Advertisement

ಮೊಲವು ನೀರಿನಲ್ಲಿ ಈಜುವುದನ್ನು ನೋಡಿದ್ದೀರಾ? : ಇಲ್ಲಿದೆ ವಿಡಿಯೋ

11:30 AM Apr 25, 2021 | Team Udayavani |

ನವದೆಹಲಿ : ಮೊಲಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸೌಮ್ಯ ಸ್ವಭಾವದ ಈ ಪ್ರಾಣಿಯನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಸಾಮಾನ್ಯವಾಗಿ ಬರೀ ನೆಲದ ಮೇಲೆ ವಾಸಿಸುವ ಮೊಲಕ್ಕೆ ನೀರು ಅಂದ್ರೆ ಭಯ ಎಂಬ ವಿಚಾರ ನಿಮಗೆ ಗೊತ್ತೇ ಇದೆ. ಈ ಪ್ರಾಣಿ ತನಗೆ ಆಪತ್ತು ಬಂದಾಗ ಮಾತ್ರ  ನೀರಿನಲ್ಲಿ ಈಜುತ್ತದೆ. ಆದ್ರೆ ಸದ್ಯ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಮೊಲ ನೀರಿನಲ್ಲಿ ಈಜುತ್ತ ಎಂಜಾಯ್ ಮಾಡುತ್ತಿದೆ.

Advertisement

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಿಳಿ ಬಣ್ಣದ ಮೊಲವೊಂದು ನೀರಿನಲ್ಲಿ ಈಜುತ್ತಿದೆ. ಈ ವಿಡಿಯೋವನ್ನು ನೇಚರ್ ಅಂಡ್ ಅನಿಮಲ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವಿಡಿಯೋಕ್ಕೆ ಕ್ಯಾಪ್ಶನ್ ಬರೆದಿದ್ದು, ಮೊಲವು ಈಜುತ್ತಿರುವ ವಿಡಿಯೋವನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿರುವುದು ಎಂದು ಬರೆಯಲಾಗಿದೆ.

ಮತ್ತೊಂದು ವಿಡಿಯೋವನ್ನು ನೇಚರ್ ಅಂಡ್ ಅನಿಮಲ್ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಅದರಲ್ಲಿ ಕಂದು ಬಣ್ಣದ ಮೊಲವು ನೀರಿನಲ್ಲಿ ಸ್ವತಂತ್ರವಾಗಿ ಈಜುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next