Advertisement
ಕಪ್ಪು ಪ್ಲಾಸ್ಟಿಕ್ ನಿಂದ ಶವವನ್ನು ಸುತ್ತಿ ಇಟ್ಟಿರುವ ಸಮೀಪದಲ್ಲಿಯೇ ರೋಗಿಗಳನ್ನು ಮಲಗಿಸಿರುವ ಮುಂಬೈನ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿನ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನ ಆಸ್ಪತ್ರೆಯೊಂದರಲ್ಲಿ ಕೋವಿಡ್ ರೋಗಿಗಳು ಮತ್ತು ಶವ ಒಟ್ಟಿಗೆ ಇಟ್ಟಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ವರದಿ ವಿವರಿಸಿದೆ.
ಈ ಬಗ್ಗೆ ಸೈಯನ್ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಮೋದ್ ಇಂಗ್ಳೆ ಸ್ಪಷ್ಟನೆ ನೀಡಿದ್ದು, ಕೋವಿಡ್ ವೈರಸ್ ನಿಂದ ಮೃತಪಟ್ಟವರ ಶವ ಕೊಂಡೊಯ್ಯಲು ಕುಟುಂಬಸ್ಥರು ನಿರಾಕರಿಸುತ್ತಿರುವುದರಿಂದ ಬೇರೆ ವಿಧಿ ಇಲ್ಲದೇ ಶವಗಳನ್ನು ಹಾಗೆಯೇ ಬಿಡಲಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯ ಶವಾಗಾರಕ್ಕೆ ಶವಗಳನ್ನು ಯಾಕೆ ಸಾಗಿಸಿಲ್ಲ ಎಂಬ ಪ್ರಶ್ನಿಗೆ, ಶವಾಗಾರದಲ್ಲಿ ಕೇವಲ 15 ಶವಗಳನ್ನು ಇಡಲು ಸ್ಥಳಾವಕಾಶ ಇದೆ. ಈಗಾಗಲೇ 11 ಶವಗಳನ್ನು ಇಡಲಾಗಿದೆ ಎಂದು ತಿಳಿಸಿದ್ದಾರೆ.