Advertisement

Puttur: ಬಾಲ್ಯ ವಿವಾಹಕ್ಕೆ ಉತ್ತೇಜನೆ: ಪ್ರಕರಣದಿಂದ ವಿಮೋಚನೆ  

07:50 PM Apr 16, 2024 | Team Udayavani |

ಪುತ್ತೂರು: ಬಾಲ್ಯ ವಿವಾಹಕ್ಕೆ ಉತ್ತೇಜಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೀಡಿದ್ದ ದೂರಿನ ಮೇರೆಗೆ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿದ್ದವರನ್ನು ಪೂರ್ಣಪ್ರಮಾಣದ ತನಿಖೆಯ ಮೊದಲೇ ಪುತ್ತೂರು ನ್ಯಾಯಾಲಯವು ಪ್ರಕರಣದಿಂದ ವಿಮೋಚನೆಗೊಳಿಸಿದೆ.

Advertisement

ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ. ಹೆಗಡೆ ನೀಡಿದ್ದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018ನ ನ. 14ರಂದು ಉಪ್ಪಿನಂಗಡಿ ನೆಕ್ಕಿಲಾಡಿ ಆದರ್ಶ ನಗರದ ಸುಲೇಮಾನ್‌ ಅವರ ಪುತ್ರ ಮಹಮದ್‌ ಸಾದಿಕ್‌ ಜತೆ ಪುತ್ತೂರು ಕೂರ್ನಡ್ಕ ಮಸೀದಿಯ ಮೌಲಿಯಾದ ಬಂಬ್ರಾನ್‌ ಉಸ್ತಾದ್‌ ಅವರ ಅಪ್ರಾಪ್ತ ವಯಸ್ಸಿನ ಬಾಲಕಿಯ ನಿಖಾ ಶಾಸ್ತ್ರವನ್ನು ನೆರವೇರಿಸಿ ಬಾಲ್ಯ ವಿವಾಹವನ್ನು ನಡೆಸಿರುತ್ತಾರೆ ಎಂದು ಬಾಲಕಿಯ ಮಲತಾಯಿಯ ದೂರಿನ ಹಿನ್ನೆಲೆಯಲ್ಲಿ ಅಂದಿನ ಸಿಡಿಪಿಒ ಅವರು ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ದೂರನ್ನು ಸಲ್ಲಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ತನಿಖಾಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಈ ನಡುವೆ ಆರೋಪಿಗಳು ತಮ್ಮ ಪರ ವಕೀಲರ ಮುಖಾಂತರ ಪ್ರಕರಣದಿಂದ ವಿಮೋಚನೆ (ಡಿಸ್ಟಾರ್ಜ್‌) ಮಾಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರಕಾರಿ ಅಭಿಯೋಜಕರು ತಕರಾರು ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಪ್ರಕರಣದಲ್ಲಿ ಆರೋಪಿಸಲಾದ ಆರೋಪವು ಆಧಾರ ರಹಿತವಾದದ್ದು, ಆ ದಿನ ದೂರಿನಂತೆ, ಕೇವಲ ನಿಶ್ಚಿತಾರ್ಥ ಮಾತ್ರ ನೆರವೇರಿದ್ದು ಬಾಲ್ಯ ವಿವಾಹ ನೆರವೇರಿರುವುದಿಲ್ಲ. ಮದುವೆ ನಡೆದಿದೆ ಎನ್ನುವುದಕ್ಕೆ ದಾಖಲೆ ಇರುವುದಿಲ್ಲ, ಅಭಿಯೋಜನೆಯು ಈ ಪ್ರಕರಣವನ್ನು ಸಂಶಯಾತೀತವಾದದ್ದು ಎಂದು ನಿರೂಪಿಸಲು ವಿಫಲವಾಗಿರುತ್ತದೆ ಎಂದು ಹೇಳಿ ಆರೋಪಿಗಳಾದ ಹಾಜಿ ಯು.ಟಿ ಅಬ್ದುಲ್‌ ಅಜೀಜ್‌, ಹಾಜಿರ, ಇಬ್ರಾಹಿಂ ಚಾಪಳ್ಳ, ಸುಲೇಮಾನ್‌, ಅಪ್ಪಾ, ಮೊಹಮ್ಮದ್‌ ಸಾದಿಕ್‌  ಅವರನ್ನು ಪ್ರಕರಣದಿಂದ ವಿಮೋಚನೆಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next