Advertisement

Watch Viral Video; ಕಾಡಿನಲ್ಲಿ ಮಾತ್ರ ರಾಜ…ಆದರೆ ನಾಡಲ್ಲಿ…ಸಿಂಹ V/S ಬೀದಿನಾಯಿ

03:47 PM Mar 23, 2023 | Team Udayavani |

ನವದೆಹಲಿ: ಸಿಂಹ ಅಥವಾ ಹುಲಿ ಜಿಂಕೆ ಸೇರಿದಂತೆ ವನ್ಯ ಮೃಗಗಳನ್ನು ಬೇಟೆಯಾಡುತ್ತಿರುವ ವಿಡಿಯೋ ನೋಡಿರುತ್ತೀರಿ. ಆದರೆ ಈ ವಿಡಿಯೋ ನೀವು ಆಗಾಗ ನೋಡುತ್ತಿರುವುದಕ್ಕಿಂತ ಭಿನ್ನವಾದದ್ದು. ಸಿಂಹ ಕಾಡಿಗೆ ರಾಜನಾಗಿರಬಹುದು…ಆದರೆ ಒಮ್ಮೊಮ್ಮೆ ನಾಡಿನಲ್ಲಿ ಅದು ಕೂಡಾ ಹೆದರುಪುಕ್ಕಲನಂತಾಗುತ್ತದೆ ಎಂಬುದು ಈ ವಿಡಿಯೋದಲ್ಲಿ ಸೆರೆಯಾಗಿದೆ.

Advertisement

ಇದನ್ನೂ ಓದಿ:47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲಯಾಳಂ ನಟಿಯ ತಾಯಿ

ತಡರಾತ್ರಿ ಬೀದಿಯಲ್ಲಿ ರಾಜಾರೋಷವಾಗಿ ಬರುತ್ತಿರುವ ಸಿಂಹವನ್ನು ನಾಯಿಗಳ ಗುಂಪು ಅಟ್ಟಾಡಿಸಿ ಓಡಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.

ಗುಜರಾತ್ ನ ಗಿರ್ ಸೋಮನಾಥ್ ಗ್ರಾಮವೊಂದಕ್ಕೆ ತಡರಾತ್ರಿ ಸಿಂಹವೊಂದು ಬಂದಿದ್ದು, ಅದು ರಸ್ತೆಯಲ್ಲಿ ತಿರುಗಾಡುತ್ತಿದ್ದ ವೇಳೆ ನಾಯಿಗಳ ಗುಂಪು “ಕಾಡಿನ ರಾಜ”ನನ್ನು ಬೆನ್ನಟ್ಟಿ ಓಡಿಸಿದ್ದು, ಸಿಂಹ ಕಾಲ್ಕಿತ್ತಿರುವುದು ವಿಡಿಯೋದಲ್ಲಿದೆ.

Advertisement

ಐಎಫ್ ಎಸ್ ಅಧಿಕಾರಿ ಸುರೇಂದ್ರ ಮೆಹ್ರಾ ಅವರು ಈ ವಿಡಿಯೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ವಿಡಿಯೋದಲ್ಲಿ ಭೂ ಗಡಿ ಪ್ರದೇಶದ ಬಗ್ಗೆ ಉಲ್ಲೇಖಿಸಿದ್ದು, ಪ್ರಾಣಿಗಳು ಕೂಡಾ ತಮ್ಮ ಪ್ರದೇಶವನ್ನು ಹೇಗೆ ರಕ್ಷಿಸಿಕೊಳ್ಳುತ್ತಿವೆ ಎಂಬುದಾಗಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next