Advertisement

ಇದು ಅಪಾಯಕಾರಿ: ನಾಗರಹಾವುಗಳ ಜತೆ ಹುಡುಗಾಟವಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದ!

03:48 PM Mar 17, 2022 | Team Udayavani |

ಉತ್ತರಕನ್ನಡ: ಹಾವಿನ ಜತೆ ಹುಡುಗಾಟ ಆಡೋದು ಎಷ್ಟು ಅಪಾಯಕಾರಿ ಎಂಬುದು ಈಗಾಗಲೇ ಹಲವಾರು ಘಟನೆಗಳನ್ನು ಓದಿದ್ದೀರಿ. ಇದೀಗ ಅದಕ್ಕೊಂದು ಮತ್ತೊಂದು ಸೇರ್ಪಡೆ ಉರಗ ಸ್ನೇಹಿಯೊಬ್ಬ ಮೂರು ನಾಗರಹಾವುಗಳ ಜತೆ ಹುಡುಗಾಟವಾಡಲು ಹೋಗಿ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಇದನ್ನೂ ಓದಿ:ಚಿರತೆಗಳ ದಾಳಿಗೆ 14 ಕುರಿಗಳ ಸಾವು : ಗ್ರಾಮಸ್ಥರಿಗೆ ಧೈರ್ಯ ತುಂಬಿದ ಉಪವಿಭಾಗಾಧಿಕಾರಿ

ಏನಿದು ಘಟನೆ:

ಶಿರಸಿಯ ಉರಗ ಪ್ರೇಮಿ ಮಾಝ್ ಸಯೀದ್ ಎಂಬಾತ ಮೂರು ನಾಗರಹಾವುಗಳ ಎದುರು ಕುಳಿತುಕೊಂಡು ಹುಡುಗಾಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ನಾಗರ ಹಾವೊಂದು ಮಾಝ್ ನತ್ತ ಹಾರಿತ್ತು…ಇದರಿಂದ ಗಲಿಬಿಲಿಗೊಂಡ ಆತ ಕೈಯಿಂದ ಹಾವನ್ನು ದೂರ ಸರಿಸಲು ಯತ್ನಿಸುವಷ್ಟರಲ್ಲಿ ಆತನ ಪ್ಯಾಂಟ್ ಅನ್ನು ಕಚ್ಚಿ ಹಿಡಿದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ದಿಢೀರನೆ ಹಾರಿದ ನಾಗರಹಾವು ಮಾಝ್ ಸಯೀದ್ ನ ಮೊಣಕಾಲನ್ನು ಕಚ್ಚಿತ್ತು. ಆಘಾತಕ್ಕೊಳಗಾದ ಸಹೀದ್ ಹಾವನ್ನು ಹಿಡಿದು ಎಳೆದರೂ ಕೂಡಾ ಅದು ಆತನ ಪ್ಯಾಂಟ್ ಅನ್ನು ಬಲವಾಗಿ ಕಚ್ಚಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Advertisement

ನಾಗರಹಾವು ಕಚ್ಚಿದ ನಂತರ ಸಯೀದ್ ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪ್ರಿಯಾಂಕಾ (ಪಿಎಫ್ ಎಸ್ ಎಚ್) ಕದಂಬ ಅವರು ತಿಳಿಸಿದ್ದಾರೆ. ಸಯೀದ್ ಹಂಚಿಕೊಂಡ ವಿಡಿಯೋ ವನ್ಯಜೀವಿಗಳ ದುರುಪಯೋಗದ ವಿಷಯವಾಗಿದೆ. ಈ ಯುವಕನಿಗೆ ಉರಗ ತಜ್ಞರು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಕದಂಬ ಸಲಹೆ ನೀಡಿದ್ದಾರೆ.

ಐಎಫ್ ಎಸ್ (ಭಾರತೀಯ ಅರಣ್ಯ ಸೇವೆ) ಅಧಿಕಾರಿ ಸುಸಾಂತ್ ನಂದ ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, “ಇದು ಹಾವುಗಳನ್ನು ನಿಭಾಯಿಸುವ ಭಯಾನಕ ವಿಧಾನವಾಗಿದೆ. ಹಾವುಗಳು ಎದುರಾಳಿಯ ಚಲನೆಯನ್ನು ಬೆದರಿಕೆ ಎಂದು ಪರಿಗಣಿಸಿ ಕೂಡಲೇ ಕಾರ್ಯಪ್ರವೃತ್ತವಾಗುತ್ತವೆ. ಇದರ ಪರಿಣಾಮ ಕೆಲವೊಮ್ಮೆ ಮಾರಣಾಂತಿಕವಾಗಬಹುದು” ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next