Advertisement

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

10:53 AM Jun 06, 2023 | Team Udayavani |

ಪಾಟ್ನಾ: ಪ್ರೀತಿಸಿ ಮದುವೆಯಾದ ಯುವತಿಯನ್ನು ತನ್ನ ಸಹೋದರರೇ ಗಂಡನ ಮನೆಯಿಂದ ಬಲವಂತವಾಗಿ ಕರೆದುಕೊಂಡು ಬಂದಿರುವ ಘಟನೆಯ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Advertisement

ಬಿಹಾರದ ಅರಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಯುವತಿ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆಯಾಗಿದ್ದಾಳೆ. ಇದು ಅಂತರ್ಜಾತಿ ವಿವಾಹವಾಗಿದ್ದರಿಂದ ಯುವತಿಯ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಇದರಿಂದ ಮನೆತನದ ಘನತೆಗೆ ಹಾನಿ ಆಗಿದ್ದು, ಇದೇ ಮುಜುಗರದಿಂದ ಯುವತಿ ಮನೆಯವರು ಇದ್ದರು.

ಇದನ್ನೂ ಓದಿ: Gujarat: ಕ್ರಿಕೆಟ್‌ ಬಾಲ್‌ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

ಆದರೆ ಮದುವೆಯಾಗಿ ಕೆಲವೇ ದಿನಗಳು ಆಗಿವೆ ಅಷ್ಟೇ. ಯುವತಿಯ ಸಹೋದರರು, ಆಕೆಯ ಗಂಡನ ಮನೆಗೆ ತೆರಳಿದ್ದಾರೆ. ಅಲ್ಲಿ ಒಂದಷ್ಟು ಸಮಯ ಗಲಾಟೆ ನಡೆದಿದೆ. ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ಈ ನಡುವೆಯೇ ಯುವತಿಯ ಸಹೋದರರು ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಬೈಕ್‌ ನಲ್ಲಿ ಕರೆದುಕೊಂಡು ಸೀದಾ ಮನೆಗೆ ತೆರಳಿದ್ದಾರೆ. ಯುವತಿ ಕಿರುಚಿಕೊಂಡರು ಆಕೆಯ ಸಹೋದರರು ಅದನ್ನು ಕೇಳದೆ ಬೈಕ್‌ ನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.

ಈ ಸಂಬಂಧ ಗಂಡನ ಮನೆಯವರು ಭೀತಿಯಿಂದ ದೂರು ನೀಡಿದ್ದು, ಆಕೆಯ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಸದ್ಯ ಈ ಸಂಬಂಧ ತನಿಖೆ ನಡೆಯುತ್ತಿದೆ.

Advertisement

ಘಟನೆಯ ವಿಡಿಯೋ ಸಿನಿಮೀಯ ರೀತಿ ಇದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next