ಬಾರ್ಮರ್ (ರಾಜಸ್ಥಾನ): ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಸೋಮವಾರ ವಿಶಿಷ್ಟ ಮದುವೆ ಮೆರವಣಿಗೆ ನಡೆದಿದ್ದು, ಇದರ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದ ವಿವಾಹ ಮೆರವಣಿಗೆಯೊಂದರಲ್ಲಿ 51 ಟ್ರ್ಯಾಕ್ಟರ್‌ಗಳು 51 ಕಿ.ಮೀ ಮೆರವಣಿಗೆ ನಡೆಸಿದೆ. ಆ ಪೈಕಿ ಒಂದು ಟ್ರ್ಯಾಕ್ಟರ್‌ನ್ನು ವರನೇ ಓಡಿಸಿದ್ದು ಎಲ್ಲರ ಗಮನ ಸೆಳೆದಿದೆ.
ʻನನ್ನ ಮದುವೆ ಮೆರಣಿಗೆಯಲ್ಲಿ ಒಂದು ಟ್ರ್ಯಾಕ್ಟರ್ ಬಳಸಲಾಗಿತ್ತು. ನನ್ನ ಮಗನ ಮದುವೆ ಹೆಚ್ಚು ವಿಶಿಷ್ಟವಾಗಿರಲೆಂದು 51 ಟ್ರ್ಯಾಕ್ಟರ್ ಬಳಸಿದ್ದೇವೆʼ ಎಂದು ವರನ ತಂದೆ ಹೇಳಿದ್ದಾರೆ.
ರಾಜಸ್ಥಾನದ ಗುಡಮಳನಿ ಗ್ರಾಮದ ಪ್ರಕಾಶ್ ಚೌಧರಿ ಎಂಬಾತ ರೋಲಿ ಗ್ರಾಮದ ಮಮತಾ ಎಂಬವರನ್ನು ಸೋಮವಾರ ಬೆಳಗ್ಗೆ ವರಿಸಿದ್ದರು. ಈ ವೇಳೆ ವರನ ಮನೆಯಿಂದ 51 ಕಿ.ಮೀ ದೂರದಲ್ಲಿರುವ ರೋಲಿ ಗ್ರಾಮದ ವಧುವಿನ ಮನೆಗೆ ಮದುವೆ ದಿಬ್ಬಣದ ಮೆರವಣಿಗೆ ನಡೆದಿದೆ. 51 ಟ್ರ್ಯಾಕ್ಟರ್‌ನಲ್ಲಿ ಬಂಧು-ಮಿತ್ರರಯು ಸೇರಿ 200 ಮಂದಿ ಮೆರವಣಿಗೆಯಲ್ಲಿ ಸಾಗಿದ್ದಾರೆ.
ʻಕೃಷಿ ನಮ್ಮ ಕುಟುಂಬದ ಪ್ರಮುಖ ವೃತ್ತಿ. ನಮ್ಮಲ್ಲಿ ಪ್ರತಿಯೊಬ್ಬರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಟ್ರ್ಯಾಕ್ಟರ್ ಕೃಷಿಯ ಹೆಗುರುತಾಗಿದೆ. ನನ್ನ ತಂದೆಯ ಮದುವೆಗೆ ಒಂದು ಟ್ರ್ಯಾಕ್ಟರ್ ಬಳಸಲಾಗಿತ್ತು. ನ್ನನ ಮದುವಗೇಕೆ 51 ಟ್ರ್ಯಾಕ್ಟರ್ ಬಳಸಬಾರದು ಎಂಬುದಾಗಿ ನನ್ನ ತಂದೆ ಯೋಚಿಸಿದ್ದರು ಎಂಬುದಾಗಿ ವರ ಪ್ರಕಾಶ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ: ‘ದೇಶಕ್ಕೆ ಮೋದಿ- ಮಹಾರಾಷ್ಟ್ರಕ್ಕೆ ಶಿಂಧೆ’; ಮೂಲೆಗುಂಪಾದರೆ ಫಡ್ನವಿಸ್? ಏನಿದು ಜಾಹೀರಾತು?