ನವದೆಹಲಿ : ಕೋವಿಡ್ ಮೊದಲ ಅಲೆ ಮುಕ್ತಾಯವಾಗಿ ಇದೀಗ ಕೋವಿಡ್ ಎರಡನೆ ಅಲೆ ಶುರುವಾಗಿದೆ. ಸಂಶೋಧಕರು, ವೈದ್ಯರು ಹೇಳುವ ಪ್ರಕಾರ ಮೊದಲ ಅಲೆಗಿಂತ ಕೋವಿಡ್ ಎರಡನೇ ಅಲೆ ಬಹಳ ಸಾವು ನೋವಿಗೆ ಕಾರಣವಾಗುತ್ತದೆ. ಮುಂಜಾಗ್ರತಾ ಕ್ರಮಗಳನ್ನು ವಹಿಸದಿದ್ದರೆ ಭಾರೀ ಅನಾಹುತ ಸಂಭವಿಸುತ್ತದೆ ಎಂದಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕೋವಿಡ್ ಗೆ ಸಂಬಂಧಿಸಿದ ಸುದ್ದಿಗಳು ಹರಿದಾಡುತ್ತಿವೆ. ಕೆಲವರು ತಮ್ಮ ಪ್ರಾಣಿಗಳಿಗೆ ಸೋಂಕು ತಗುಲಬಾರದೆಂದು ಆ ಪ್ರಾಣಿಗಳಿಗೂ ಮಾಸ್ಕ್ ಹಾಕಿ ಮಾನವೀಯತೆ ಮೆರೆಯುತ್ತಿದ್ದಾರೆ.
ಇಂತಹದ್ದೇ ಒಂದು ಹಾರ್ಟ್ ವಾರ್ಮಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತ ನಾಯಿಯನ್ನು ತನ್ನ ಹೆಗಲ ಮೇಲೆ ಹೊತ್ತೊಯ್ದಿದ್ದಾನೆ. ಈ ವೇಳೆ ನಾಯಿಗೆ ಮಾಸ್ಕ್ ಹಾಕಿದ್ದು ತಾನು ಮಾಸ್ಕ್ ಹಾಕದೇ ನಡೆದಿದ್ದಾನೆ. ಈ ದೃಶ್ಯವನ್ನು ಯಾರೋ ಸೆರೆ ಹಿಡಿದಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನೋಡಲು ದಯನೀಯವಾಗಿ ಕಾಣುವ ಈ ವ್ಯಕ್ತಿಯನ್ನು ನಾಯಿಕೆ ಮಾಸ್ಕ್ ಯಾಕೆ ಹಾಕಿದ್ದೀರಿ ಎಂದು ಕೇಳಿದಾಗ, ನನಗೆ ಏನಾದರೂ ಪರವಾಗಿಲ್ಲ. ಆದ್ರೆ ನನ್ನ ನಾಯಿಗೆ ಏನು ಆಗ ಬರದು. ಇದು ನನ್ನ ಮಗುವಿನಂತೆ. ಕೊನೆಯ ಪಕ್ಷ ನಾನು ಸತ್ತರೂ ಪರವಾಗಿಲ್ಲ. ಆದ್ರೆ ಈ ನನ್ನ ನಾಯಿಗೆ ತೊಂದರೆ ಆಗಬಾರದು ಎಂದಿದ್ದಾರೆ.
ಈ ವಿಡಿಯೋವನ್ನು ಅನಿಮಲ್ ಲವರ್ ವಗಾದ್ ಎಂಬ ಹೆಸರಿನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋಕ್ಕೆ ಸಾಕಷ್ಟು ಮೆಚ್ಚುಗೆಗಳು ಬರುತ್ತಿವೆ. ಆದ್ರೆ ಆ ವ್ಯಕ್ತಿ ಯಾರು, ಯಾವ ಪ್ರದೇಶದವರು ಎಂಬ ಮಾಹಿತಿ ಮಾತ್ರ ತಿಳಿದು ಬಂದಿಲ್ಲ.