Advertisement
ಹಿಂದಿ ಭಾಷೆಯಲ್ಲಿ ರಚಿಸಿದ ಎಂಬಿಬಿಎಸ್ ಮೊದಲನೇ ವರ್ಷದ ಪಠ್ಯ ಪುಸ್ತಕಗಳನ್ನು ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆಗೊಳಿಸಿದರು. ಇದರ ಬೆನ್ನಲ್ಲೇ ಅದೇ ದಿನ ಸಟ್ನಾ ಜಿಲ್ಲೆಯ ಕೊಟಾರ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಸರ್ವೇಶ್ ಸಿಂಗ್ ಹಿಂದಿಯಲ್ಲಿ ಬರೆದ ಔಷಧ ಚೀಟಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಪಠ್ಯ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಲೈವ್‌ನಲ್ಲಿ ವೀಕ್ಷಿಸಿದೆ. ನಾನು ಇದನ್ನು ಇಂದಿನಿಂದಲೇ ಅನುಸರಿಸಲು ತೀರ್ಮಾನಿಸಿ, ಔಷಧ ಚೀಟಿಯಲ್ಲಿ ಆರ್‌ಎಕ್ಸ್ ಬದಲಾಗಿ “ಶ್ರೀ ಹರಿ’ ಎಂದು ಹಾಗೂ ಔಷಧಗಳ ಹೆಸರನ್ನು ಹಿಂದಿಯಲ್ಲಿ ಬರೆಯಲು ಆರಂಭಿಸಿದ್ದಾನೆ,’ ಎಂದು ಡಾ. ಸರ್ವೇಶ್ ತಿಳಿಸಿದ್ದಾರೆ.