Advertisement

ಹೈದರಾಬಾದ್‌ ಸ್ಪೆಷಲ್‌ “ವೆಸ್ಪಾ ದೋಸೆ’! ವಿಡಿಯೋ ವೈರಲ್‌

07:50 PM Jun 07, 2022 | Team Udayavani |

ಜೂನ್‌ ಆರಂಭವಾಗಿ ವಾರ ಕಳೆದರೂ ಇನ್ನೂ ಬಿಸಿಲು ತಗ್ಗಿಲ್ಲ. ತೆಲಂಗಾಣದ ಹೈದರಾಬಾದ್‌ನಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯೆಸ್‌ ದಾಟಿದೆ.

Advertisement

ಈ ವಾತಾವರಣದಿಂದಾಗಿ ಕಂಗೆಟ್ಟ ವ್ಯಕ್ತಿಯೊಬ್ಬ, ಮನೆಯ ಹೊರಗೆ ಬಿಸಿಲಲ್ಲಿ ನಿಲ್ಲಿಸಿದ್ದ ವೆಸ್ಪಾ ಸ್ಕೂಟರ್‌ನ ಸೀಟಿನ ಮೇಲೇ ದೋಸೆ ಹೊಯ್ದಿದ್ದಾನೆ.

ಕೆಲ ಕ್ಷಣದಲ್ಲೇ ದೋಸೆ ನೀಟಾಗಿ ಬೆಂದಿದ್ದು, ಅದನ್ನು ಆತ ತಿರುವಿ ಹಾಕುತ್ತಾನೆ. ಈ ವಿಡಿಯೋವನ್ನು “ಫುಡ್ಸ್ ಆಫ್ ಭಾಗ್ಯನಗರ’ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯು ಹಂಚಿಕೊಂಡಿದೆ.

“ಬೇಸಿಗೆಯ 40 ಡಿ.ಸೆ.ನಲ್ಲಿ ವೃತ್ತಿಪರರಿಂದ ತಯಾರಾದ ವೆಸ್ಪಾ ದೋಸೆ’ ಎನ್ನುವ ಕ್ಯಾಪ್ಶನ್‌ ಕೊಡಲಾಗಿದೆ. ಈ ವಿಡಿಯೋ ವೈರಲ್‌ ಆಗಿದ್ದು, ಜನರು “ಗ್ಯಾಸ್‌ ಖರ್ಚು ಉಳಿಸಿದ’ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next