ಫರಿದಾಬಾದ್ : ಬಹುಮಹಡಿ ವಸತಿ ಕಟ್ಟಡದ ಎಂಟನೇ ಮಹಡಿಯಲ್ಲಿ ಬೀಗ ಹಾಕಿದ್ದ ಮನೆಯ ಬಾಲ್ಕನಿಯಲ್ಲಿ ಬಿದ್ದಿದ್ದ ಸೀರೆಯನ್ನು ತರಲೋಸುಗ ಮಹಿಳೆಯೊಬ್ಬಳು ಹೈರೈಸ್‌ನ ಬಾಲ್ಕನಿಯಿಂದ ತನ್ನ ಮಗನನ್ನು ನೇತಾಡುವ ಮೂಲಕ ಜೀವಕ್ಕೆ ಸಂಚಕಾರ ತರಲು ಮುಂದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ವಾರ ಫರಿದಾಬಾದ್‌ನಲ್ಲಿ ನಡೆದ ಘಟನೆಯ ವಿಡಿಯೋವನ್ನು ಎದುರಿನ ಕಟ್ಟಡದ ನಿವಾಸಿಯೊಬ್ಬರು ಚಿತ್ರೀಕರಿಸಿದ್ದಾರೆ.
ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಅಪಾರ್ಟ್‌ಮೆಂಟ್‌ನ 9 ನೇ ಮಹಡಿಯಿಂದ ಬೆಡ್‌ಶೀಟ್‌ನಿಂದ ನೇತಾಡುತ್ತಿದ್ದ ಹುಡುಗನನ್ನು ಮೇಲಕ್ಕೆ ಎಳೆಯುತ್ತಿರುವ ಹುಚ್ಚು ಸಾಹಸವನ್ನು ಕಾಣಬಹುದಾಗಿದೆ.
Related Articles
ಘಟನೆಯ ನಂತರ ಮಹಿಳೆಗೆ ಸೊಸೈಟಿಯಿಂದ ನೋಟಿಸ್ ನೀಡಲಾಗಿದೆ.