Advertisement
ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳು ಬಹುಬೇಗ ವೈರಾಣು ಜ್ವರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ವೈರಾಣು ಜ್ವರ ಒಬ್ಬರಿಂದೊಬ್ಬರಿಗೆ ಹರಡುವುದರಿಂದ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪರೀಕ್ಷಾ ಸಮಯದಲ್ಲೇ ಮಕ್ಕಳು ಜ್ವರದಿಂದ ಬಳಲುತ್ತಿರುವುದು ಪೋಷಕರಲ್ಲೂ ಆತಂಕ ಮೂಡಿಸಿದೆ.
Related Articles
Advertisement
ಬೌರಿಂಗ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆದವರ ಸಂಖ್ಯೆ ಶೇ.30ರಷ್ಟು ಹೆಚ್ಚಾಗಿದೆ. ಖಾಸಗಿ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸಂಖ್ಯೆ ಶೇ.50ರಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ವೈರಾಣು ಜ್ವರಕ್ಕೆ ನಿರ್ದಿಷ್ಟ ಔಷಧವಿರುವುದಿಲ್ಲ. ಆರಂಭದಲ್ಲೇ ಜ್ವರ ಪತ್ತೆಯಾದರೆ ಸಾಧಾರಣ ಜ್ವರದ ಮಾತ್ರೆ ನೀಡಿ ಗುಣಪಡಿಸಬಹುದು. ಜ್ವರ ಉಲ್ಪಣಿಸಿದರೆ ಗುಣವಾಗುವಾಗುವುದು ತಡವಾಗುತ್ತದೆ.
ಜ್ವರದ ತೀವ್ರತೆ* ಉಸಿರಾಟದ ತೊಂದರೆ ನೆಗಡಿ, ಕೆಮ್ಮು, ಮೈಕೈ ನೋವು, 2-3 ದಿನ ವಿಪರೀತ ಜ್ವರ
* ಅಜೀರ್ಣದಿಂದಾಗಿ ವಾಂತಿ, ಭೇದಿ, ಹೊಟ್ಟೆ ನೋವು
* ವಿಪರೀತ ಜ್ವರ, ಮೈಮೇಲೆಲ್ಲಾ ಗುಳ್ಳೆಗಳು ಮೂಡುವುದು ಮುನ್ನಚ್ಚರಿಕೆ ಕ್ರಮ: ಮಕ್ಕಳಿಗೆ ವೈರಾಣು ಜ್ವರ ಕಾಣಿಸಿಕೊಂಡರೆ ತಕ್ಷಣ ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಬೇಕು. ಜ್ವರದಿಂದ ಬಳಲುವವರು ಬಳಸುವ ಕರವಸ್ತ್ರ, ಟವಲ್ ಇತರೆ ವಸ್ತ್ರಗಳನ್ನು ಇತರರು ಬಳಸದಂತೆ ಎಚ್ಚರ ವಹಿಸಬೇಕು. ಕೈಗಳನ್ನು ಸ್ವತ್ಛವಾಗಿ ತೊಳೆದುಕೊಂಡು ತಿಂಡಿ, ಊಟ ಸೇವಿಸಬೇಕು. ಕುದಿಸಿ ಆರಿಸಿದ ನೀರು ಸೇವನೆ ಸೂಕ್ತ. ಬಿಸಿ ಆಹಾರ ಪದಾರ್ಥ ಸೇವನೆ ಒಲಿತು. ಹವಾಮಾನ ಬದಲಾವಣೆಯಾದಾಗ ಸಹಜವಾಗಿ ವೈರಾಣು ಜ್ವರ ಕಾಣಿಸಿಕೊಳ್ಳುತ್ತದೆ. ಸದ್ಯ ದಿನದ ವಾತಾವರಣದಲ್ಲಿ ಚಳಿ, ತೀವ್ರ ಬಿಸಿಲಿನಿಂದಾಗಿ ಜ್ವರ ಕಾಣಿಸಿಕೊಳ್ಳಬಹುದು. ಬಿಸಿಲಿನ ತೀವ್ರತೆಯಿಂದ ದಾಹವಾದಾಗ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಎಚ್ಚರ ವಹಿಸುವುದು ಮುಖ್ಯ. ಹಣ್ಣಿನ ರಸ, ಐಸ್‌ಕ್ರೀಮ್ ಸೇವಿಸುವಾಗಲೂ ಎಚ್ಚರಿಕೆ ಮುಖ್ಯ.
-ಡಾ. ಬಿ.ಜಿ.ಪ್ರಕಾಶ್ ಕುಮಾರ್, ಉಪನಿರ್ದೇಶಕರು, ಆರೋಗ್ಯ ಇಲಾಖೆ