ಬೆಂಗಳೂರು: ಇದು ಇಂಟರ್ ನೆಟ್ ಯುಗ. ನಮ್ಮ ಪ್ರತಿಭೆಯನ್ನು ತೋರಿಸಲು ಇನ್ಸ್ಟಾಗ್ರಾಮ್, ಯೂಟ್ಯೂಬ್ ನಂತಹ ಫ್ಲಾಟ್ ಫಾರ್ಮ್ ಗಳಿವೆ. ಇತ್ತೀಚೆಗೆ ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಯೂಟ್ಯೂಬ್ ಚಾನೆಲ್ ಕುರಿತು ಮಾಹಿತಿಯನ್ನು ಹಾಕಿದ ಫೋಟೋ ವೈರಲ್ ಆಗಿತ್ತು. ಇದೀಗ ಅಂಥದ್ದೇ ಮತ್ತೊಂದು ಫೋಟೋ ವೈರಲ್ ಆಗಿದೆ.
ಬೆಂಗಳೂರಿನ ಬೆಳ್ಳಂದೂರುನಲ್ಲಿನ ರಸ್ತೆಯಲ್ಲಿ ಗಾಡಿಯೊಂದರಲ್ಲಿ ಜ್ಯೂಸ್ ವ್ಯಾಪಾರ ಮಾಡುವ ಕುಂಕುಮ್ ಮೃಧ ಜ್ಯೂಸ್ ಮಾರಾಟವನ್ನು ಮಾಡುವುದರ ಜೊತೆ ತಮ್ಮ ಯೂಟ್ಯೂಬ್ ಚಾನೆಲ್ ನ್ನು ಹೊಂದಿದ್ದಾರೆ.
ಇದನ್ನೂ ಓದಿ: ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ
ಕೇಶವ್ ಲೋಹಿಯಾ ಎಂಬ ಟ್ವಿಟರ್ ಬಳಕೆದಾರರೊಬ್ಬರು ಈ ಕುರಿತು ಮಾಹಿತಿ ಹಾಗೂ ಫೋಟೋವನ್ಬು ಹಂಚಿಕೊಂಡಿದ್ದಾರೆ. ಒಂದು ಕಡೆ ಜ್ಯೂಸ್ ಗೆ 40 ರೂ. ಎಂದು ಬರೆದು ಕ್ಯೂಆರ್ ಸ್ಕ್ಯಾನರ್ ಇಟ್ಟಿದ್ದು, ಇನ್ನೊಂದೆಡೆ ಮತ್ತೊಂದು ಕ್ಯೂಆರ್ ಸ್ಕ್ಯಾನರ್ ಇದೆ. ಅದು ಕುಂಕುಮ್ ಮೃಧ ಯೂಟ್ಯೂಬ್ ಚಾನೆಲ್ ನ ಸ್ಕ್ಯಾನರ್.
ಕುಂಕುಮ್ ಮೃಧ ಅವರ ಯೂಟ್ಯೂಬ್ ಚಾನೆಲ್ ನಲ್ಲಿ 2 ಸಾವಿರ ಸಬ್ ಸ್ಕ್ರೈಬರ್ಸ್ ಇದ್ದು, ವಿವಿಧ ಬಗೆಯ ಅಡುಗೆ ಹಾಗೂ ಜ್ಯೂಸ್ ಮಾಡುವ ವಿಧಾನದ ಕುರಿತು ವಿಡಿಯೋ ಇವರ ಚಾನೆಲ್ ನಲ್ಲಿ ಇದೆ.
ನೆಟ್ಟಿಗರು ಕುಂಕುಮ್ ಮೃಧ ಅವರ ಯೂಟ್ಯೂಬ್ ಚಾನೆಲ್ ಕುರಿತು ಖುಷಿ ವ್ಯಕ್ತಪಡಿಸಿದ್ದಾರೆ.