಶ್ಯಗಳು. ದೃಶ್ಯಗಳಲ್ಲಿ ಕಾಣುವ ಹಾಗೆ ಕುರಿಗಳು, ಮೇಕೆಗಳು, ಹಂದಿಗಳು ರೈಲಿನಲ್ಲಿ ನಡೆದುಬರುತ್ತಿದ್ದರೆ ಅಲ್ಲಿದ್ದ ಪ್ರಯಾಣಿಕರು ಅವುಗಳಿಗೆ ದಾರಿ ಮಾಡಿಕೊಡುತ್ತಾರೆ. ಇದನ್ನು ನೋಡಿದಾಗ ಆ ಪ್ರದೇಶದ ಜನರಿಗೆ ಇದು ಸಾಮಾನ್ಯವಾಗಿದೆ ಎಂದು ಕಾಣುತ್ತದೆ.
ಈ ರೈಲನ್ನು ಬಡವರಿಗೆ ಮತ್ತು ರೈತರಿಗಾಗಿ ಬಿಡಲಾಗಿದೆಯಂತೆ. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು, ಪ್ರಾಣಿಗಳನ್ನು ಹಳ್ಳಿಗಳಿಂದ ನಗರಕ್ಕೆ ಸಾಗಸಿಲು ಈ ರೈಲನ್ನು ಬಿಡಲಾಗಿದೆ. ಈ ರೈಲಿನ ವೇಗವೂ ಕಡಿಮೆ ಮತ್ತು ಇದಲ್ಲಿ ಟಿಕೆಟ್ ಬೆಲೆ ಕೂಡ ಕಡಿಮೆ ಇದೆ.
ಈ ರೈಲಿನ ವೇಗದ ಬಗ್ಗೆ ಕೇಳಿದ್ರೆ ನೀವು ಆಶ್ಚರ್ಯ ಪಡೋದ್ರಲ್ಲಿ ತಪ್ಪೇ ಇಲ್ಲ ಅಂದೆನಿಸುತ್ತದೆ. 353 ಕಿ.ಮೀ ಚಲಿಸಲು ಬರೋಬ್ಬರಿ 9 ಗಂಟೆ ತೆಗೆದುಕೊಳ್ಳುತ್ತದೆ.
ಪ್ರಾಣಿಗಳು ರೈಲಿನಲ್ಲಿ ಓಡಾಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೆಲವು ನೆಟ್ಟಿಗರು ಇಂಟರೆಸ್ಟಿಂಗ್ ಎಂದು ಕಮೆಂಟ್ ಮಾಡುತ್ತಿದ್ದಾರೆ.