Advertisement

Video; ವಿಚಿತ್ರ ಕಲ್ಲಂಗಡಿ ಚಿಕನ್ ಬಿರಿಯಾನಿ ತಿಂದಿದ್ದೀರಾ? ವೈರಲ್ ಆಯ್ತು ವಿಡಿಯೋ

12:01 PM Apr 21, 2024 | Team Udayavani |

ಮಣಿಪಾಲ: ಬಿರಿಯಾನಿ ಯಾರಿಗೆ ಇಷ್ಟ ಇಲ್ಲ ಹೇಳಿ. ಬಹುಜನರ ಬೇಡಿಕೆ ಖಾದ್ಯವಾದ ಬಿರಿಯಾನಿ ಹಲವು ಮಾದರಿಗಳಲ್ಲಿ ಸಿಗುತ್ತದೆ. ಅದು ಚಿಕನ್ ಅಥವಾ ಮಟನ್ ಆಗಿರಲಿ, ರುಚಿಯಾದ ಬಿರಿಯಾನಿಯನ್ನು ಸೇವಿಸಲು ಜನರು ದೂರ ದೂರದವರೆಗೆ ಸಾಗುತ್ತಾರೆ. ಆದರೆ ಇದೀಗ ಬಿರಿಯಾನಿ ಹಲವು ಅವತಾರಗಳಲ್ಲಿ ಸಿಗಲಾರಂಭಿಸಿದೆ. ಬಾರ್ಬಿ ಬಿರಿಯಾನಿ ವೈರಲ್ ಆದ ಬಳಿಕ ಇದೀಗ ಹೊಸ ಬಗೆಯ, ವಿಚಿತ್ರ ಬಿರಿಯಾನಿಯೊಂದು ಸದ್ದು ಮಾಡುತ್ತಿದೆ. ಅದುವೇ ಕಲ್ಲಂಗಡಿ ಚಿಕನ್ ಬಿರಿಯಾನಿ.

Advertisement

ಹೌದು, ವಿಚಿತ್ರವಾದರೂ ಸತ್ಯ. ಕಲ್ಲಂಗಡಿ ಬೆರೆಸಿರುವ ಚಿಕನ್ ಬಿರಿಯಾನಿಯೊಂದು ಇಂಟರ್ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.  ಇನ್ಸ್ಟಾಗ್ರಾಮ್ ನ villagefoodchannel_official ಪೇಜ್ ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಈ ವಿಚಿತ್ರ ಬಿರಿಯಾನಿ ವೈರಲ್ ಆಗಿದೆ.

ಇಬ್ಬರು ಮೊದಲು ಕಲ್ಲಂಗಡಿ ಹಣ್ಣನ್ನು ತುಂಡರಿಸುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಬಳಿಕ ದೊಡ್ಡ ಪಾತ್ತೆ ಎಲ್ಲಾ ಕತ್ತರಿಸಿದ ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಹಾಕುತ್ತಾರೆ. ಅದರಲ್ಲಿ ಹಣ್ಣನ್ನು ಹಿಚುಕಿ ರಸ ತೆಗೆಯುತ್ತಾರೆ.

ಬಳಿಕ ಮತ್ತೊಂದು ಪಾತ್ರೆಯಲ್ಲಿ ಚಿಕನ್ ಬಿರಿಯಾನಿ ತಯಾರಿಸಲು ಆರಂಭಿಸುತ್ತಾರೆ. ದೊಡ್ಡ ಕಡಾಯಿಗೆ ಎಣ್ಣೆ, ಮಸಾಲೆಗಳು, ಈರುಳ್ಳಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಗರಮ್ ಮಸಾಲಾ ಬಳಸಿ ಮಸಾಲೆ ತಯಾರಿಸುತ್ತಾರೆ. ಬಳಿಕ ಅದಕ್ಕೆ ಶುಚಿಗೊಳಿಸಿದ ಕೋಳಿ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ ಬೇಯಿಸುತ್ತಾರೆ.

ಇದಾದ ಬಳಿಕ ಕೋಳಿ ಮಿಶ್ರಣಕ್ಕೆ ಪ್ರಮುಖ ಅಂಶವಾದ ಕಲ್ಲಂಗಡಿ ಹಣ್ಣಿನ ರಸವನ್ನು ಸೇರಿಸಲಾಗುತ್ತದೆ. ಬಳಿಕ ಅದಕ್ಕೆ ಬಾಸ್ಮತಿ ಅಕ್ಕಿ ಹಾಕಿ ಮತ್ತೆ ಬೇಯಿಸಲಾಗುತ್ತದೆ.

Advertisement

ಕಲ್ಲಂಗಡಿ ಚಿಕನ್ ಬಿರಿಯಾನಿ ವಿಡಿಯೋ ಬಾರಿ ವೈರಲ್ ಆಗಿದೆ. ಇದುವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದು, 81 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಕಲ್ಲಂಗಡಿ ಮತ್ತು ಚಿಕನ್ ಬಿರಿಯಾನಿಯ ಈ ವಿಶಿಷ್ಟ ಸಂಯೋಜನೆಯನ್ನು ವೀಕ್ಷಿಸಿದ ನಂತರ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. “ಯಶಸ್ವಿಯಾಗಿ ವ್ಯರ್ಥವಾದ ಕಲ್ಲಂಗಡಿಗಳು” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬ ವ್ಯಕ್ತಿ, “ಆಹಾರವನ್ನು ಶಕ್ತಿಯ ಮೂಲವಾಗಿ ಮಾತ್ರ ಬಳಸುತ್ತಿದ್ದ ಆ ದಿನಗಳನ್ನು ನಾನು ಮಿಸ್ ಮಾಡುತ್ತಿದ್ದೇನೆ” ಎಂದು ಒಬ್ಬರು ಬರೆದಿದ್ದಾರೆ. “ಕಲ್ಲಂಗಡಿ ಸೇರಿಸುವುದು ವ್ಯರ್ಥ.. ಪ್ರತ್ಯೇಕವಾಗಿ ತಿನ್ನಬಹುದಿತ್ತು” ಎಂದು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next