Advertisement

Watch Video: ಸತ್ಯಮಂಗಲ ಅಭಯಾರಣ್ಯ- ಮರಿಯಾನೆಗೆ ಝಡ್ ಪ್ಲಸ್ ಭದ್ರತೆ ನೀಡಿದ ಗಜಪಡೆ

03:45 PM Jun 23, 2022 | Team Udayavani |

ಚೆನ್ನೈ: ಜೀವ ಬೆದರಿಕೆ ಇರುವವರಿಗೆ, ವಿಐಪಿಗಳಿಗೆ ಝಡ್ ಪ್ಲಸ್ ಭದ್ರತೆ ನೀಡುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಪುಟ್ಟ ಮರಿಯಾನೆಗೆ ಆನೆಗಳ ಹಿಂಡು ಝಡ್ ಪ್ಲಸ್ ರೀತಿಯಲ್ಲಿ ಬೆಂಗಾವಲಾಗಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆದ್ದಿದೆ.

Advertisement

ಇದನ್ನೂ ಓದಿ:ನೀವು ಬಿಜೆಪಿಗೆ ಸೇರ್ಪಡೆಯಾಗಿ,ಶಿವಸೇನೆಯನ್ನು ಮತ್ತೆ ಕಟ್ಟುತ್ತೇವೆ: ಬಂಡಾಯ ಶಾಸಕರಿಗೆ ರಾವತ್

ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ಎಂಬವರು ತಮಿಳುನಾಡಿನ ಸತ್ಯಮಂಗಲ ಅಭಯಾರಣ್ಯದಲ್ಲಿ ಆನೆಗಳ ಹಿಂಡು ಮರಿಯಾನೆ ಸುರಕ್ಷಿತವಾಗಿ ತೆರಳುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದರು.

“ಮುದ್ದಾದ ನವಜಾತ ಮರಿಯಾನೆಗೆ ಆನೆಗಳ ಹಿಂಡಿಗಿಂತ ಉತ್ತಮವಾದ ಭದ್ರತೆಯನ್ನು ನೀಡಲು ಈ ಭೂಮಿಯ ಮೇಲೆ ಯಾರಿಂದಲೂ ಸಾಧ್ಯವಿಲ್ಲ..ಇದು ಝಡ್ ಪ್ಲಸ್ ಪ್ಲಸ್, ಪ್ಲಸ್ ಭದ್ರತೆ” ಎಂದು ಸುಶಾಂತ್ ಅವರು ಅಡಿ ಬರಹ ನೀಡಿ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

Advertisement

ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 40ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ, ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇಂತಹ ಅದ್ಭುತವಾದ ವಿಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next